Home Mangalorean News Kannada News ವಿಟ್ಲ: ಮತ ಚಲಾಯಿಸಿದ ಬಳಿಕ ಮತದಾರ ಹೃದಯಾಘಾತದಿಂದ ಸಾವು

ವಿಟ್ಲ: ಮತ ಚಲಾಯಿಸಿದ ಬಳಿಕ ಮತದಾರ ಹೃದಯಾಘಾತದಿಂದ ಸಾವು

Spread the love

ವಿಟ್ಲ: ಮತ ಚಲಾಯಿಸಿ ಹೊರಬರುತ್ತಿದ್ದಂತೆಯೇ ಮತದಾರರೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಶುಕ್ರವಾರ ಕನ್ಯಾನದಲ್ಲಿ ನಡೆದಿದೆ.

ಮೃತಪಟ್ಟ ವೈಕ್ತಿಯು ಪೊಯ್ಯಗದ್ದೆ ನಿವಾಸಿ ಪಕ್ರು ಬ್ಯಾರಿ ಪುತ್ರ  ಅಬ್ದುಲ್ಲ (50)  ಎಂದು ಗುರುತಿಸಲಾಗಿದೆ. ಕನ್ಯಾನ ಸರಕಾರಿ ಕಾಲೇಜಿ ಮತಕೇಂದ್ರ ಸಂಖೈ 5 ರಲ್ಲಿ ಮತಚಲಾಯಿಸಿ ಹೊರಬರುತ್ತಿದ್ದಂತೆಯೇ ಕುಸಿದು ಬಿದ್ದ ಅವರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ  ಪರಿಶೀಲನೆ ನಡೆಸಿದ ವೈದ್ಯರು ಅಬ್ದುಲ್ಲ ಮೃತಪಟ್ಟಿರುವುದಾಗಿ ತಿಳಿಸಿದರು.

ಮೃತರು ಪತ್ನಿ. ನಾಲ್ವರು ಪುತ್ರರು ಹಾಗೂ  ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


Spread the love

Exit mobile version