Home Mangalorean News Kannada News ಮೀನುಗಾರರ ಬೇಡಿಕೆ ಈಡೇರಿಸಿದ ಕೇಂದ್ರ ಬಜೆಟ್ – ಯಶ ಪಾಲ್ ಸುವರ್ಣ

ಮೀನುಗಾರರ ಬೇಡಿಕೆ ಈಡೇರಿಸಿದ ಕೇಂದ್ರ ಬಜೆಟ್ – ಯಶ ಪಾಲ್ ಸುವರ್ಣ

Spread the love

ಮೀನುಗಾರರ ಬೇಡಿಕೆ ಈಡೇರಿಸಿದ ಕೇಂದ್ರ ಬಜೆಟ್ – ಯಶ ಪಾಲ್ ಸುವರ್ಣ

ಉಡುಪಿ: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸಿ ಬಜೆಟಿನಲ್ಲಿ ಮೀನುಗಾರರ ಬೇಡಿಕೆ ಈಡೇರಿಸುವ ಕೆಲಸ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ ಹೇಳಿದ್ದಾರೆ.

ಮೀನುಗಾರಿಕಾ ವಲಯದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಘೋಷಿಸುವ ಮೂಲಕ ಮೀನುಗಾರರಲ್ಲಿ ಹೊಸ ಭರವಸೆ ಮೂಡಿದೆ. ಪ್ರಸ್ತುತ ಬಜೆಟ್ ನಲ್ಲಿ ಮೀನುಗಾರಿಕೆ ಹಾಗೂ ಪಶುಸಂಗೋಪನೆ ಸಚಿವಾಲಯಕ್ಕೆ 3737 ಕೋಟಿ ಮೀಸಲಿಡುವ ಮೂಲಕ ಮೀನುಗಾರರ ಬಹುದಿನದ ಬೇಡಿಕೆಗಳನ್ನು ಪೂರೈಸುವತ್ತ ಕೇಂದ್ರ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ.

ಆದಾಯ ತೆರಿಗೆ ಮಿತಿ ಹೆಚ್ಚಳ, ಡಿಜಿಟಲ್ ವ್ಯವಹಾರ, ಸ್ಟಾರ್ಟ್ ಅಪ್ ಉದ್ಯಮಕ್ಕೆ ಪ್ರೋತ್ಸಾಹ, ಜಿ ಎಸ್ ಟಿ ಸರಳೀಕರಣ, ಮುದ್ರಾ ಯೋಜನೆ ಮೂಲಕ ಮಹಿಳಾ ಉದ್ಯಮಿಗಳಿಗೆ ಸಾಲ, ರಸ್ತೆ ರೈಲ್ವೆ ಜಲಸಾರಿಗೆ ವಲಯದಲ್ಲಿ ಗರಿಷ್ಠ ಅನುದಾನದ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ, ದೇಶದ ಸರ್ವ ನಾಗರಿಕರ ಆಶಯಗಳಿಗೆ ಸ್ಪಂದಿಸುವ ಮೂಲಕ ದೇಶದ ಪ್ರಥಮ ಮಹಿಳಾ ಹಣಕಾಸು ಸಚಿವೆಯಾಗಿ ಆಶಾದಾಯಕ ಬಜೆಟ್ ಮಂಡಿಸಿರುವ ನಿರ್ಮಲ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಯವರಿಗೆ ವಿಶೇಷ ಅಭಿನಂದನೆಗಳನ್ನು ಅವರು ಸಲ್ಲಿಸಿದ್ದಾರೆ.


Spread the love

Exit mobile version