Home Mangalorean News Kannada News ಯೇಸು ಕ್ರಿಸ್ತ, ಮದರ್ ತೆರೆಸಾರ ಕುರಿತು ಅವಹೇಳನಕಾರಿ ಬರಹ: ಅಕ್ಷರ್ ಬೋಳಿಯಾರ್ ಬಂಧನ

ಯೇಸು ಕ್ರಿಸ್ತ, ಮದರ್ ತೆರೆಸಾರ ಕುರಿತು ಅವಹೇಳನಕಾರಿ ಬರಹ: ಅಕ್ಷರ್ ಬೋಳಿಯಾರ್ ಬಂಧನ

Spread the love

ಯೇಸು ಕ್ರಿಸ್ತ, ಮದರ್ ತೆರೆಸಾರ  ಕುರಿತು ಅವಹೇಳನಕಾರಿ ಬರಹ: ಅಕ್ಷರ್ ಬೋಳಿಯಾರ್ ಬಂಧನ

ಮಂಗಳೂರು: ಯೇಸು ಕ್ರಿಸ್ತರು ಹಾಗೂ ಸಂತ ಮದರ್ ತೆರೆಸಾ ಅವರ ಕುರಿತು ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಅಕ್ಷರ್ ಬೋಳಿಯಾರ್ ಎಂಬ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ.

ಅಕ್ಷರ್ ಬೋಳಿಯಮಜಲ್ ಎಂಬ ವ್ಯಕ್ತಿಯು ತನ್ನ ಫೇಸ್ ಬುಕ್ ನಲ್ಲಿ ಕ್ರೈಸ್ತ ಧರ್ಮದ ವಿರುದ್ದ ಹಾಗೂ ಅವರ ಆರಾಧ್ಯ ದೇವರಾದ ಯೇಸುಕ್ರಿಸ್ತರ ತೀರ ಕೀಳು ಅಭಿರುಚಿಯ ಮಾತುಗಳನ್ನು ಹಾಕಿ ಶಾಂತಿಕದಡುವ ಕೆಲಸ ಮಾಡಿರುತ್ತಾರೆ ಅಲ್ಲದೆ ಮದರ್ ತೆರಸಾ ಅವರನ್ನು ಕೂಡ ತೀರಾ ನಿಂದನಾತ್ಮಕವಾಗಿ ಬರೆದಿರುವ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಕ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಕ್ರೈಸ್ತ ಸಂಘಟನೆಗಳು ನಗರ ಪೋಲಿಸ್ ಕಮೀಷನರ್ ಅವರಿಗೆ ಮನವಿ ಸಲ್ಲಿಸಿದ್ದರು.

ಮನವಿ ಸಲ್ಲಿಸಿದ ಕೆಲವೆ ಘಂಟೆಗಳಲ್ಲಿ ಪೋಲಿಸರು ಆತನನ್ನು ಬಂಧಿಸಿದ್ದಾರೆ.


Spread the love

Exit mobile version