ರೈಲ್ವೆ ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಲು ಮನವಿ
ಮಂಗಳೂರು ಮಹಾನಗರ ಪಾಲಿಕೆಯ ಅಳಪೆ ವಾರ್ಡಿನ ಸಿರ್ಲಪಡ್ಪುನಲ್ಲಿ ರೈಲ್ವೆ ಇಲಾಖೆಯು ಹೊಸ ಸುರಂಗ ಮಾರ್ಗದ ಕಾಮಗಾರಿಯನ್ನು ಪ್ರಾರಂಬಿಸಿದ್ದು ಆತ್ಯಂತ ಧಾರಣ ಶಕ್ತಿಯ ರಾಸಾಯನಿಕವನ್ನು ಬಳಸಿ ಸುರಂಗವನ್ನು ನಿರ್ಮಿಸುತ್ತಿದ್ದು ಇದರಿಂದ ನೂರಾರು ಮನೆಗಳು, ಮನೆಯ ಗೋಡಗಳು ಹಾನಿಗೊಂಡ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಮಾಜಿ ಕೊರ್ಪರೇಟರ್ ಪ್ರಕಾಸ್, ಸ್ಥಳೀಯ ವಾರ್ಡಿನ ಕಾಂಗ್ರಸ್ಸ್ ಆದ್ಯಕ್ಷ ಡೆನಿಸ್ ಡಿಸಿಲ್ವ ಹಾಗೂ ಹೆನ್ರಿ ಡಿಸೋಜವರವ ಮುಖಂಡತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಮನವಿಗೆ ತುರ್ತು ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತ ರವಿಚಂದ್ರ ನಾಯಕ್‍ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಮಾಗಾರಿ ನಡೆದ ಸ್ಥಳ ಹಾಗೂ ಹಲವು ಮನೆಗಳ ಗೋಡೆಗಳು ಬಿರುಕು ಉಂಟಾಗಿದ್ದು ಈ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸ್ಥಳೀಯ ಮುಖಂಡರಾದ ಶ್ರೀಮತಿ ರೆಜಿನಾ ಲೋಬೊ ಮಾತನಾಡಿ, ರಸಾಯನಿಕವನ್ನು ಬಳಸುವಾಗ ಸುಮಾರು 1000 ಮೀಟರ್ ಭೂಮಿ ಕಂಪನಗೊಳ್ಳುತ್ತದೆ, ಕಿಟಿಕಿ ಬಾಗಿಲುಗಳು ಅಲುಗಾಡುತ್ತವೆ, ಮನೆಗಳಿಗೆ ದೊಡ್ಡ ದೊಡ್ಡ ಬಿರುಕುಗಳು ಉಂಟಾಗಿವೆ., ಮನೆಯಲ್ಲಿ ಚಿಕ್ಕ ಮಕ್ಕಳು, ಹಿರಿಯರು ಭಯ ಭೀತರಾಗಿ ರಾತ್ರಿ ನಿದ್ದೆ ಮಾಡುವುದಿಲ್ಲ ಎಂದು ಅಳಲನ್ನು ತೋಡಿಗೊಂಡರು. ಸ್ಥಳಿಯರಾದ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ಮಾತನಾಡಿ, ಎಲ್ಲಾ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ದು, ಮನವಿಗೆ ಸ್ಪಂದಿಸದಿದ್ದಲ್ಲಿ ತೀವ್ರ ರೀತಿಯ ಹೋರಾಟ ನಡೆಸುತ್ತೇವೆ, ಅಧುನಿಕ ತಂತ್ರಜಾÐನ ಯಂತ್ರಗಳನ್ನು ಬಳಸಿ ಸುರಂಗವನ್ನು ಮಾಡಲು ನಮ್ಮ ಅಭ್ಯಂತರವಿಲ್ಲ. ಅದರೆ ಅವೈಜ್ಞಾನಿಕ ಕಾಮಗಾರಿಯನ್ನು ಮಾಡಲು ನಾವು ಬಿಡುವುದಿಲ್ಲ ಮಾತ್ರವಲ್ಲ ಹಾನಿಗೊಳಗಾದ ಮನೆಗಳಿಗೆ ರೈಲ್ವೆ ಇಲಾಖೆಯು ಸೂಕ್ತ ಪರಿಹಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಳಪೆ ಗ್ರಾಮಲೆಕ್ಕಗ ಸುಶಾಂತ್, ಪದವು ವಾರ್ಡಿನ ಗ್ರಾಮಲೆಕ್ಕಿಗ ಕಿರಣ್, ಸಹಾಯಕ ಗ್ರಾಮ ಲೆಕ್ಕಿಗ ಮನೋಜ್, ಸ್ಥಳೀಯ ಮುಖಂಡರಾದ ಸಾತುರಿನ್ ಮೊಂತೇರೊ, ಲೀಝಿ ಡಿಸೋಜ, ಇಗ್ನೇಷಿಯಸ್ ಡಿಸೋಜ, ರೀಟಾ ಡಿಸೋಜ, ಮರಿಯಾ ರೇಗೊ, ರಾಜೇಶ್ ಲೋಬೊ, ಕ್ಲಾರಾ ಸಲ್ದಾನಾ, ಜೆನಿಫರ್ ಲೋಬೊ, ರೋಶನ್ ಡಿಸೋಜ, ಕಾರ್ಮಿನ್ ಪಿಂಟೊ, ಬಾಬಿತ ಸಿಕ್ವೇರಾ, ಮೀನಾ ರೇಗೊ ಉಪಸ್ಥಿತರಿದ್ದರು.