ವಿದುಷಿ ದೀಕ್ಷಾ ಅವರಿಗೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಭಿನಂದನೆ
ಉಡುಪಿ: ಸುಮಾರು 216 ಗಂಟೆಗಳ ಕಾಲ ನಿರಂತರವಾಗಿ ನೃತ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದ ವಿದುಷಿ ದೀಕ್ಷಾ.ವಿ. ಅವರನ್ನು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅಭಿನಂದಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಸ್ವಾಗತಿಸಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಲೆ ದೀಕ್ಷಾ ಅವರನ್ನು ಸಭೆಗೆ ಪರಿಚಯಿಸಿದರು. ನಂತರ ಶಾಲು ಹೊದಿಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ದೀಕ್ಷಾ ಅವರ ಪತಿ ರಾಹುಲ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಧನ್ಯವಾದ ಸ್ವೀಕರಿಸಿದ ದೀಕ್ಷಾ ಅವರು ಮಾತನಾಡಿ, “ಮಹಿಳಾ ಕಾಂಗ್ರೆಸ್ ಸಮಿತಿ ಗುರುತಿಸಿ ಗೌರವಿಸಿರುವುದಕ್ಕೆ ನಾನು ಋಣಿಯಾಗಿದ್ದೇನೆ. ಈ ಸಾಧನೆಗೆ ಅನೇಕರು ಪ್ರೋತ್ಸಾಹ ಹಾಗೂ ಸ್ಪೂರ್ತಿ ನೀಡಿದರು. ಜೊತೆಗೆ ನನ್ನ ಆತ್ಮವಿಶ್ವಾಸ, ದೃಢತೆ ಹಾಗೂ ಛಲವೇ ನನಗೆ ಪಥಪ್ರದರ್ಶಕವಾಯಿತು. ಮಾನಸಿಕವಾಗಿ ಗಟ್ಟಿಯಾಗಿದ್ದರೆ ಶರೀರವೂ ಅದನ್ನೇ ಅನುಸರಿಸುತ್ತದೆ. ಅದೇ ನನ್ನ ಸಾಧನೆಯ ಹಿಂದಿನ ರಹಸ್ಯ” ಎಂದು ಹೇಳಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಶುಭಾಶಯ ಕೋರಿದರು. ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಕೋಟ ಬ್ಲಾಕ್ ಅಧ್ಯಕ್ಷೆ ರೇಖಾ ಪಿ. ಸುವರ್ಣ, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷೆ ಅನಿತಾ ಬಾಬು ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಗೋಪಿ ಕೆ. ನಾಯ್ಕ್, ಕಾಪು ಬ್ಲಾಕ್ ಕಾಂಗ್ರೆಸ್ನ ಆಶಾ ಆಂಚನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಾಗೇಶ್ ಕುಮಾರ್, ಬಾಲಕೃಷ್ಣ ಪೂಜಾರಿ, ಸಂಜಯ್ ಆಚಾರ್ಯ, ಆಶಾ ಚಂದ್ರಶೇಖರ್, ಚಂದ್ರಿಕಾ ಶೆಟ್ಟಿ, ಸರಸ್ವತಿ ಉದ್ಯಾವರ, ಹೆಲೆನ್ ಫೆರ್ನಾಂಡಿಸ್, ಸುಗಂಧಿ ಶೇಖರ್, ಜ್ಯೋತಿ, ಮೀನಾಕ್ಷಿ ಮಾಧವ, ಸಂಧ್ಯಾ ತಿಲಕ್ ರಾಜ್, ಪುಷ್ಪಾ ಆಂಚನ್, ಶೋಭಾ ಬೇಕಲ್, ಸುಂದರಿ, ರಮಾದೇವಿ, ಸುರೇಂದ್ರ ಆಚಾರ್ಯ, ಸುಮನಾ ಮುಂತಾದವರು ಭಾಗವಹಿಸಿದರು. ಉಪಾಧ್ಯಕ್ಷೆ ಚಂದ್ರಿಕಾ ಶೆಟ್ಟಿ ಧನ್ಯವಾದವಿತ್ತರು.