ಮೋದಿ ಉಡುಪಿ ಭೇಟಿ ಹಿನ್ನಲೆ: ವಾಹನ ಸಂಚಾರದಲ್ಲಿ ಬದಲಾವಣೆ
ಉಡುಪಿ: ಭಾರತದ ಮಾನ್ಯ ಪ್ರಧಾನ ಮಂತ್ರಿಯವರು ನವೆಂಬರ್ 28 ರಂದು ಉಡುಪಿ ಜಿಲ್ಲೆಯ ಶ್ರೀ ಕೃಷ್ಣ ಮಠದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನೆಲೆ, ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಉಡುಪಿ ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ನಿಯಮ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989ರ ನಿಯಮ 221(ಎ)(2) & (5) ರನ್ವಯ ನವೆಂಬರ್ 28 ರಂದು ಬೆಳಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯ ವರೆಗೆ ಈ ಕೆಳಕಂಡಂತೆ ವಾಹನಗಳ ಸಂಚಾರ ನಿಷೇಧಿಸಿ ಮತ್ತು ಬದಲಿ ಮಾರ್ಗದಲ್ಲಿ ಸಂಚರಿಸುವ ಕುರಿತು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅದೇಶಿಸಿರುತ್ತಾರೆ.
ಕಾರ್ಯಕ್ರಮಕ್ಕೆ ಬರುವ ವಾಹನಗಳು:
- ಕುಂದಾಪುರದಿಂದ ಬರುವ ವಾಹನಗಳು ಸಿಲಾಸ್ ಶಾಲೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಬೇಕು.
- ಕುಂದಾಪುರದಿಂದ ಬರುವ ವಾಹನಗಳು ಗುಂಡಿಬೈಲು ಹತ್ತಿರ ಜನರನ್ನು ಇಳಿಸಿ ಯು ಟರ್ನ್ ಆಗಿ ಎಂಜಿಎಂ ಮೈದಾನಕ್ಕೆ ಹೋಗಬೇಕು.
- ಕಾರ್ಕಳ ಬೆಳ್ವೆ ಮಾರ್ಗವಾಗಿ ಉಡುಪಿಗೆ ಬರುವ ವಾಹನಗಳು ಕ್ರಿಶ್ಚಿಯನ್ ಹೈಸ್ಕೂಲ್, ಪಿಯು ಕಾಲೇಜ್ ಮತ್ತು ಬೈಲೂರು ಮುದ್ದಣ ಎಸ್ಟೇಟ್ ನಲ್ಲಿ ಪಾರ್ಕ್ ಮಾಡಿ ರೋಡ್ ಶೋ ಗೆ ತೆರಳಬೇಕು.
- ಮಂಗಳೂರು ಕಡೆಯಿಂದ ರೋಡ್ ಶೋ ಗೆ ಬರುವ ವಾಹನಗಳು ಬೈಲೂರು ಮುದ್ದಣ್ಣ ಎಸ್ಟೇಟ್ ನಲ್ಲಿ ಪಾರ್ಕ್ ಮಾಡಬೇಕು.
- ಮಲ್ಪೆ ಕಡೆಯಿಂದ ರೋಡ್ ಶೋ ಗೆ ಬರುವ ವಾಹನಗಳು ಶಾಮೀಲಿ ಎದುರು ಗ್ರೌಂಡ್ ನಲ್ಲಿ ಪಾರ್ಕ್ ಮಾಡಬೇಕು.
- ಕಾರ್ಕಳ ಹೆಬ್ರಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಶಾರದಾ ಕಲ್ಯಾಣ ಮಂಟಪ ಮಾರ್ಗವಾಗಿ ಬೀಡಿನಗುಡ್ಡೆಯಲ್ಲಿ ಪಾರ್ಕ್ ಮಾಡಬೇಕು.
- ಮಲ್ಪೆ ಕಡೆಯಿಂದ ರೋಡ್ ಶೋ ಗೆ ಬರುವ ಜನರು ವಾಹನಗಳನ್ನು ವಿವೇಕಾನಂದ ಸ್ಕೂಲ್ ಪಾರ್ಕಿಂಗ್ ನಲ್ಲಿ ಪಾರ್ಕ್ ಮಾಡಬೇಕು.
ಬಸ್ಸುಗಳು ಮತ್ತು ಕಾರುಗಳು:
- ಕೆ ಎಸ್ ಆರ್ ಟಿ ಸಿ ಮತ್ತು ಪ್ರೈವೇಟ್ ಬಸ್ ಗಳು ಉಡುಪಿ ಬಸ್ ಸ್ಟ್ಯಾಂಡ್ ಗೆ ಬರುವಂತಿಲ್ಲ.ಅವುಗಳು ನೇರವಾಗಿ ಅಂಬಾಗಿಲು ಮಾರ್ಗವಾಗಿ ಮಣಿಪಾಲ ಅಲೆವೂರು ಮಾರ್ಗವಾಗಿ ಕೊರಂಗ್ರಪಾಡಿ ಮಾರ್ಗವಾಗಿ ಬಲೈ ಪಾದೆಯಾಗಿ ಚಲಿಸಬೇಕು.
- ಮಲ್ಪೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಪಡುಕೆರೆ ಪಿತ್ರೋಡಿ, ಉದ್ಯಾವರ ಮಾರ್ಗವಾಗಿ ಚಲಿಸಬೇಕು.
- ಮಲ್ಪೆಯಿಂದ ಕುಂದಾಪುರ ಹೋಗುವ ವಾಹನಗಳು ಸಂತೆಕಟ್ಟೆ ಮತ್ತು ನೇಜಾರು ಮುಖೇನಾ ಚಲಿಸಬೇಕು.
ಮಂಗಳೂರಿನಿಂದ ಕುಂದಾಪುರ ಕಡೆಗೆ:
- ಕಟಪಾಡಿಯಿಂದ-ಮಣಿಪುರ-ದೆಂದೂರಕಟ್ಟೆ ರಾಂಪುರ-ಅಲೆವೂರು, ಗುಡ್ಡೆ ಅಂಗಡಿ-ಮಣಿಪಾಲ-ಆರ್ಎಸ್ಬಿ ಸಭಾಭವನ-ಸಿಂಡಿಕೇಟ್ ಸರ್ಕಲ್, ಕಾಯಿನ್ ಸರ್ಕಲ್-ಪೆರಂಪಳ್ಳಿ-ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಅಂಬಾಗಿಲು NH 66 ಮುಖಾಂತರ ಚಲಿಸಬೇಕು.
- ಕಟಪಾಡಿ ಉದ್ಯಾವರ ಕಡೆಯಿಂದ ಬಂದ ವಾಹನಗಳು-ಬಲೈಪಾದೆ-ಗುಡ್ಡೆ ಅಂಗಡಿ ಕೊರಂಗ್ರಪಾಡಿ ಕ್ರಾಸ್-ಕೊರಂಗ್ರಪಾಡಿ-ಕುಕ್ಕಿಕಟ್ಟೆ- ಜೋಡು ರಸ್ತೆ ಅಲೆವೂರು ಗುಡ್ಡೆ, ಅಂಗಡಿ-ಮಣಿಪಾಲ-RSB ಸಭಾ ಭವನ-ಸಿಂಡಿಕೇಟ್ ಸರ್ಕಲ್-ಕಾಯಿನ್ ಸರ್ಕಲ್-ಪೆರಂಪಳ್ಳಿ-ಅಂಬಾಗಿಲು ಪೆರಂಪಳ್ಳಿ ಕ್ರಾಸ್-ಅಂಬಾಗಿಲು NH 66 ಮುಖಾಂತರ ಚಲಿಸಬೇಕು.
ಕುಂದಾಪುರದಿಂದ-ಮಂಗಳೂರು ಕಡೆಗೆ:
- ಅಂಬಾಗಿಲು ಎನ್ ಹೆಚ್ 66- ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಪೆರಂಪಳ್ಳಿ- ಕಾಯಿನ್ ಸರ್ಕಲ್- ಸಿಂಡಿಕೇಟ್ ಸರ್ಕಲ್-ಮಣಿಪಾಲ RSB ಸಭಾ ಭವನ-ಅಲೆವೂರು ಗುಡ್ಡೆ ಅಂಗಡಿ-ರಾಂಪುರ-ದೆಂದುರ್ಕಟ್ಟೆ-ಮಣಿಪುರ-ಕಟಪಾಡಿ ಮುಖಾಂತರ ಚಲಿಸಬೇಕು.
ಮಂಗಳೂರಿನಿಂದ ಮಲ್ಪೆ ಕಡೆಗೆ
- NH 66 ಕಿಯಾ ಶೋ ರೂಂ ಉದ್ಯಾವರ ಜಂಕ್ಷನ್-ಉದ್ಯಾವರ ಪೇಟೆ-ಪಿತ್ರೋಡಿ-ಸಂಪಿಗೆ ನಗರ ಕುತ್ಪಾಡಿ-ಕಡೆಕಾರು-ಕಿದಿಯೂರು-ಮಲ್ಪೆ ಮುಖಾಂತರ ಚಲಿಸಬೇಕು.
ಅಂದು ಬೆಳಿಗೆ, 07.00 ಗಂಟೆಯಿಂದ ಮದ್ಯಾಹ್ನ 03.00 ಗಂಟೆಯವರೆಗೆ ಯಾವುದೇ ವಾಹನಗಳು ಕರಾವಳಿ ಕಡೆಯಿಂದ ಉಡುಪಿ ಸಿಟಿ ಬಸ್ ನಿಲ್ದಾಣ ಮತ್ತು ಉಡುಪಿ ಸಿಟಿ ಕಡೆಗೆ ಬರುವಂತಿಲ್ಲ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
