Home Mangalorean News Kannada News ಮೀನುಗಾರಿಕಾ ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

ಮೀನುಗಾರಿಕಾ ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

Spread the love

ಮೀನುಗಾರಿಕಾ ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು : ಮೀನುಗಾರಿಕಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಎನ್ನೆಸ್ಸೆಸ್‍ನ 50ನೇ ವರ್ಷದ ಸಮಾರಂಭದ ಹಿನ್ನೆಲೆಯಲ್ಲಿ ಸ್ವಚ್ಚತಾ ಪಾಕ್ಷಿಕ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಮಾಜಿ ಡೀನ್ ಹಾಗೂ ಪ್ರಾಧ್ಯಾಪಕ ಡಾ. ಎಸ್.ಎಂ. ಶಿವಪ್ರಕಾಶ್ , ಸ್ವಚ್ಚತೆಯ ಕಡೆಗೆ ನಾವೆಲ್ಲರೂ ಗಮನ ಹರಿಸುವುದೇ ಆದರೆ ನಾವು ವಾಸಿಸುವ ಪ್ರದೇಶವನ್ನು ಸುಂದರಗೊಳಿಸಬೇಕು. ಕಾಲೇಜನ್ನು ಪ್ಲಾಸ್ಟಿಕ್ ಮುಕ್ತವಾಗಿಸುವುದು, ಹಸಿರು ಕ್ಯಾಂಪಸ್ ಮಾಡಲು ಸುಲಭವಾಗುವುದೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಡೀನ್ ಡಾ. ಎ. ಸೆಂಥಿಲ್ ವೇಲ್ ಎನ್ನೆಸ್ಸೆಸ್ ಅತ್ಯುತ್ತಮವಾದ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಈ ಯೋಜನೆಯು ಕಾಲೇಜು ಮಟ್ಟದಲ್ಲಿ ಪ್ರಚಲಿತವಾಗಿದ್ದು, ಎಲ್ಲಾ ಯುವವಿದ್ಯಾರ್ಥಿಗಳು ಇದರಲ್ಲಿ ಭಾಗವಸಿ ಶ್ರಮವಹಿಸುತ್ತಿದ್ದಾರೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡರೆ ರೋಗರುಜಿನಗಳ ಆತಂಕದ ಭಾದೆಯ ಸಮಸ್ಯೆಗಳು ಎದುರಾಗುವುದಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತದ ಪಿತಾಮಹ ಮಹಾತ್ಮ ಗಾಂಧಿ ಯವರ ಕನಸಾದ ಸ್ವಚ್ಚ ಭಾರತ ಅಭಿಯಾನದ ಈ ಯೋಜನೆಯು ನಾವೆಲ್ಲಾ ವಾಸಿಸುವ ಮನೆ, ವಿದ್ಯಾಮಂದಿರ, ಶಾಲೆ, ಕಾಲೇಜು, ಕಛೇರಿ, ವಿದ್ಯಾಸಂಸ್ಥೆಗಳ ಪ್ರಯೋಗಾಲಯಗಳು, ತರಗತಿ ಕೊಠಡಿಗಳು, ಗ್ರಂಥಾಲಯಗಳು, ಹಾಸ್ಟೆಲ್ ಗಳು, ಇತ್ಯಾದಿಗಳನ್ನು ಶುಭ್ರವಾಗಿ ಕಾಪಾಡುವ ನಿಟ್ಟಿನಲ್ಲಿ ಈ ಸ್ವಚ್ಚತಾ ಪಕ್ವಾಡ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಎನ್ನೆಸ್ಸೆಸ್‍ನ ಕಾರ್ಯಕ್ರಮಾಧಿಕಾರಿ ಹಾಗೂ ಕಾಲೇಜಿನ ಪ್ರಾಧ್ಯಾಪಕ ಡಾ. ಎ.ಟಿ ರಾಮಚಂದ್ರ ನಾಯ್ಕ ತಿಳಿಸಿದರು.

ನಾವು ವಾಸಿಸುವ ಪರಿಸರ ಮಾಲಿನ್ಯವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ತ್ಯಾಜ್ಯಗಳನ್ನು ವಿಲೇವಾರಿ ಮಾಡುªiÁಗ ಅದರಲ್ಲೂ ಪ್ಲಾಸ್ಟಿಕನ್ನು ನಿಸರ್ಗಕ್ಕೆ ವರ್ಗಾಯಿಸುವಾಗ ಅತೀ ಜಾಗರೂಕರಾಗಿರಬೇಕು. ಪ್ಲಾಸ್ಟಿಕಿನಿಂದ ಅಪಾರ ಹಾನಿಯಾಗುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಬೃಹತ್ ಯೋಜನೆಯನ್ನು ರೂಪಿಸಿದೆಯೆಂದು ತಿಳಿಸಿದರು.


Spread the love

Exit mobile version