Home Mangalorean News Kannada News ಲಿಫ್ಟ್‌ನಲ್ಲಿ ಸಿಲುಕಿ 7 ವರ್ಷದ ಬಾಲಕ ಮೃತ್ಯು

ಲಿಫ್ಟ್‌ನಲ್ಲಿ ಸಿಲುಕಿ 7 ವರ್ಷದ ಬಾಲಕ ಮೃತ್ಯು

Spread the love

ಲಿಫ್ಟ್‌ನಲ್ಲಿ ಸಿಲುಕಿ 7 ವರ್ಷದ ಬಾಲಕ ಮೃತ್ಯು

ಮಂಗಳೂರು: ಬಾಲಕನೊಬ್ಬ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟ ಘಟನೆ ವಾಸ್‌ಲೇನ್‌ನ ಅಪಾರ್ಟ್‌ಮೆಂಟ್‌ನಲ್ಲಿ ಇಂದು ನಡೆದಿದೆ. ಬಂಟ್ವಾಳ ಮೂಲದ ಅಡ್ಡೂರಿನ ದಂಪತಿಯ ಪುತ್ರ ಮುಹಮ್ಮದ್ ಸಿನಾನ್ (7) ಮೃತಪಟ್ಟ ಬಾಲಕ.

ಅಪಾರ್ಟ್‌ಮೆಂಟ್ ಲಿಪ್ಟ್ ಹಳೆಯದಾಗಿದ್ದು, ಸಿನಾನ್ ಲಿಫ್ಟ್‌ನ ಬಾಗಿಲಿನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಿನಾನ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ


Spread the love

Exit mobile version