ಮುಲ್ಕಿಯಲ್ಲಿ ಗಾಂಜಾ ಮಾರಾಟ: ಒರ್ವನ ಬಂಧನ
ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಹಾಗೂ ಮಾರಾಟ ಪ್ರಕರಣದಲ್ಲಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಸೆಪ್ಟೆಂಬರ್ 14ರಂದು ಗಾಂಜಾ ಸೇವನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಲ್ಕಿ ಕಾಪಿಕಾಡು ನಿವಾಸಿ ಪ್ರಜ್ವಲ್ (25), ಬೈಕಂಪಾಡಿ ಕೋರಿಕಟ್ಟಿನ ಪ್ರಮೋದ್ (22) ಹಾಗೂ ಸ್ಟೀವನ್ (29) ಅವರನ್ನು ಪೊಲೀಸರು ಬಂಧಿಸಿದ್ದರು.
ಮುಂದುವರಿದ ತನಿಖೆಯ ಆಧಾರದಲ್ಲಿ, ಸೆಪ್ಟೆಂಬರ್ 20ರಂದು ಸುರತ್ಕಲ್ ಕಾಟಿಪಳ್ಳ ಕೃಷ್ಣಾಪುರ ನಿವಾಸಿ ಯತಿರಾಜ್ (27), ತಂದೆ ಲೇಟ್ ಲಕ್ಷ್ಮಣ ಅವರನ್ನು ಮುಲ್ಕಿ ಕಾರ್ನಾಡ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಯಿತು.
ಆರೋಪಿಯಿಂದ 1.2 ಕೆಜಿ ಗಾಂಜಾ, ಒಂದು ಆಟೋ ರಿಕ್ಷಾ ಹಾಗೂ ₹300 ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.