Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ ಹಂತ 5

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ ಹಂತ 5

Spread the love

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ ಹಂತ 5

“ಸ್ವಚ್ಛತೆಯೇ ದೇವರು” ಎಂಬ ಭಾವದಲ್ಲಿ ರಾಮಕೃಷ್ಣ ಮಿಷನ್, ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ. ಕೇಂದ್ರ ಸರಕಾರದ ವಿಶೇಷ ಮನವಿಯ ಮೇರೆಗೆ ಜನವರಿ 2015 ರಿಂದ ಆರಂಭಿಸಿ ಇಂದಿನ ವರೆಗೆ ನಾಲ್ಕು ಹಂತಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಸಂಪನ್ನಗೊಳಿಸಲಾಗಿದೆ. ಐದನೇ ಹಂತದ ಯೋಜನೆ 2 ಡಿಸೆಂಬರ್ 2018 ರಂದು ಭಾನುವಾರ ಬೆಳಿಗ್ಗೆ ಆರಂಭಗೊಳ್ಳುತ್ತ್ತಿದೆ. ನಾಲ್ಕು ವರ್ಷದ ಹಿಂದೆ ಸ್ವಚ್ಛತಾ ಅಭಿಯಾನವನ್ನು ಆರಂಭಿಸುವಾಗ ಯೋಜಿಸಿದಂತೆ ಮಹಾತ್ಮಾ ಗಾಂಧೀಜಿಯವರ ನೂರೈವತ್ತನೇ ಜನ್ಮಜಯಂತಿಯವರೆಗೆ ಈ ಅಭಿಯಾನ ಸಾಗಬೇಕು ಎನ್ನುವ ಆಶಯವಿತ್ತು. ಈ ಹಿನ್ನಲೆಯಲ್ಲಿ 2 ಅಕ್ಟೋಬರ್ 2019 ರಂದು ಈ ಐದನೇ ಹಂತ ಸಂಪನ್ನಗೊಳ್ಳಲಿದೆ. ಹಾಗಾಗಿ ಇದು ನಾವು ಯೋಜಿಸಿರುವ ಸ್ವಚ್ಛತಾ ಅಭಿಯಾನದ ಅಂತಿಮ ಹಂತ. 2 ಡಿಸೆಂಬರ್ 2018 ರಿಂದ 2 ಅಕ್ಟೋಬರ್ 2019 ವರೆಗೆ ನಿರಂತರವಾಗಿ ಹತ್ತು ತಿಂಗಳಗಳ ಕಾಲ ಈ ಅಭಿಯಾನ ಜರುಗಲಿದೆ. ಐದನೇ ಹಂತದ ಈ ಯೋಜನೆಯಲ್ಲಿ ಐದು ವಿವಿಧ ಆಯಾಮಗಳಲ್ಲಿ ಕಾರ್ಯಕ್ರಮಗಳನ್ನು ರೂಪುಗೊಳಿಸಲಾಗಿದೆ.

1 ಸ್ವಚ್ಛತಾ ಸಂಪರ್ಕ ಅಭಿಯಾನ : ಸ್ವಚ್ಛತಾ ಕಾರ್ಯದೊಂದಿಗೆ ಜಾಗೃತಿ ಕಾರ್ಯ ಮೇಳೈಸಿದಾಗ ಹೆಚ್ಚು ಪರಿಣಾಮವನ್ನು ಕಾಣಬಹುದು. ಈ ಆಶಯದೊಂದಿಗೆ ಈ ವರ್ಷ ಸುಮಾರು ಐನೂರು ಸಂಘ-ಸಂಸ್ಥೆಗಳನ್ನು ಸಂಪರ್ಕಿಸಿ ಸುಮಾರು 300 ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಪ್ರತಿನಿತ್ಯ ಸಂಜೆ ಮಂಗಳೂರಿನ ವಿವಿದೆಡೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸುಮಾರು ಒಂದೂವರೆ ಗಂಟೆಯ ಕಾರ್ಯಕ್ರಮದಲ್ಲಿ ಶುಚಿತ್ವದ ಕುರಿತು ಅರಿವು, ಸಾರ್ವಜನಿಕರ ಜವಾಬ್ದಾರಿ ಹಾಗೂ ಕರ್ತವ್ಯ, ನಮ್ಮ ತ್ಯಾಜ್ಯ ನಮ್ಮ ಹೊಣೆ ಎಂಬ ಕಲ್ಪನೆಯಲ್ಲಿ ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ, ಮಡಕೆಗಳ ವಿತರಣೆ ಹಾಗೂ ಮಾಹಿತಿ ಕರಪತ್ರದ ವಿತರಣೆ ಮತ್ತಿತರ ಅಂಶಗಳನ್ನು ಜೋಡಿಸಲಾಗಿದೆ. ಪ್ರತಿನಿತ್ಯ ರಾಮಕೃಷ್ಣ ಮಿಷನ್ ವತಿಯಿಂದ ಸ್ವಯಂ ಸೇವಕರು ಆಯಾ ಆಯಾ ಸಂಘ ಸಂಸ್ಥೆಗಳಿದ್ದಲ್ಲಿಯೇ ತೆರಳಿ ಈ ಕಾರ್ಯವನ್ನು ನಡೆಸಿಕೊಡಲಿದ್ದಾರೆ. ಈಗಾಗಲೇ 400 ಸಂಘಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ನಾಲ್ಕು ತಿಂಗಳಿಗಾಗುವಷ್ಟು ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು ಮೂರರಿಂದ ಐದು ಸಾವಿರ ಮಡಕೆಗಳನ್ನು ವಿತರಿಸುವ ಗುರಿ ಹೊಂದಲಾಗಿದೆ.

2 ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು -ಶ್ರಮದಾನ : ಪ್ರತಿ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯ ತನಕ ಸುಮಾರು 44 ವಾರಗಳ ಸ್ವಚ್ಛತಾ ಶ್ರಮದಾನ ನಡೆಯಲಿದೆ. ಪ್ರತಿ ಭಾನುವಾರ ಸುಮಾರು 100 ರಿಂದ 200 ಜನ ಸ್ವಯಂ ಸೇವಕರು ಶ್ರಮದಾನ ಮಾಡಲಿದ್ದಾರೆ. ಪೆÇರಕೆ ಹಿಡಿದು ರಸ್ತೆ ಸ್ವಚ್ಛ ಮಾಡುವುದರ ಜೊತೆ ಜೊತೆಗೆ ತೋಡುಗಳನ್ನು ಶುಚಿಗೊಳಿಸುವುದು, ಜಾಗೃತಿ ಕರಪತ್ರ ಹಂಚುವುದು, ಸಾರ್ವಜನಿಕ ಶೌಚಾಲಯದ ಸ್ವಚ್ಛತೆ, ಅವಶ್ಯವಿದ್ದೆಡೆ ಮಾರ್ಗಸೂಚಕ ನಾಮಫಲಕಗಳ ಅಳವಡಿಕೆ ಮತ್ತು ನವೀಕರಣ, ಬಸ್ ತಂಗುದಾಣಗಳಿಗೆ ಬಣ್ಣ ಬಳಿಯುವುದು, ನವೀಕರಣ, ತ್ಯಾಜ್ಯ ಸುರಿಯುವ ಜಾಗಗಳನ್ನು ಸುಂದರ ತಾಣಗಳನ್ನಾಗಿಸುವುದು, ಪಾರ್ಕಗಳ ನಿರ್ಮಾಣ, ಪ್ಲೈ ಒವರ್ ಸುಂದರೀಕರಣ, ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾದ ಅನಧಿಕೃತ ಪೆÇೀಸ್ಟರ್ ಬ್ಯಾನರ್‍ಗಳನ್ನು ತೆರವುಗೊಳಿಸುವುದೇ ಮೊದಲಾದ ಜನೋಪಯೋಗಿ ಕಾರ್ಯಗಳನ್ನು ಮಾಡಲಾಗುವುದು.

3 ಸ್ವಚ್ಛ ಮನಸ್ಸು: ಶಾಲಾ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಕುರಿತಂತೆ ಅರಿವು ಮೂಡಿಸಬೇಕೆಂಬ ಆಶಯದೊಂದಿಗೆ ಸುಮಾರು 100 ಶಾಲೆಗಳಲ್ಲಿ ಒಟ್ಟು ಐನೂರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪ್ರತಿ ಶಾಲೆಯಿಂದ ನೂರು ಮಕ್ಕಳಿಗೆ ಒಟ್ಟು 10000 ವಿದ್ಯಾರ್ಥಿಗಳಿಗೆ ಶುಚಿತ್ವದ ಕುರಿತು ವಿಶೇಷ ತರಬೇತಿ ನೀಡಲಾಗುವುದು. ಅದರಲ್ಲಿ ಮೊದಲ ಐನೂರು ವಿದ್ಯಾರ್ಥಿಗಳನ್ನು ಸ್ವಚ್ಛ ಭಾರತ ಅಂಬಾಸಡರ್ ಎಂದು ಗುರುತಿಸಿ ಗೌರವಿಸಿ ಸಮ್ಮಾನಿಸಲಾಗುವುದು. ಜೊತೆಗೆ ರಾಷ್ಟ್ರನಿರ್ಮಾಣದಲ್ಲಿ ಅವರು ಪಾತ್ರವಹಿಸುವಂತೆ ಪ್ರೇರೇಪಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಂಡು ವಿಶೇಷವಾಗಿ ತರಬೇತುಗೊಳಿಸಲಾಗುವುದು. ಇದರ ಪೂರ್ಣಪ್ರಮಾಣದ ಅನುಷ್ಠಾನಕ್ಕಾಗಿ ನಿತ್ಯಕಾರ್ಯ ನಿರ್ವಹಿಸುವ ನುರಿತ ತರಬೇತುದಾರರು ಕಾರ್ಯನಿರ್ವಹಿಸಲಿದ್ದಾರೆ. ಇದು ಜಾಗೃತಿ ಕಾರ್ಯಕ್ರಮವಾದರೂ ಒಂದಿಷ್ಟು ಶ್ರಮದಾನ, ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮ ನಿಗದಿತ ಶಾಲೆಗಳಲ್ಲಿ 2019 ಜೂನ್, ಜುಲೈ, ಅಗಷ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಗಳಲ್ಲಿ ಜರುಗಲಿದೆ.

4 ಸ್ವಚ್ಛ ಸೋಚ್: 50 ಕಾಲೇಜುಗಳಲ್ಲಿ ವಿಚಾರ ಸಂಕಿರಣಗಳು- ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ದ.ಕ ಹಾಗೂ ಉಡುಪಿ ಜಿಲ್ಲೆಗಳ ಸುಮಾರು 50 ಕಾಲೇಜುಗಳಲ್ಲಿ ಸ್ವಚ್ಛ ಸೋಚ್ ವಿಚಾರ ಸಂಕಿರಣಗಳನ್ನು ಸಂಘಟಿಸಲಾಗುತ್ತಿದೆ. ಇಬ್ಬರು ಸಂಪನ್ಮೂಲ ವ್ಯಕ್ತಿಗಳಿಂದ ಸ್ವಚ್ಛತೆಯ ಕುರಿತ ಭಾಷಣ, ಪ್ರಾತ್ಯಕ್ಷಿಕೆ, ಸಂವಾದ ಮತ್ತಿತರ ಚಟುವಟಿಕೆಗಳನ್ನು ಜೋಡಿಸಿಕೊಳ್ಳಲಾಗಿದೆ. 2018 ಡಿಸೆಂಬರ್, 2019 ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಈ 50 ವಿಚಾರ ಸಂಕಿರಣಗಳು ಜರುಗಲಿವೆ. ನಂತರ ಜಿಲ್ಲಾ ಮಟ್ಟದ, ವಿಶ್ವವಿದ್ಯಾನಿಲಯ ಮಟ್ಟದ ಹಾಗೂ ರಾಜ್ಯಮಟ್ಟದ ಸ್ವಚ್ಛತಾ ವಿಚಾರ ಸಂಕಿರಣಗಳು ನಡೆಯಲಿವೆ.

5 ಸ್ವಚ್ಛಗ್ರಾಮ ಅಭಿಯಾನ : ಸ್ವಚ್ಛ ದಕ್ಷಿಣ ಕನ್ನಡ-ಸ್ವಚ್ಛ ಉಡುಪಿ ಜಿಲ್ಲೆ ; ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ 100 ಗ್ರಾಮಗಳಲ್ಲಿ ಸ್ವಚ್ಛಗ್ರಾಮ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಲಾಗಿತ್ತು. ಈ ಬಾರಿ ಈ ಅಭಿಯಾನವನ್ನು ಉಡುಪಿ ಜಿಲ್ಲೆಗೂ ವಿಸ್ತರಿಸಿ ಅಲ್ಲಿಯ 100 ಗ್ರಾಮಗಳಲ್ಲಿ ಈ ವರ್ಷ ಸ್ವಚ್ಛ ಗ್ರಾಮ ಅಭಿಯಾನವನ್ನು ಯೋಜನೆ ಮಾಡಲಾಗುತ್ತಿದೆ. ಅವಿಭಜಿತ ದ.ಕ ಜಿಲ್ಲೆಯ ಸುಮಾರು 200 ಗ್ರಾಮಗಳಲ್ಲಿ 2000 ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡುವ ಗುರಿ ಹೊಂದಲಾಗಿದೆ. ದ.ಕಜಿಲ್ಲಾ ಪಂಚಾಯತ್ ಹಾಗೂ ಉಡುಪಿ ಜಿಲ್ಲಾಡಳಿತ ಸಹಭಾಗಿತ್ವದಲ್ಲಿ ಸ್ವಚ್ಛಗ್ರಾಮ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಪ್ರತಿ ಗ್ರಾಮಗಳಲ್ಲಿ ಸುಮಾರು ನೂರು ಜನರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಗುವುದು. ಸದಸ್ಯರಲ್ಲಿ ಒಬ್ಬರನ್ನು ಸಂಯೋಜಕರೆಂದು ನೇಮಕ ಮಾಡಲಾಗುವುದು. ಸದಸ್ಯರಿಗೆ ಟೀಶರ್ಟ್, ಗ್ಲೌಸ್ ಸೇರಿದಂತೆ ಸ್ವಚ್ಛತೆಗೆ ಬೇಕಾದ ಸಕಲ ಉಪಕರಣಗಳನ್ನು ನೀಡಲಾಗುವುದು. ತಿಂಗಳಿಗೆ ಒಂದು ಭಾನುವಾರ ಸದಸ್ಯರೆಲ್ಲ ಸೇರಿ ಅವರವರ ಗ್ರಾಮದಲ್ಲಿ ಶ್ರಮದಾನ ಕೈಗೊಳ್ಳುತ್ತಾರೆ.

5ನೇ ಹಂತದ ಉದ್ಘಾಟನೆ ಭಾನುವಾರ 2 ಡಿಸೆಂಬರ್ 2018 ಬೆಳಿಗ್ಗೆ 7-30 ರಿಂದ 9-30 ರವರೆಗೆ 5ನೇ ಹಂತದ ಸ್ವಚ್ಛತಾ ಆಭಿಯಾನದ ಉದ್ಘಾಟನಾ ಕಾರ್ಯಕ್ರಮ ರಾಮಕೃಷ್ಣ ಮಠದಲ್ಲಿ ನಡೆಯಲಿದೆ. ಸ್ವಾಮಿ ಶಿವಪ್ರೇಮಾನಂದಜಿ, ಕಾರ್ಯದರ್ಶಿಗಳು, ರಾಮಕೃಷ್ಣ ಮಿಷನ್ ಜಲ್ಪಾಯಗುರಿ, ಪಶ್ಚಿಮ ಬಂಗಾಳ ಇವರು ದೀಪ ಪ್ರಜ್ವಲನೆ ಮೂಲಕ ಐದನೇ ಹಂತವನ್ನು ಉದ್ಘಾಟಿಸಲಿರುವರು. ಡಾ. ಎನ್ ವಿನಯ ಹೆಗ್ಡೆ ಹಾಗೂ ಶ್ರೀ ವೆಂಕಟೇಶ್ ಎಂ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಮಾನ್ಯ ಮಹಾಪೌರರಾದ ಶ್ರೀ ಭಾಸ್ಕರ ಕೆ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕರಾದ ಶ್ರೀ ವೇದವ್ಯಾಸ ಕಾಮತರವರು ಭಾನುವಾರ ನಡೆಯಲಿರುವ ಶ್ರಮದಾನಗಳಿಗೆ ಚಾಲನೆ ಕೊಡಲಿದ್ದಾರೆ ಹಾಗೇ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಸಸಿಕಾಂತ ಸೇಂಥಿಲ್‍ರವರು ಈ ವರ್ಷದ ಪ್ರಥಮ ಶ್ರಮದಾನಕ್ಕೆ ಚಾಲನೆ ಕೊಡಲಿದ್ದಾರೆ. ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯ ವಹಿಸಲಿದ್ದಾರೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಈ ವರ್ಷದ ಪ್ರಥಮ ಭಾನುವಾರದ ಸ್ವಚ್ಛತಾ ಶ್ರಮದಾನ ಸಭಾಕಾರ್ಯಕ್ರಮದ ಬಳಿಕ ಮಂಗಳಾದೇವಿ ರಥಬೀದಿಯಲ್ಲಿ ನಡೆಯಲಿದೆ.

ಸ್ವಚ್ಛ ಸೋಚ್ 50 ವಿಚಾರ ಸಂಕಿರಣಗಳ ಉದ್ಘಾಟನೆ: 4 ಡಿಸೆಂಬರ್ 2018 ಬೆಳಿಗ್ಗೆ 9-30 ಕ್ಕೆ ಸ್ವಚ್ಛ ಸೋಚ್ ವಿಚಾರ ಸಂಕಿರಣಗಳ ಉದ್ಘಾಟನಾ ಕಾರ್ಯಕ್ರಮ ರಾಮಕೃಷ್ಣ ಮಠದಲ್ಲಿ ಜರುಗಲಿದೆ. ಉದ್ಘಾಟಕರಾಗಿ ಶ್ರೀ ಬಿಎಚ್ ವಿ ಪ್ರಸಾದ್ ಜಿಜಿಎಂ ಎಮ್ ಆರ್ ಪಿ ಎಲ್ ಇವರು ಆಗಮಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಶ್ರೀ ವಿಶಾಲ್ ಹೆಗ್ಡೆ ಉಪಸ್ಥಿತರಿರುತ್ತಾರೆ. ವಿಶೇಷ ಅಹ್ವಾನಿತರಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಹೈದ್ರಾಬಾದ್ ರಾಮಕೃಷ್ಣ ಮಠದ ಸ್ವಾಮಿ ಬೋಧಮಯಾನಂದಜಿ ಹಾಗೂ ಕಾಪೆರ್Çೀರೇಟ್ ಟ್ರೈನರ್ ಡಾ. ವಿವೇಕ ಮೋದಿ ಭಾಗವಹಿಸಲಿದ್ದಾರೆ. ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಸಾನಿಧ್ಯ ವಹಿಸಲಿದ್ದಾರೆ. ಮಧ್ಯಾನ್ಹ 2 ಗಂಟೆಯ ವರೆಗೆ ವಿಚಾರ ಸಂಕಿರಣ ನಡೆಯಲಿದೆ.


Spread the love

Exit mobile version