ಮುಲ್ಕಿ : ಕಾಣೆಯಾದವರ ಪತ್ತೆಗೆ ಮನವಿ
ಮಂಗಳೂರು: ಮುಲ್ಕಿ ತಾಲೂಕು ಬಪ್ಪನಾಡು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂಲತಃ ಬಾದಾಮಿ ತಾಲೂಕಿನ ಯಲ್ಲಪ್ಪ ಸಿದ್ದಪ್ಪ ಮುದಕವಿ(29) ಎಂಬವರು ಕಾಣೆಯಾಗಿರುವ ಬಗ್ಗೆ ಮುಲ್ಕಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ: ಎತ್ತರ:5.4 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಧೃಡಕಾಯ ಶರೀರ, ಕಪ್ಪು ತಲೆ ಕೂದಲು ಮತ್ತು ಬಲಕೈ ನಲ್ಲಿ ರೆಕ್ಕೆಯ ಟ್ಯಾಟ್ಯೂ ಇರುತ್ತದೆ. ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಬೂದು ಬಣ್ಣದ ಪ್ಯಾಂಟ್ ಮತ್ತು ಕಂದು ಬಣ್ಣದ ಬೆಲ್ಟ್ ಧರಿಸಿದ್ದರು. ಕನ್ನಡ ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಮುಲ್ಕಿ ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
