Home Mangalorean News Kannada News ಮೂಡಬಿದ್ರೆ: ಹೆದ್ದಾರಿ ಭೂಸ್ವಾಧೀನ – ಪರಿಹಾರ ಪಾವತಿ

ಮೂಡಬಿದ್ರೆ: ಹೆದ್ದಾರಿ ಭೂಸ್ವಾಧೀನ – ಪರಿಹಾರ ಪಾವತಿ

Spread the love

ಮೂಡಬಿದ್ರೆ: ಹೆದ್ದಾರಿ ಭೂಸ್ವಾಧೀನ – ಪರಿಹಾರ ಪಾವತಿ

ಮಂಗಳೂರು:  ರಾಷ್ಟ್ರೀಯ ಹೆದ್ದಾರಿ ಸಾಣೂರು – ಬಿಕರ್ನಕಟ್ಟೆ ವಿಭಾಗದ ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪಡಿಸಲಾದ ಜಮೀನಿನ ಮಾಲೀಕರಿಗೆ ಪರಿಹಾರ ಪಾವತಿ ಹಾಗೂ ಕ್ಲೈಮ್‍ಗಳನ್ನು ಪಡೆಯುವ ಅದಾಲತ್ ಕಾರ್ಯಕ್ರಮ ಜುಲೈ 23 ರಂದು ಬೆಳಿಗ್ಗೆ 10.30 ಗಂಟೆಗೆ ಮೂಡಬಿದ್ರೆಯ ತಾಲೂಕು ಆಡಳಿತ ಸೌಧ ಕಚೇರಿ ಸಭಾಭವನದಲ್ಲಿ ನಡೆಯಲಿದೆ.

ಪುತ್ತಿಗೆ, ಮಾರ್ಪಾಡಿ, ಪಡುಮಾರ್ನಾಡ್, ಬೆಳುವಾಯಿ, ತೆಂಕ ಮಿಜಾರು, ಬಡಗಮಿಜಾರು, ತೋಡಾರು ಗ್ರಾಮಗಳ ಜಮೀನಿನ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಪರಿಹಾರ ಮೊತ್ತವನ್ನು ಪಡೆಯಬಹುದು. ಅದಾಲತ್ ಕಾರ್ಯಕ್ರಮದಲ್ಲಿ ಪರಿಹಾರ ಪಡೆಯಲು ಕ್ಲೈಮ್ ಸಲ್ಲಿಸಿದ ಭೂಮಾಲೀಕರು ಅವಾರ್ಡ್ ನೋಟಿಸ್‍ನಲ್ಲಿ ತಿಳಿಸಿರುವ ದಾಖಲೆಗಳೊಂದಿಗೆ ಹಾಜರಾಗಿ ಕ್ಲೈಮ್ ಸಲ್ಲಿಸುವಂತೆ ಹಾಗೂ ಈಗಾಗಲೇ ಕ್ಲೈಮ್ ಸಲ್ಲಿಸಿದ ಭೂಮಾಲೀಕರು ಹಾಜರಾಗಿ ಅಗತ್ಯ ದಾಖಲೆಗಳಿಗೆ ಸಹಿ ಮಾಡಬೇಕು.

ಈ ಅದಾಲತ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೂ ಸಂತ್ರಸ್ತರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಮುಹಮ್ಮದ್ ಇಸಾಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version