Home Mangalorean News Kannada News ಮಣಿಪಾಲ: ಮನೆ ಹಾಗೂ ಲ್ಯಾಪ್ ಟಾಪ್ ಕಳ್ಳತನ – ಓರ್ವನ ಬಂಧನ

ಮಣಿಪಾಲ: ಮನೆ ಹಾಗೂ ಲ್ಯಾಪ್ ಟಾಪ್ ಕಳ್ಳತನ – ಓರ್ವನ ಬಂಧನ

Spread the love

ಮಣಿಪಾಲ: ಮನೆ ಹಾಗೂ ಲ್ಯಾಪ್ ಟಾಪ್ ಕಳ್ಳತನ – ಓರ್ವನ ಬಂಧನ

ಉಡುಪಿ : ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಮನೆ ಕಳ್ಳತನ ಹಾಗೂ ಲ್ಯಾಪ್ ಟಾಪ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಮಣಿಪಾಲ ಪೊಲೀಸರು ಒರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಹೊಯ್ಗೆಪದವು ಗ್ರಾಮದ ಯೋಗೀಶ್ ತಂದೆ ಚಿನ್ನಯ್ಯ ಮೂಲ್ಯ ಎಂದು ಗುರುತಿಸಲಾಗಿದೆ.

ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಮನೆ ಕಳ್ಳತನ ಹಾಗೂ ಲ್ಯಾಪ್ ಟಾಪ್ ಕಳ್ಳತನ ಪ್ರಕರಣಗಳು ವರದಿಯಾಗಿದ್ದು ಅವುಗಳನ್ನು ಪತ್ತೆ ಹಚ್ಚುವ ಸಲುವಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರರವರ ನಿರ್ದೇಶನದಲ್ಲಿ ತಂಡ ರಚನೆ ಮಾಡಲಾಗಿತ್ತು .

ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ ಆರ್ ಜೈ ಶಂಕರ್ ರವರ ಮಾರ್ಗದರ್ಶನದಲ್ಲಿ ನವೆಂಬರ್ 6 ರಂದು ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಹೊಯ್ಗೆಪದವು ಗ್ರಾಮದ ಯೋಗೀಶ್ ತಂದೆ ಚಿನ್ನಯ್ಯ ಮೂಲ್ಯ ಎಂಬವನನ್ನು ಮಣಿಪಾಲ ಸಮೀಪದ ಪೆರಂಪಳ್ಳಿ ಬಳಿ ದಸ್ತಗಿರಿ ಮಾಡಿ ಮಣಿಪಾಲ ಪೊಲೀಸ್ ಠಾಣೆಯ ವಿವಿಧ ಪ್ರಕರಣಗಳಲ್ಲಿ ಕಳವಾಗಿದ್ದ 133 ಗ್ರಾಂ ಚಿನ್ನಾಭರಣಗಳು, 5 ಲ್ಯಾಪ್ ಟಾಪ್ ಹಾಗೂ 1 ಲಕ್ಷ ರೂಪಾಯಿ ನಗದು ಹಣ ಮತ್ತು ಪ್ರಕರಣಕ್ಕೆ ಬಳಸಿದ ಮೋಟಾರ್ ಸೈಕಲ್ ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 6,65,000/- ಆಗಬಹುದು.

ಈ ಕಾರ್ಯಾಚರಣೆಯಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಎಂ , ಪ್ರೋಬೇಷನರಿ ಪಿಎಸ್ಐ ರಾಜಶೇಖರ್ ವಂದಲಿ, ಸುಮಾ. ಬಿ., ಎಎಸ್ಐ ಶೈಲೇಶ್ ಹಾಗೂ ಸಿಬ್ಬಂದಿಯವರಾದ ದಯಾಕರ್ ಪ್ರಸಾದ್, ಅಬ್ದುಲ್ ರಜಾಕ್, ಥಾಮ್ಸನ್ ಜಡ್ಕಲ್, ಪ್ರಸನ್ನ, ಆದರ್ಶ, ಹೋಮ್ ಗಾರ್ಡ್ ಶ್ರೀನಿವಾಸ ಶೆಟ್ಟಿಗಾರ್ ಹಾಗೂ ಚಾಲಕ ಸುದೀಪ್ ರವರು ಭಾಗವಹಿಸಿರುತ್ತಾರೆ.


Spread the love

Exit mobile version