ವಸಂತ ಗಿಳಿಯಾರ್, ಹರೀಶ್ ಪೂಂಜ ಫ್ಯಾನ್ಸ್ ಕ್ಲಬ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ‘ಬೆಳ್ತಂಗಡಿಯಲ್ಲಿ ಸೋತವನ ಫಾರಂ ಹೌಸ್ ನಲ್ಲಿ ತಿಮರೋಡಿ ಆಶ್ರಯ’ ಮತ್ತು ತಿಮರೋಡಿಗೆ ರಕ್ಷಣೆ ನಿಂತಿತಾ ಕಾಂಗ್ರೆಸ್ ಹೈಕಮಾಂಡ್’ ಎಂದು ಪೋಸ್ಟ್ ಮಾಡಿರುವ ವಸಂತ್ ಗಿಳಿಯಾರ್ ಮತ್ತು ಹರೀಶ್ ಪೂಂಜ ಫ್ಯಾನ್ಸ್ ಕ್ಲಬ್ ಕರ್ನಾಟಕ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕವಾಗಿ BNS-352,353(2) ಅಡಿಯಲ್ಲಿ ಸೆ.8 ರಂದು ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಗೌಡ ಅವರು ಸೆ.8 ರಂದು ದೂರು ನೀಡಿದ್ದು, ಅದರಂತೆ ವಸಂತ್ ಗಿಳಿಯಾರ್ ಮತ್ತು ಹರೀಶ್ ಪೂಂಜ ಫ್ಯಾನ್ಸ್ ಕ್ಲಬ್ ಕರ್ನಾಟಕ ಫೇಸ್ ಬುಕ್ ಖಾತೆಯ ವಿರುದ್ಧ ಎರಡು ಪ್ರಕರಣ ದಾಖಲಾಗಿದೆ.