Home Mangalorean News Kannada News ರಾಹುಲ್, ಪ್ರಿಯಾಂಕಾ ಜೊತೆ ಉತ್ತರಪ್ರದೇಶ ಪೊಲೀಸರ ದುರ್ವರ್ತನೆಗೆ ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಖಂಡನೆ

ರಾಹುಲ್, ಪ್ರಿಯಾಂಕಾ ಜೊತೆ ಉತ್ತರಪ್ರದೇಶ ಪೊಲೀಸರ ದುರ್ವರ್ತನೆಗೆ ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಖಂಡನೆ

Spread the love

ರಾಹುಲ್, ಪ್ರಿಯಾಂಕಾ ಜೊತೆ ಉತ್ತರಪ್ರದೇಶ ಪೊಲೀಸರ ದುರ್ವರ್ತನೆಗೆ ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಖಂಡನೆ

ಕುಂದಾಪುರ: ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಸಂತ್ರಸ್ಥ ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಲು ಉತ್ತರ ಪ್ರದೇಶದ ಹತ್ರಾಸ್ ಗೆ ತೆರಳುತ್ತಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮೇಲೆ ಅಲ್ಲಿನ ಬಿಜೆಪಿ ಸರಕಾರ ಪೊಲೀಸರ ಮೂಲಕ ದೌರ್ಜನ್ಯ ನಡೆಸಿರುವುದು ಖಂಡನೀಯ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತ್ ಶೆಟ್ಟಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಒಂದು ಚಳುವಳಿಯ ಪಕ್ಷ ಕಾಂಗ್ರೆಸ್ ಚಳುವಳಿಯನ್ನ ಹತ್ತಿಕ್ಕಲು ಯೋಗಿ ಆದಿತ್ಯನಾಥ್ ಅವರಂತ ನೂರು ಜನ ಬಂದರು ಸಾಧ್ಯವಿಲ್ಲಾ ಉತ್ತರ ಪ್ರದೇಶ ಪೋಲಿಸರನ್ನ ಉಪಯೋಗಿಸಿಕೊಂಡು ರಾಹುಲ್ ಗಾಂದಿಯವರನ್ನ ತಡೆದಿರುವುದು ಖಂಡನೀಯ ಈ ಮೂಲಕ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love

Exit mobile version