Home Mangalorean News Kannada News ರಾಜ್ಯಮಟ್ಟದ ವ್ಯಂಗ್ಯಚಿತ್ರಕಲಾ ಶಿಬಿರ ಆಳ್ವಾಸ್ ವ್ಯಂಗ್ಯಚಿತ್ರ ಸಿರಿಗೆ ಚಾಲನೆ

ರಾಜ್ಯಮಟ್ಟದ ವ್ಯಂಗ್ಯಚಿತ್ರಕಲಾ ಶಿಬಿರ ಆಳ್ವಾಸ್ ವ್ಯಂಗ್ಯಚಿತ್ರ ಸಿರಿಗೆ ಚಾಲನೆ

Spread the love

ರಾಜ್ಯಮಟ್ಟದ ವ್ಯಂಗ್ಯಚಿತ್ರಕಲಾ ಶಿಬಿರ ಆಳ್ವಾಸ್ ವ್ಯಂಗ್ಯಚಿತ್ರ ಸಿರಿಗೆ ಚಾಲನೆ

ಮೂಡುಬಿದಿರೆ: ಯುವ ವ್ಯಂಗ್ಯಚಿತ್ರಗಾರರು ಭಾವನೆಗಳನ್ನು ರೇಖೆಗಳಲ್ಲಿ ಚಿತ್ರಿಸಿದರೆ ಅವರಿಗೆ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ. ಅರ್ಥಗ್ರಹಿಕೆ ಮಹತ್ವ ನೀಡುವುದರಿಂದ ವ್ಯಂಗ್ಯಚಿತ್ರಗಳು ಹೆಚ್ಚು ಜನಪ್ರಿಯಗೊಳ್ಳುತ್ತದೆ. ಕಾವ್ಯ ಹಾಗೂ ಸಾಹಿತ್ಯ ಮಿಳಿತಗೊಂಡರೆ ವ್ಯಂಗ್ಯಚಿತ್ರಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹಿರಿಯ ವ್ಯಂಗ್ಯ ಚಿತ್ರಕಲಾವಿದ ಕೆ. ಆರ್ ಸ್ವಾಮಿ ಅಭಿಪ್ರಾಯಪಟ್ಟರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುತ್ತಿಗೆ ಕ್ಯಾಂಪಸ್‍ನಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ವ್ಯಂಗ್ಯಚಿತ್ರಕಲಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಳ್ವಾಸ್‍ನ ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಚಿಕಿತ್ಸಕ ದೃಷ್ಟಿಯಿಂದ ನೋಡುವ ಸಮಾಜ, ಸಹನೆ ಮನೋಭಾವದ ಮನೋಭಾವವಿದ್ದರೆ ವ್ಯಂಗ್ಯಚಿತ್ರಕಾರರು ಸುರಕ್ಷಿತರಾಗಕು ಸಾಧ್ಯ ಎಂದರು.

ಶಿಬಿರದಲ್ಲಿ ಭಾಗವಹಿಸುವ 26 ಕಲಾವಿದರನ್ನು ಗೌರವಿಸಲಾಯಿತು.

ವ್ಯಂಗ್ಯಚಿತ್ರಕಲಾವಿದರ ಸಂಘದ ರಾಜ್ಯಾಧ್ಯಕ್ಷ ವಿ. ಆರ್. ಚಂದ್ರಶೇಖರ್, ಸದಸ್ಯರಾದ ನಾಗನಾಥ ಶೆಟ್ಟಿ, ಜೀವನ್ ಶೆಟ್ಟಿ, ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.


Spread the love

Exit mobile version