Home Mangalorean News Kannada News ಮೀನು ಸಾಗಾಟದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಸೊತ್ತುಗಳ ವಶ

ಮೀನು ಸಾಗಾಟದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಸೊತ್ತುಗಳ ವಶ

Spread the love

ಮೀನು ಸಾಗಾಟದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಸೊತ್ತುಗಳ ವಶ

ಮಂಗಳೂರು: ಮೀನು ಸಾಗಾಟದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೋಲಿಸರು ವಶಪಡಿಸಕೊಂಡ ಘಟನೆ ಉಳ್ಳಾಲ ಪೋಲಿಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.

ಮಾರ್ಚ್ 23 ರಂದು ರಾತ್ರಿ 10-00 ಗಂಟೆಗೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ತಲಪಾಡಿ ವಿಜಯಬ್ಯಾಂಕ್ ಹತ್ತಿರ ಇರುವ ಹೊಯಿಗೆ ಹಿತ್ಲು ಎಂಬಲ್ಲಿ ಕೆಎ-20-ಸಿ-8744 ನೇ ಕಂಟೈನರ್ ಮೀನು ಸಾಗಾಟದ ಮುಚ್ಚಿದ ಬಾಡಿಯ ಲಾರಿಯಲ್ಲಿ ಅಕ್ರಮವಾಗಿ ಸಾಮಾನ್ಯ ಮರಳನ್ನು ಗುಪ್ತವಾದ ರೀತಿಯಲ್ಲಿ ಹೊರನೋಟಕ್ಕೆ ಮೀನು ಸಾಗಾಟ ಮಾಡುವ ರೀತಿಯಲ್ಲಿ ಕೇರಳದ ಕಡೆಗೆ ಮಾರಾಟ ಮಾಡಲು ತುಂಬಿಸಿ ಸಾಗಾಟ ಮಾಡಲು ಇಟ್ಟಿರುತ್ತಾರೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್ ರವರು ಸಿಬ್ಬಂದಿ ಸಮೇತ ಸ್ಥಳಕ್ಕೆ ಧಾಳಿ ಮಾಡಿ ಸದ್ರಿ ಸ್ಥಳದಿಂದ ಕೆಎ-20-ಸಿ-8744 ನೇ ಕಂಟೈನರ್ ಲಾರಿಯನ್ನು ಮತ್ತು ಸ್ಥಳದಲ್ಲಿ ಮರಳು ಸಾಗಾಟಕ್ಕೆ ಉಪಯೋಗಿಸುತ್ತಿದ್ದ ಕೆಎಲ್-08-ಎಎಲ್-7131 ಟಿಪ್ಪರ್ ಲಾರಿಯನ್ನು ಪತ್ತೆ ಮಾಡಿರುತ್ತಾರೆ.

ಸುಮಾರು 4 ಯುನಿಟ್ ಮತ್ತು ಕಂಟೈನರ್ ಲಾರಿ, ಟಿಪ್ಪರ್ ಲಾರಿಯನ್ನು, ಮರಳನ್ನು ವಶಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡಿರುವ ಮರಳು ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ ರೂ.15,00,000/- ಆಗಿರುತ್ತದೆ. ಪತ್ತೆಯಾದ ಅಕ್ರಮ ಮರಳನ್ನು ಕೇರಳದ ಕಡೆಗೆ ಸಾಗಾಟ ಮಾಡಲು ದಂಧೆಯನ್ನು ಯಾರು ಮಾಡಿರುತ್ತಾರೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ತನಿಖೆ ಕೈಗೊಳ್ಳಲಾಗಿರುತ್ತದೆ. ಸದ್ರಿ ಮರಳನ್ನು ಹಾಗೂ ವಾಹನಗಳನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಉಪ-ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಂಗಳೂರು ರವರಿಗೆ ಹಸ್ತಾಂತರಿಸಲಾಗಿದೆ.

ಮಂಗಳೂರು ನಗರದ ಮೇಲಾಧಿಕಾರಿಗಳ ಆದೇಶದಂತೆ ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ. ಕೆ.ರಾಮರಾವ್ ರವರ ನಿರ್ದೇಶನದಂತೆ ಪತ್ತೆ ಮಾಡಿ ಸೊತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪೊಲಿಸ್ ನಿರೀಕ್ಷಕರಾದ ಗೋಪಿಕೃಷ್ಣ,ಕೆ.ಆರ್, ಮತ್ತು ಎಎಸ್ಐ, ಮಂಜಪ್ಪ, ಸಿಬ್ಬಂದಿಗಳಾದ ಸಿಪಿಸಿ 553, ಲಿಂಗರಾಜ್, ಸಿಪಿಸಿ 386 ರಂಜಿತ್, ಸಿಪಿಸಿ 561 ಪ್ರಶಾಂತ್, ಸಿಪಿಸಿ 560 ಪೂರ್ವಾಚಾರ್ರವರುಗಳು ಸಹಕರಿಸಿರುತ್ತಾರೆ.


Spread the love

Exit mobile version