Home Mangalorean News Kannada News ಮಂಗಳೂರಿಗೆ ಬಂದಿಳಿದ ಲಿವಾ ಮಿಸ್ ದಿವಾ ಯೂನಿವರ್ಸ್ 2020 ಅ್ಯಡ್ಲಿನ್ ಕ್ಯಾಸ್ತಲಿನೊ  ಗೆ ಅದ್ದೂರಿ ಸ್ವಾಗತ

ಮಂಗಳೂರಿಗೆ ಬಂದಿಳಿದ ಲಿವಾ ಮಿಸ್ ದಿವಾ ಯೂನಿವರ್ಸ್ 2020 ಅ್ಯಡ್ಲಿನ್ ಕ್ಯಾಸ್ತಲಿನೊ  ಗೆ ಅದ್ದೂರಿ ಸ್ವಾಗತ

Spread the love

ಮಂಗಳೂರಿಗೆ ಬಂದಿಳಿದ ಲಿವಾ ಮಿಸ್ ದಿವಾ ಯೂನಿವರ್ಸ್ 2020 ಅ್ಯಡ್ಲಿನ್ ಕ್ಯಾಸ್ತಲಿನೊ  ಗೆ ಅದ್ದೂರಿ ಸ್ವಾಗತ

ಮಂಗಳೂರು: ಲಿವಾ ಮಿಸ್ ದಿವಾ ಯೂನಿವರ್ಸ್ 2020 ಗೆದ್ದ ನಂತರ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ ಅ್ಯಡ್ಲಿನ್ ಕ್ಯಾಸ್ತಲಿನೊ ಅವರನ್ನು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು. ಈ ಮಹತ್ವಾಕಾಂಕ್ಷಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕ್ಯಾಸ್ಟೊಲಿನ ತಮ್ಮ ಸೊಬಲು, ಸಮತೋಲನ ಮತ್ತು ಚೈತನ್ಯದ ಮೂಲಕ ದೇಶದ ಕಣ್ಮಣಿ ಎನಿಸಿದ್ದಾರೆ.

ಸಂತ ಕ್ಸೇವಿಯರ್ ಕಾಲೇಜಿನ ವಿದ್ಯಾರ್ಥಿನಿಯಾದ ಆಡ್ಲೈನ್, ಕೃಷಿ ಕ್ಷೇತ್ರದಲ್ಲಿನ ತಮ್ಮ ಅನುಭವದ ಮೂಲಕ ಕೃಷಿ ವ್ಯವಹಾರದಲ್ಲಿ ಕಾರ್ಯ ನಿರ್ವಹಿಸಲು ಮತ್ತು ರೈತರಿಗೆ ಬೆಂಬಲ ನೀಡುವ ಮಹದಾಸೆ ಹೊಂದಿದ್ದಾರೆ. ನಗರದಲ್ಲಿ ಪತ್ರಕರ್ತರ ಜತೆ ಮನಬಿಚ್ಚಿ ಮಾತನಾಡಿದ ಅವರು ತಮ್ಮ ಮುಂದಿನ ಕಾರ್ಯಯೋಜನೆಗಳ ವಿವರ ನೀಡಿದರು.

ರೈತರ ಆದಾಯ ಹೆಚ್ಚಿಸಲು ಮತ್ತು ಸುಸ್ಥಿರ ಜೀವನೋಪಾಯ ನಿರ್ಮಿಸಲು ಸಹಾಯ ಮಾಡವ ಬಯಕೆ ಹೊಂದಿದ್ದು, ಸಮಾನ ದೃಷ್ಟಿ ಹೊಂದಿದ ಎನ್‍ಜಿಓಗಲು ಮತ್ತು ದೂರದೃಷ್ಟಿ ಇರುವ ಜನರನ್ನು ಒಟ್ಟುಗೂಡಿಸಿ ಒಟ್ಟಾರೆ ಗ್ರಾಮೀಣ ಸಮುದಾಯಕ್ಕೆ ಉತ್ತಮ ಪ್ರತಿಫಲ ನೀಡುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದರು. ಮಹಿಳೆಯರಲ್ಲಿ ನಾಯಕತ್ವದ ಗುಣಗಳನ್ನು ಪ್ರೋತ್ಸಾಹಿಸುವ ಮನಸ್ಸು ಹೊಂದಿದ್ದಾಗಿ ವಿವರಿಸಿದರು.

ಶಾಲಾ ದಿನಗಳಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿಯೂ ಆಗಿದ್ದ ಕ್ಯಾಸ್ಟಲಿನೊ, ಕ್ರೀಡೆ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಪ್ಯಾರಾ ಒಲಿಂಪಿಕ್ಸ್‍ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಯ ದೀಪಾ ಮಲಿಕ್ ಅವರನ್ನು ಸ್ಫೂರ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸುತ್ತಮುತ್ತಲ ಸಮುದಾಯದ ಉನ್ನತಿಗಾಗಿ ಶ್ರಮಿಸುವ ಹಾಗೂ ಅವರ ಅಡೆ ತಡೆಗಳನ್ನು ನಿವಾರಿಸಿ ಪ್ರೇರೇಪಿಸಲು ಕೂಡಾ ಒತ್ತು ನೀಡುವುದಾಗಿ ತಿಳಿಸಿದರು.
ಬ್ಯಾಡ್ಮಿಂಟನ್ ಕ್ರೀಡೆಯ ಜತೆಗೆ ಪಾಶ್ಚಾತ್ಯ ನೃತ್ಯ, ಓದು ಹಾಗೂ ಸೈಕ್ಲಿಂಗ್ ಕೂಡಾ ತನ್ನ ಹವ್ಯಾಸ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

“ನನ್ನ ಹೆತ್ತವರ ಮಗಳಾಗಿ ಅಷ್ಟೇ ಅಲ್ಲದೆ, ನಗರದ ಭರವಸೆ ಮತ್ತು ಹೆಮ್ಮೆಯಾಗಿ ಮನೆಗೆ ಮರಳುತ್ತಿರುವುದು ಅಪಾರ ಸಂತಸ ತಂದಿದೆ. ಇದು ನಿಜಕ್ಕೂ ಊಹಾತೀತ. ನಾನು ಕಂಡಿದ್ದ ಕನಸು ಇದೀಗ ನನಸಾಗಿದೆ. ಹಲವು ಕಡೆಗಳಿಗೆ ತೆರಳಿ ಪ್ರತಿಯೊಂದು ಸಂಸ್ಕøತಿಯನ್ನು ಅರ್ಥ ಮಾಡಿಕೊಂಡು ವಿವಿಧ ಸಂಸ್ಕರತಿಗಳ ಜನರನ್ನು ಭೇಟಿ ಮಾಡುವುದು ಮತ್ತು ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ನಮ್ಮ ದೇಶದ ಸಂಸ್ಕøತಿಯನ್ನು ಹೇಗೆ ಉತ್ತಮವಾಗಿ ಪ್ರತಿನಿಧಿಸಬಹುದು ಎನ್ನುವ ಮಾರ್ಗಸೂಚಿ ರೂಪಿಸಲು ಆದ್ಯತೆ ನೀಡುತ್ತೇನೆ” ಎಂದು ಹೇಳಿದರು.
ನೆಟ್‍ವರ್ಕಿಂಗ್ ಮತ್ತು ಸಂವಹನ ಕೌಶಲ ಸುಧಾರಣೆಗೂ ಒತ್ತು ನೀಡುವುದಾಗಿ ತಿಳಿಸಿದರು.


Spread the love

Exit mobile version