Home Mangalorean News Kannada News ರೈತ, ಮಹಿಳೆಯರನ್ನು ಅವಮಾನಿಸಿದ ಕುಮಾರಸ್ವಾಮಿಯವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ – ಮಟ್ಟಾರ್ ರತ್ನಾಕರ ಹೆಗ್ಡೆ

ರೈತ, ಮಹಿಳೆಯರನ್ನು ಅವಮಾನಿಸಿದ ಕುಮಾರಸ್ವಾಮಿಯವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ – ಮಟ್ಟಾರ್ ರತ್ನಾಕರ ಹೆಗ್ಡೆ

Spread the love

ರೈತ, ಮಹಿಳೆಯರನ್ನು ಅವಮಾನಿಸಿದ ಕುಮಾರಸ್ವಾಮಿಯವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ – ಮಟ್ಟಾರ್ ರತ್ನಾಕರ ಹೆಗ್ಡೆ

ಉಡುಪಿ : ಕಳೆದ 5 ತಿಂಗಳ ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಾನು ರೈತಪರ, ರೈತ ಮುಖ್ಯಮಂತ್ರಿಯೆಂದು ಹೇಳುತ್ತಾ ಇದೀಗ ತಮ್ಮ ನಿಜ ಬಣ್ಣವನ್ನು ತೋರಿಸುತ್ತಿದ್ದು, ರೈತರ ಸಾಲ ಮನ್ನಾದ ನಾಟಕವಾಡಿ ಇವತ್ತಿಗೂ ರೈತರಿಗೆ ಋಣ ರಹಿತ ಪತ್ರವನ್ನು ನೀಡುವರೇ ಅಸಮರ್ಥರಾಗಿದ್ದು, ರೈತರು ತಮ್ಮ ಕಬ್ಬು ಬೆಳೆಗೆ ಕನಿಷ್ಠ ದರ ನಿಗಧಿ ಮಾಡುವಂತೆ ಕೋರಿ ಮತ್ತು ಸಕ್ಕರೆ ಕಾರ್ಖಾನೆಗಳಿಂದ ತಮಗೆ ಬರಬೇಕಾಗಿರುವ ಬಾಕಿ ಹಣಕ್ಕಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಹೋರಾಟಗಾರರನ್ನು ದರೋಡೆಕೋರರು, ಕ್ರಿಮಿನಲ್ಗಳು ಎಂಬುದಾಗಿ ಸಂಭೋದಿಸಿ ರೈತರನ್ನು ಅವಮಾನ ಮಾಡಿದ್ದಲ್ಲದೇ, ಮಹಿಳಾ ರೈತಳೊಬ್ಬಳನ್ನು ಉದ್ದೇಶಿಸಿ ಆ ಅಮ್ಮ “4 ವರ್ಷ ಎಲ್ಲಿ ಮಲಗಿದ್ದಳು” ಎಂಬುವುದಾಗಿ ಹೀನಾಯವಾಗಿ ಮಾತನಾಡುವುದರ ಮುಖಾಂತರ ರಾಜ್ಯದ ಮಹಿಳೆಯರಿಗೆ ಅವಮಾನವನ್ನು ಮಾಡಿದ್ದು, ಮಾನ್ಯ ಮುಖ್ಯಮಂತ್ರಿಗಳಿಗೆ ಆ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆ ಉಳಿದಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ಪ್ರಧಾನಿ ಕಾರ್ಯಕ್ರಮ :- ದೇಶದ ಜನತೆಗೆ ಉಜ್ವಲ ಯೋಜನೆಯ ಮುಖಾಂತರ ಮನೆ ಮನೆಗೆ ಉಚಿತ ಗ್ಯಾಸ್ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿ, ನೀರಿನಂತೆ ಗ್ಯಾಸನ್ನು ಕೂಡ ಮನೆಮನೆಗೆ ಪೈಪನಲ್ಲಿ ಕೊಡುವಂತಹ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದ್ದು, ಮೊದಲ ಹಂತದಲ್ಲಿ ದೇಶದ 129 ಜಿಲ್ಲೆಗಳ ಸಿಟಿ ಗ್ಯಾಸ್ ವಿತರಣಾ ಯೋಜನೆಗೆ ಶಿಲಾನ್ಯಾಸ ಮತ್ತು ದೇಶದ 123 ಜಿಲ್ಲೆಗಳಿಗೆ 10ನೇ ಸಿ.ಜಿ.ಡಿ. ಬಿಡ್ಡಿಂಗ್ ರೌಂಡ್ನಲ್ಲಿ ಚಾಲನೆ ಕೊಡಲಿದ್ದು, ಈ ಕಾರ್ಯಕ್ರಮ ದಿಲ್ಲಿಯ ವಿಜ್ಞಾನ ಭವನದಲ್ಲಿ ಮಧ್ಯಾಹ್ನ 2.30 ಗಂಟೆಗೆ ನಡೆಯಲಿದ್ದು, ಅದೇ ಹೊತ್ತಿಗೆ ಉಡುಪಿಯ ಬೀಡಿನಗುಡ್ಡೆ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮದ ನೇರ ಪ್ರಸಾರಗೊಳ್ಳಲಿದ್ದು, ಈ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿಯ ಶಾಸಕರಾದ ಕೆ.ರಘುಪತಿ ಭಟ್, ಕಾರ್ಕಳ ಶಾಸಕರಾದ ವಿ.ಸುನೀಲ್ ಕುಮಾರ್, ಕಾಪು ಶಾಸಕರಾದ ಲಾಲಾಜಿ ಆರ್.ಮೆಂಡನ್, ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕಾರದ ಬಿ.ಎಂ.ಸುಕುಮಾರ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದು, ಪ್ರಧಾನಿಯವರೊಂದಿಗೆ ನೇರ ಚರ್ಚೆ ನಡೆಸಲಿದ್ದಾರೆಂದು ತಿಳಿಸಿರುವ ಮಟ್ಟಾರ್ ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಿದ್ದಾರೆ. ಈ ಯೋಜನೆಯನ್ವಯ ಜಿಲ್ಲೆಯ ಎಲ್ಲಾ ಮನೆಗಳಿಗೆ ಪೈಪ್ ಲೈನ್ ಮುಖಾಂತರ ಗ್ಯಾಸ್ ಸಂಪರ್ಕ ಹೊಂದಲು ಅವಕಾಶವಿದ್ದು, ಅತ್ಯಂತ ಕಡಿಮೆ ವೆಚ್ಚದಲ್ಲಿ ಗ್ಯಾಸ್ ಪೂರೈಕೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಕೀರ್ತಿಶೇಷರಾದ ಕೇಂದ್ರ ಸಚಿವರಾಗಿದ್ದ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ನಾಯಕ ಅನಂತ್ಕುಮಾರ್ ಅವರಿಗೆ ಸಾರ್ವಜನಿಕ ನೆಲೆಯಲ್ಲಿ ರಾಜಕೀಯ ರಹಿತವಾಗಿ ಶ್ರದ್ಧಾಂಜಲಿ ಸಭೆ ದಿನಾಂಕ: 22-11-2018 ರ ಗುರುವಾರ ಸಂಜೆ 5.00 ಗಂಟೆಗೆ ಉಡುಪಿ ಅಜ್ಜರಕಾಡು ಪುರಭವನದಲ್ಲಿ ನಡೆÉಯಲಿದ್ದು, ಪರಮಪೂಜ್ಯ ಪೇಜಾವರ ಶ್ರೀಗಳು ನುಡಿನಮನವನ್ನು ನಡೆಸಿಕೊಡಲಿದ್ದಾರೆ. ವಿಧಾನ ಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ, ಜಿಲ್ಲೆಯ ಶಾಸಕರಾದ ಕೆ.ರಘುಪತಿ ಭಟ್, ವಿ.ಸುನೀಲ್ ಕುಮಾರ್, ಲಾಲಾಜಿ ಆರ್.ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.
ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಎಲ್ಲಾ ಧರ್ಮದ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಂತ್ ಕುಮಾರ್ರವರಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ಮಟ್ಟಾರ್ ವಿನಂತಿಸಿದ್ದಾರೆ.


Spread the love

Exit mobile version