Home Mangalorean News Kannada News ಮೀಟು ಆರೋಪ ಮಾಡಿದ್ದ ಅಂಡಮಾನ್ ಮೂಲದ ಯುವತಿ ಬೆಂಗಳೂರಿನ ಪಿಜಿಯಲ್ಲಿ ಆತ್ಮಹತ್ಯೆ

ಮೀಟು ಆರೋಪ ಮಾಡಿದ್ದ ಅಂಡಮಾನ್ ಮೂಲದ ಯುವತಿ ಬೆಂಗಳೂರಿನ ಪಿಜಿಯಲ್ಲಿ ಆತ್ಮಹತ್ಯೆ

Spread the love

ಮೀಟು ಆರೋಪ ಮಾಡಿದ್ದ ಅಂಡಮಾನ್ ಮೂಲದ ಯುವತಿ ಬೆಂಗಳೂರಿನ ಪಿಜಿಯಲ್ಲಿ ಆತ್ಮಹತ್ಯೆ

ಬೆಂಗಳೂರು: ವಾರದ ಹಿಂದೆಯಷ್ಟೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಅಂಡಮಾನ್ ನಿಕೋಬಾರ್ ಮೂಲದ ಯುವತಿ ಬೆಂಗಳೂರಿನ ಮಲ್ಲೇಶ್ವರಂ 8ನೇ ಕ್ರಾಸ್ ನ ಬಳಿಯಿರುವ ಲುಕುವಾ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಯುವತಿಯ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.

ಅಂಡಮಾನ್ ನಿಕೋಬಾರ್ ಮೂಲದ ಯುವತಿ ಪುಷ್ಪ್​ ಅರ್ಚನಾ ಲಾಲ್ (26) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಹೈಕೋರ್ಟ್​ನ ಸರ್ಕಾರಿ ಅಭಿಯೋಜಕ ಚೇತನ್ ದೇಸಾಯಿ‌ ಮತ್ತು ಚಂದ್ರನಾಯಕ್ ಎಂಬುವರು ವಿರುದ್ಧ ಅರ್ಚನಾ ಕಳೆದ ವಾರ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದಡಿ ಪ್ರಕರಣ ದಾಖಲಿಸಿದ್ದರು.


Spread the love

Exit mobile version