ಮೇ 25 ರಿಂದ ಜೂನ್ 7 ರ ತನಕ ಜಿಲ್ಲೆಯಲ್ಲಿ ಮದುವೆಗಳಿಗೆ ಅನುಮತಿ ಇಲ್ಲ – ಡಿಸಿ ಜಿ ಜಗದೀಶ್

Spread the love

ಮೇ 25 ರಿಂದ ಜೂನ್ 7 ರ ತನಕ ಜಿಲ್ಲೆಯಲ್ಲಿ ಮದುವೆಗಳಿಗೆ ಅನುಮತಿ ಇಲ್ಲ – ಡಿಸಿ ಜಿ ಜಗದೀಶ್

ಉಡುಪಿ: ಮೇ 25 ರಿಂದ ಜೂನ್ 7 ರ ತನಕ ಉಡುಪಿ ಜಿಲ್ಲೆಯಲ್ಲಿ ಯಾವುದೇ ಮದುವೆಗಳಿಗೆ ಅನುಮತಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಈ ಸಂದರ್ಭದಲ್ಲಿ ನಿಗದಿತ ಜನ ಸಂಖ್ಯೆಯನ್ನೊಳಗೊಂಡು ಮದುವೆ ಹಾಗೂ ಇತರೆ ಸಭೆ ಸಮಾರಂಭಗಳನ್ನು ಅನುಮತಿ ಪಡೆದು ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ನಡೆಸುವರ ಅವಕಾಶ ಕಲ್ಪಿಸಲಾಗಿರುತ್ತದೆ. ಮದುವೆ ಮತ್ತು ಇತರೆ ಸಮಾರಂಭಗಳಿಗೆ ಅನುಮತಿಯನ್ನು ನೀಡುವ ಅಧಿಕಾರವನ್ನು ಈಗಾಗಲೇ ಆಯಾ ತಾಲೂಕಿನ ತಹಶೀಲ್ದಾರರುಗಳಿಗೆ ಈ ಕಚೇರಿ ಉಲ್ಲೇಖ (1) ರ ನಡವಳಿಯಂತ ಪ್ರತ್ಯಾಯೋಜಿಸಲಾಗಿರುತ್ತದೆ.

ಮೇ 25 ರಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ನಡೆಸಿದ ವಿಡಿಯೋ ಸಂವಾದದಲ್ಲಿ ನೀಡಿದ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೋಂಕು ಹರಡುವ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮದುವೆ, ಮೆಹಂದಿ ಹಾಗೂ ವಿವಿಧ ಸಮಾರಂಭಗಳು ಹಾಗೂ ಆಚರಣೆಗಳ ಸಂದರ್ಭದಲ್ಲಿ ಹೆಚ್ಚು ಸಾರ್ವಜನಿಕರು ಗುಂಪು ಸೇರುವ ಹಿನ್ನಲೆಯಲ್ಲಿ ಸೋಂಕು ಹರಡುವ ಅಪಾಯವು ಹೆಚ್ಚಿರುತ್ತದೆ.

ಆದ್ದರಿಂದ ಮದುವೆ ಸಮಾರಂಭಗಳನ್ನು ನಡೆಸಲು ಈಗಾಗಲೇ ನೀಡಲಾಗಿರುವ ಅನುಮತಿ ಪ್ರಕರಣಗಳಲ್ಲಿ ಮದುವೆಯನ್ನು ಸರಳವಾಗಿ ಆಯಾ ಮನೆಗಳಲ್ಲಿ ಕುಟುಂಬ ಸದಸ್ಯರು/ಸಂಬಂಧಿಕರು ಸೇರಿದಂತೆ 40 ಜನರನ್ನು ಒಳಗೊಂಡು ನಡೆಸಲು ಅನುಮತಿಸಲಾಗಿದೆ. 25.05.2021 ರಿಂದ 07.06.2021 ರ ತನಕ ಯಾವುದೇ ಮದುವೆಗಳಿಗೆ ಅನುಮತಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


Spread the love

1 Comment

  1. Thanks to the Almighty, we have carried out the marriage function within the premises on 20.05.2021 without inviting the guests beyond the limit of the pandemic. On the same day one of our distant relative death’s day unable to attend and moreover one of my brother recovered from the pandemic. such a miracle in a lifetime on a single day is an unforgettable event.

Comments are closed.