Home Mangalorean News Kannada News ಮಲ್ಪೆ ಮಂಜುನಾಥ ಸಾಲ್ಯಾನ್ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲು ಖಂಡನಾರ್ಹ : ಯಶ್ಪಾಲ್ ಸುವರ್ಣ

ಮಲ್ಪೆ ಮಂಜುನಾಥ ಸಾಲ್ಯಾನ್ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲು ಖಂಡನಾರ್ಹ : ಯಶ್ಪಾಲ್ ಸುವರ್ಣ

Spread the love

ಮಲ್ಪೆ ಮಂಜುನಾಥ ಸಾಲ್ಯಾನ್ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲು ಖಂಡನಾರ್ಹ : ಯಶ್ಪಾಲ್ ಸುವರ್ಣ

ಉಡುಪಿ: ಹಿಂದೂ ಯುವ ಸೇನೆ ಮಾಜಿ ಜಿಲ್ಲಾಧ್ಯಕ್ಷ ಮಂಜುನಾಥ ಸಾಲ್ಯಾನ್ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲು ಮಾಡಿದ ಪೋಲಿಸ್ ಇಲಾಖೆಯ ನಡೆಯನ್ನು ಉಡುಪಿ ಯಶ್ ಪಾಲ್ ಸುವರ್ಣ ಖಂಡಿಸಿದ್ದಾರೆ.

ಮೊನ್ನೆ ಮಲ್ಪೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಘಟನೆಯ ಬಗ್ಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿದ್ದ ಮಂಜುನಾಥ ಸಾಲ್ಯಾನ್ ರವರ ವಿರುದ್ಧ ಕೇಸ್ ದಾಖಲು ಮಾಡಿ ಬೆದರಿಸುವ ಕೆಲಸಕ್ಕೆ ಇಲಾಖೆ ಮುಂದಾಗಿದೆ.

ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿ ಪೊಲೀಸ್ ಇಲಾಖೆ ದಿನಂಪ್ರತಿ ಪ್ರತಿಭಟನೆಯಲ್ಲಿ ಭಾಗಿಯಾದ ವ್ಯಕ್ತಿಗಳ ಮೇಲೆ ಸ್ವಯಂಪ್ರೇರಿತ ಕೇಸುಗಳನ್ನು ದಾಖಲಿಸುವ ಮೂಲಕ ತಾಳ್ಮೆ ಪರೀಕ್ಷೆಗೆ ಮುಂದಾಗಿದ್ದು, ಪೋಲಿಸ್ ಇಲಾಖೆ ತಕ್ಷಣ ಈ ಕೇಸುಗಳನ್ನು ಹಿಂಪಡೆಯುವಂತೆ ಅಗ್ರಹಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version