ಮಲ್ಪೆ: ನಾಡದೋಣಿ ಮಗುಚಿ ಬಿದ್ದು ಮೀನುಗಾರ ಮೃತ್ಯು
ಉಡುಪಿ: ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿಬಿದ್ದು ಮೀನುಗಾರ ಮೃತಪಟ್ಟ ಘಟನೆ ಪಡುಕೆರೆಯಲ್ಲಿ ಶುಕ್ರವಾರ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಉದ್ಯಾವರ ಪಿತ್ರೋಡಿ ನಿವಾಸಿ ನೀಲಾಧರ (48) ಎಂದು ಗುರುತಿಸಲಾಗಿದೆ.
ಲೀಲಾಧರ್ ಅವರು ಇತರ ಮೀನುಗಾರರೊಂದಿಗೆ ನಾಡದೋಣಿ ಮೀನುಗಾರಿಕೆಗಾಗಿ ತೆರಳಿದ್ದು ಸಮುದ್ರದಲ್ಲಿ ಬಲೆಯನ್ನು ಬೀಸುವ ಸಮಯದಲ್ಲಿ ಸಮುದ್ರದ ಅಲೆಯ ಹೊಡೆತಕ್ಕೆ ನಾಡದೋಣಿ ಮಗುಚಿಬಿದ್ದಿದ್ದು ದೋಣಿಯ ಆಡಿ, ಬಲೆಗಳ ನಡುವೆ ಸಿಲುಕಿ ನೀಲಾಧರ ಅವರು ಮೃತಪಟ್ಟಿರುತ್ತಾರೆ. ನೀಲಾಧರ್ ಅವರ ಮೃತದೇಹ ಸಮುದ್ರದಿಂದ ಮೇಲಕ್ಕೆತ್ತಿದ್ದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ದೋಣಿಯ್ಲಲಿದ್ದ ಇತರ ನಾಲ್ಕು ಮಂದಿ ಮೀನುಗಾರರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ