Home Mangalorean News Kannada News ಮಲ್ಪೆಯಲ್ಲಿ ಮಹಿಳೆಯ ಮೇಲೆ ಅಮಾನುಷ ಹಲ್ಲೆ ಖಂಡನೀಯ – ಪ್ರೀತಿ ಸಾಲಿನ್ಸ್

ಮಲ್ಪೆಯಲ್ಲಿ ಮಹಿಳೆಯ ಮೇಲೆ ಅಮಾನುಷ ಹಲ್ಲೆ ಖಂಡನೀಯ – ಪ್ರೀತಿ ಸಾಲಿನ್ಸ್

Spread the love

ಮಲ್ಪೆಯಲ್ಲಿ ಮಹಿಳೆಯ ಮೇಲೆ ಅಮಾನುಷ ಹಲ್ಲೆ ಖಂಡನೀಯ – ಪ್ರೀತಿ ಸಾಲಿನ್ಸ್

ಉಡುಪಿ: ಮಲ್ಪೆಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆಗೈದ ಘಟನೆ ಖಂಡನೀಯವಾಗಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ರ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಪ್ರೀತಿ ಸಾಲಿನ್ಸ್ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಮಹಿಳೆಯು ಮೀನು ಕದ್ದ ಆರೋಪದಡಿಯಲ್ಲಿ ಮರಕ್ಕೆ ಕಟ್ಟಿ ಹೊಡೆಯುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಇಂತಹ ಘಟನೆ ಸುಶಿಕ್ಷಿತರಾದ ಉಡುಪಿ ಜಿಲ್ಲೆಯಲ್ಲಿ ನಡೆದಿದರುವುದು ನಾಚಿಕೆಗೇಡಿನ ಸಂಗತಿಯಾಗಿದೆ.  ಒಂದು ವೇಳೆ ಮಹಿಳೆ ತಪ್ಪು ಮಾಡಿದಲ್ಲಿ ಆಕೆಯನ್ನು ಪೋಲಿಸರಿಗೆ ಒಪ್ಪಿಸುವುದನ್ನು ಬಿಟ್ಟು ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವುದು ಖಂಡನೀಯ. ಈ ದೇಶದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ವಿಧಿಸಲು ಕಾನೂನು ವ್ಯವಸ್ಥೆ ಇದ್ದು ಅದನ್ನು ಜನಸಾಮಾನ್ಯರು ಕೈಗೆತ್ತಿಕೊಂಡು ಹಲ್ಲೆ ನಡೆಸಿರುವುದು ಸರಿಯಾದ ಕ್ರಮವಲ್ಲ. ಇಂತಹ ವರ್ತನೆ ತೋರಿದ ವ್ಯಕ್ತಿಗಳ ವಿರುದ್ದ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


Spread the love

Exit mobile version