Home Mangalorean News Kannada News ರಾಮಕೃಷ್ಣ ಮಿಷನ್ 5 ಹಂತದ ಸ್ವಚ್ಛ ಮಂಗಳೂರು ಅಭಿಯಾನದ 13ನೇ ವಾರದ ಶ್ರಮದಾನ 

ರಾಮಕೃಷ್ಣ ಮಿಷನ್ 5 ಹಂತದ ಸ್ವಚ್ಛ ಮಂಗಳೂರು ಅಭಿಯಾನದ 13ನೇ ವಾರದ ಶ್ರಮದಾನ 

Spread the love

ರಾಮಕೃಷ್ಣ ಮಿಷನ್ 5 ಹಂತದ ಸ್ವಚ್ಛ ಮಂಗಳೂರು ಅಭಿಯಾನದ 13ನೇ ವಾರದ ಶ್ರಮದಾನ 

ಮಂಗಳೂರು: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಜರುಗುತ್ತಿರುವ ಸ್ವಚ್ಛತಾ ಅಭಿಯಾನದ ಐದನೇ ವರ್ಷದ ಕಾರ್ಯಕ್ರಮಗಳ 13ನೇ ಶ್ರಮದಾನವನ್ನು ದಿನಾಂಕ 3-3-2019 ಭಾನುವಾರ ಬೆಳಿಗ್ಗೆ 7-30 ರಿಂದ 10-30 ರ ತನಕ ಫಳ್ನೀರ್ ಹೈಲ್ಯಾಂಡ್ಸ್ ಪರಿಸರದಲ್ಲಿ ಹಮ್ಮಿಕೊಳ್ಳಲಾಯಿತು. ಇಂದಿರಾ ಆಸ್ಪತ್ರೆಯ ಮುಂಭಾಗದಲ್ಲಿ ಅಭಿಯಾನಕ್ಕೆ ಡಾ. ಧನೇಶ್ ಕುಮಾರ್, ಪ್ರಾಂಶುಪಾಲರು ನಿಟ್ಟೆ ಫಿಸಿಯೋಥೆರಪಿ ಕಾಲೇಜು ಹಾಗೂ ಉದ್ಯಮಿ ಮೋಹನ್ ಕೊಟ್ಟಾರಿ ಜಂಟಿಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಸ್ವಚ್ಛತಾ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಪೆÇ್ರೀ. ಭಾರತೀ ಭಟ್, ಮಸಾಹಿರೊ, ಉಮಾಕಾಂತ್ ಸುವರ್ಣ, ಇಮ್ತಿಯಾಜ್ ಶೇಖ್, ಪಿ ಎನ್ ಭಟ್, ರವಿ ಕೆ ಆರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಡಾ ಧನೇಶ್ ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ “ಇಂದಿನ ಯುವಜನತೆಗೆ ಈ ದೇಶವನ್ನು ಶ್ರೇಷ್ಠ ಭಾರತವನ್ನಾಗಿಸುವ ಸಾಮರ್ಥ್ಯವಿದೆ. ದೇಶದ ಒಳಿತಿಗಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಸ್ವಚ್ಛತಾ ಅಭಿಯಾನದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಅಳಿಲು ಸೇವೆ ಸಲ್ಲಿಸುವ ಅಪೂರ್ವ ಅವಕಾಶವನ್ನು ಈ ಅಭಿಯಾನ ನಮ್ಮೆಲ್ಲರಿಗೆ ಒದಗಿಸಿಕೊಟ್ಟಿದೆ. ಮುಖ್ಯವಾಗಿ ಯುವಜನತೆ ಸ್ವಚ್ಛತಾ ಕೈಂಕರ್ಯದಲ್ಲಿ ಸ್ವಪ್ರೇರಣೆಯಿಂದ ತೊಡಗಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇದರ ಮೂಲಕ ಯುವಜನತೆಗೆ ಹಿರಿಯರಿಂದ ಸೂಕ್ತ ಮಾರ್ಗದರ್ಶನ ದೊರೆಯುತ್ತಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ” ಎಂದು ತಿಳಿಸಿದರು. ಉದ್ಯಮಿ ಮೋಹನ್ ಕೊಟ್ಟಾರಿ ಮಾತನಾಡಿ “ಬಾಹ್ಯ ಶುಚಿತ್ವಕ್ಕೆ ಗಮನ ನೀಡುತ್ತಿರುವಂತೆ ಆಂತರಿಕ ಶುಚಿತ್ವಕ್ಕೂ ಗಮನ ಹರಿಸಿದಾಗ ಸ್ವಚ್ಛ ಭಾರತ ನಿಜವಾಗಿಯೂ ಸಾಕಾರಗೊಳ್ಳುತ್ತದೆ. ಕೇವಲ ಮಾತನಾಡುವುದಕ್ಕಿಂದ ಕಾರ್ಯ ಮಾಡುವುದು ಹೆಚ್ಚು ಪರಿಣಾಮಕಾರಿಯಾದುದು. ಅಂತಹ ಕಾರ್ಯಕ್ಕೆ ಕೈಜೋಡಿಸುತ್ತಿರುವ ಸಕಲರೂ ಅಭಿನಂದನಾರ್ಹರು” ಎಂದು ತಿಳಿಸಿ ಶುಭಹಾರೈಸಿದರು.

ಸ್ವಚ್ಛತೆ: ಫಳ್ನಿರ್ ಹೈಲ್ಯಾಂಡ್‍ನಲ್ಲಿರುವ ಮದರ್ ತೆರೇಸಾ ರಸ್ತೆ ಹಾಗೂ ಅಸುಪಾಸಿನಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಚಾಲನಾ ಕಾರ್ಯಕ್ರಮದ ಬಳಿಕ ಸ್ವಾಮಿ ಏಕಗಮ್ಯಾನಂದಜಿ ಹಾಗೂ ಕಾರ್ಯಕರ್ತರು ಇಂದಿರಾ ಆಸ್ಪತ್ರೆ ಬಳಿಯಿರುವ ಬಸ್ ತಂಗುದಾಣದವನ್ನು ಕಸಗುಡಿಸಿ ಸ್ವಚ್ಛಗೊಳಿಸಿದರು. ನಿಟ್ಟೆ ಫಿಸಿಯೊಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಅವರಿ ಜಂಕ್ಷನ್ ವರೆಗಿನ ಮದರ್ ತೆರೇಸಾ ರಸ್ತೆಯ ಇಕ್ಕೆಲಗಳನ್ನು, ತೋಡುಗಳನ್ನು ಗುಡಿಸಿ ಸ್ವಚ್ಛ ಮಾಡಿದರು. ನಿವೇದಿತಾ ಬಳಗದವರು ಕೋಹಿಲೊ ಲೇನ್‍ನಲ್ಲಿದ್ದ ಕಸ ತೆಗೆದರು. ಆಶ್ರಮದ ಭಕ್ತರು ಕಂಕನಾಡಿಯತ್ತ ಸಾಗುವ ಮದರ್ ತೆರೇಸಾ ಮಾರ್ಗದ ಇಕ್ಕೆಲಗಳನ್ನು, ಪುಟ್‍ಪಾಥಗಳನ್ನು ಸ್ವಚ್ಛಗೊಳಿಸಿದರು. ಅಲ್ಲಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಪುಟ್‍ಪಾಥ್ ಕಲ್ಲುಗಳನ್ನು ಸರಿಯಾಗಿ ಹೊಂದಿಸಲಾಯಿತು. ಜೊತೆಗೆ ಹಿರಿಯ ಸ್ವಯಂ ಸೇವಕರು ಕಸಬೀಳುತ್ತಿದ್ದ ಸ್ಥಳವೊಂದನ್ನು ರಾಜಗೋಪಾಲ್ ಶೆಟ್ಟಿ ಹಾಗೂ ರಾಮಚಂದ್ರ ಶೆಟ್ಟಿ ಜೊತೆಗೂಡಿ ಕಸಮುಕ್ತವನ್ನಾಗಿಸಿದರು. ಅಲ್ಲದೇ ಅಲ್ಲಿದ್ದ ಮಣ್ಣಿನದಿಬ್ಬವನ್ನು ಜೆಸಿಬಿ ಬಳಸಿ ತೆರವು ಮಾಡಿ ಸಮತಟ್ಟು ಮಾಡಲಾಯಿತು. ಅಲ್ಲಿ ಮತ್ತೆ ಸಾರ್ವಜನಿಕರು ಕಸ ಹಾಕದಂತೆ ಮುನ್ನೆಚ್ಚರಿಕೆ ವಹಿಸಲು ಕ್ರಮಕೈಗೊಳ್ಳಲಾಗಿದೆ. ತ್ಯಾಜ್ಯ ಬೀಳುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ ಅಲ್ಲಿ ಹೂಕುಂಡಗಳನ್ನಿಟ್ಟು ಜಾಗ ಅಂದ ತೋರುವಂತೆ ಮಾಡಲಾಗಿದೆ. ಹಾಗೂ ಅನೇಕ ದಿನಗಳಿಂದ ಬಸ್ ತಂಗುದಾಣದ ಹಿಂಭಾಗದಲ್ಲಿ ನಿರುಪಯುಕ್ತವಾಗಿ ಬಿದ್ದುಕೊಂಡಿದ್ದ ಗೂಡಂಗಡಿಯೊಂದು ತ್ಯಾಜ್ಯದಿಂದ ತುಂಬಿ ರೋಗ ಹರಡುವ ತಾಣವಾಗಿತ್ತು. ಇಂದು ಅದನ್ನೂ ತೆರವು ಮಾಡಿ ಸ್ಥಳವನ್ನು ಸ್ವಚ್ಛಗೊಳಿಸಲಾಗಿದೆ.

ಬಸ್ ತಂಗುದಾಣದ ನವೀಕರಣ: ಹೈಲ್ಯಾಂಡ್‍ನಲ್ಲಿರುವ ಬಸ್ ತಂಗುದಾಣವೊಂದರಲ್ಲಿ ಕುಳಿತುಕೊಳ್ಳಲು ಆಸನಗಳಿಲ್ಲದೆ ನಿರ್ವಹಣೆ ಶೂನ್ಯವಾಗಿತ್ತು. ಅದನ್ನಿಂದು ಮುಖೇಶ್ ಆಳ್ವ ನೇತೃತ್ವದಲ್ಲಿ ನವೀಕರಿಸಲಾಗಿದೆ. ಮೊದಲಿಗೆ ತಂಗುದಾಣದ ಸುತ್ತಮುತ್ತ ಕಸವನ್ನು ತೆಗೆದು ಶುಚಿಮಾಡಲಾಯಿತು. ನಂತರ ಲೋಕೇಶ್ ಕೊಟ್ಟಾರ ಹಾಗೂ ಉದಯ ಕೆಪಿ ಕುಳಿತುಕೊಳ್ಳುವ ಸಲುವಾಗಿ ವಿಶೇಷ ವಿನ್ಯಾಸದ ಉತ್ತಮ ಆಸನಗಳನ್ನು ಅಳವಡಿಸಿದರು. ಬಳಿಕ ಅಲ್ಲಿದ್ದ ಕಂಬಗಳಿಗೆ ಬಣ್ಣ ಬಳಿಯಲಾಯಿತು. ಕೊನೆಗೆ ಸುತ್ತಮುತ್ತಲಿನ ತಡೆಗೋಡೆಗೆ ಕೆಂಪುಬಣ್ಣ ಹಚ್ಚಿ ತಂಗುದಾಣ ಸುಂದರವಾಗಿ ಕಂಗೊಳಿಸುವಂತೆ ಮಾಡಲಾಯಿತು. ಯೋಗಿಶ್ ಕಾಯರ್ತಡ್ಕ, ಹಿಮ್ಮತ್ ಸಿಂಗ್ ಮತ್ತಿತರರು ಈ ಕಾರ್ಯದಲ್ಲಿ ಸಹಕರಿಸಿದರು. ಶ್ರಮದಾನದ ಬಳಿಕ ಎಲ್ಲ ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೆ.ಎಂ.ಎಫ್ ಸಂಸ್ಥೆ ಕಾರ್ಯಕರ್ತರಿಗೆ ಉಚಿತ ಮಜ್ಜಿಗೆ ಹಾಗೂ ತಂಪು ಪಾನೀಯದ ವ್ಯವಸ್ಥೆಯನ್ನು ಮಾಡಿದರು.

ಉಡುಪಿ ಜಿಲ್ಲೆಯಲ್ಲಿ ಸ್ವಚ್ಛ ಸೋಚ್ ವಿಚಾರ ಸಂಕಿರಣಗಳು: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲೆಯ 10 ಕಾಲೇಜುಗಳಲ್ಲಿ ಸ್ವಚ್ಛ ಸೋಚ್ ಸೆಮಿನಾರ್‍ಗಳನ್ನು ಹಮ್ಮಿಕೊಳ್ಳಲಾಯಿತು. ನಿಟ್ಟೆ ಡಾ ಶಂಕರ ಆಡ್ಯಂತಾಯ ಪ್ರಥಮದರ್ಜೆ ಕಾಲೇಜು, ಕಾರ್ಕಳ ಭುವನೇಂದ್ರ ಕಾಲೇಜು, ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜು, ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ಶಾರದಾ ಕಾಲೇಜು ಬಸ್ರೂರು, ಭಂಡಾರಕಾರ್ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯ ಕುಂದಾಪುರ, ಡಾ. ಜಿ ಶಂಕರ ಸರ್ಕಾರಿ ಮಹಿಳಾ ಕಾಲೇಜು ಅಜ್ಜರಕಾಡು, ಹಿರಿಯಡ್ಕ ಸರ್ಕಾರಿ ಪದವಿ ಕಾಲೇಜು, ಮಂದಾರ್ತಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸೆಂಟ್ ಮೇರಿಸ್ ಕಾಲೇಜು, ಶಿರ್ವಾ ಈ ಕಾಲೇಜುಗಳಲ್ಲಿ ಕಳೆದ ವಾರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಇಂದಿನವರೆಗೆ ಒಟ್ಟು 34 ಸೆಮಿನಾರ್‍ಗಳನ್ನು ಸಂಪನ್ನಗೊಳಿಸಲಾಗಿದೆ.

ಈ ಸೆಮಿನಾರಗಳು ಸ್ವಚ್ಛತೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಮೂಹದೊಂದಿಗೆ ಚರ್ಚೆ, ಸಂವಾದ, ಪ್ರತಿಜ್ಞಾವಿಧಿ ಹಾಗೂ ಕಸದಿಂದ ರಸ ಪ್ರಾತ್ಯಕ್ಷಿಕೆಗಳನ್ನು ಒಳಗೊಂಡಿದ್ದವು. ಪೆÇ್ರೀ. ರಾಜಮೋಹನ್ ರಾವ್, ಸರಿತಾ ಶೆಟ್ಟಿ, ಡಾ. ನಿವೇದಿತಾ ಎಂ ಕಾಮತ್, ಸತೀಶ್ ಸದಾನಂದ, ಪ್ರತಿಭಾ ಕುಡ್ತಡ್ಕ ಹಾಗೂ ಗೋಪಿನಾಥ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಸ್ವಚ್ಛ ಸೋಚ್ ಅಭಿಯಾನದ ಮುಖ್ಯ ಸಂಯೋಜಕ ರಂಜನ್ ಬೆಳ್ಳರಪಾಡಿ ವಿಚಾರ ಸಂಕಿರಣಗಳನ್ನು ಸಂಘಟಿಸಿದರು. ಶ್ರೀವತ್ಸ ನಿರ್ಚಾಲು, ಕಾಂಚನಾ ಸಹಕರಿಸಿದರು. ಎಂ.ಆರ್.ಪಿ.ಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆಗಳು ಈ ಅಭಿಯಾನಗಳಿಗೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.


Spread the love

Exit mobile version