Home Mangalorean News Kannada News ಲೋಕ ಸಭಾ ಚುನಾವಣೆಗೆ ಕ್ರಿಶ್ಚಿಯನ್ ಸಮುದಾಯದವರನ್ನು ಕರ್ತವ್ಯಕ್ಕೆ ನಿಯೋಜಿಸದೆ ಇರಲು ಮನವಿ

ಲೋಕ ಸಭಾ ಚುನಾವಣೆಗೆ ಕ್ರಿಶ್ಚಿಯನ್ ಸಮುದಾಯದವರನ್ನು ಕರ್ತವ್ಯಕ್ಕೆ ನಿಯೋಜಿಸದೆ ಇರಲು ಮನವಿ

Spread the love

ಲೋಕ ಸಭಾಚುನಾವಣೆಗೆ ಕ್ರಿಶ್ಚಿಯನ್ ಸಮುದಾಯದವರನ್ನುಕರ್ತವ್ಯಕ್ಕೆನಿಯೋಜಿಸದೆಇರಲು ಮನವಿ

ಭಾರತೀಯ ಚುನಾವಣಾ ಆಯೋಗವು ಕರ್ನಾಟಕದಲ್ಲಿ 18 ಮತ್ತು 23 ನೇ ಎಪ್ರಿಲ್ 2019 ರಂದು ಲೋಕ ಸಭಾ ಚುನಾವಣೆಗಾಗಿ ದಿನಾಂಕ ನಿಗದಿಪಡಿಸಿದೆ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಿನಾಂಕ 18.01.2019 ರಂದು ಚುನಾವಣೆ ದಿನಾಂಕವಾಗಿರುತ್ತದೆ.

ಈ ಎರಡೂ ಜಿಲ್ಲೆಗಳಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಜನರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿದೆ. ಆದರೆ ದಿನಾಂಕ 18.04.2019 ಕ್ರಿಶ್ಚಿಯನ್ ಸಮುದಾಯವರಿಗೆ ಪವಿತ್ರ ದಿನವಾಗಿದ್ದು, ಆ ದಿವಸ ಯೇಸುಕ್ರಿಸ್ತರು ಪರಮ ಪ್ರಸಾರವನ್ನು ಸ್ಥಾಪಿಸಿದ ದಿನವೆಂದು ಪವಿತ್ರ ಗುರುವಾರವಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ.ಆ ದಿನದಂದು ಸಂಜೆ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ ಹಾಗೂ ಕ್ರಿಶ್ಚಿಯನ್ ಸಮುದಾಯದ ಎಲ್ಲಾ ಜನರು ಭಕ್ತಿಯಿಂದ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಾರೆ. ಚುನಾವಣೆ ಕೆಲಸಕ್ಕೆ ಅಧಿಕಾರಿ/ನೌಕರರು/ಶಿಕ್ಷಕರನ್ನು ನಿಯೋಜಿಸಿರುವುದರಿಂದ ಕ್ರಿಶ್ಚಿಯನ್ ಸಮುದಾಯದ ಅಧಿಕಾರಿ/ನೌಕರರು/ಶಿಕ್ಷಕರು ಕಡ್ಡಾಯವಾಗಿ ಚುನಾವಣಾ ಕೆಲಸಕ್ಕೆ ನಿಯೋಜಿಸಲ್ಪಟ್ಟರೆ ಅವರಿಗೆ ಅಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇದು ಅವರ ಧಾರ್ಮಿಕ ಹಕ್ಕಿನ ವಿರುದ್ಧವಾಗಿರುತ್ತದೆ.

ಆದುದರಿಂದ ಸಂವಿದಾನದಲ್ಲಿ ನೀಡಲ್ಪಟ್ಟ ಧಾರ್ಮಿಕ ಹಕ್ಕನ್ನುಕಾಪಡಲು ದಿನಾಂಕ 18.04.2019 ರ ಮತದಾನದ ದಿನಾಂಕವನ್ನು ಬದಲಾಯಿಸಿ ದಿನಾಂಕ 23.04.2019 ರಂದು ನಿಗದಿಪಡಿಸಲು ಕೋರುತ್ತೇನೆ. ಒಂದು ವೇಳೆ ಆಡಳಿತಾತ್ಮಕ ದೃಷ್ಟಿಯಿಂದ ಇದು ಸಾಧ್ಯವಾಗದೇ ಇದ್ದರೆ ದಿನಾಂಕ 18.04.2018 ರ ಚುನಾವಣಾ ಕೆಲಸ ಕಾರ್ಯಗಳಿಗೆ ಕ್ರಿಶ್ಚಿಯನ್ ಸಮುದಾಯದ ಅಧಿಕಾರಿ/ ನೌಕರರು/ಶಿಕ್ಷಕರನ್ನು ನಿಯೋಜಿಸದೆ ಇರಲು ಕ್ರ್ರಿಶ್ಚಿಯನ್ ಸರಕಾರಿ ಅದಿಕಾರಿ / ನೌಕರರ ಮತ್ತು ಇಂಜಿನಿಯರ್‍ ಗುತ್ತಿಗೆದಾರರ ಸಂಘಟನೆ  ಫೋಕಸ್ ನ ಪರವಾಗಿ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಿದ್ದು ಇದಕ್ಕೆ ಜಿಲ್ಲಾಧಿಕಾರಿಯವರು ಸೂಕ್ತ ಕ್ರಮ ಕೈಗೊಳ್ಳಲು ಸಂಘಟನೆಯ ಸಂಚಾಲಕರಾದ ಸುಶಿಲ್ ನೋರೊನ್ನಾರವರು ಒತ್ತಾಯಿಸಿದ್ದಾರೆ.


Spread the love

Exit mobile version