Home Mangalorean News Kannada News ವಿದುಷಿ ಪೂರ್ಣಿಮಾಗೋಖಲೆಯವರ ಭರತನಾಟ್ಯ ರಂಗಪ್ರವೇಶ

ವಿದುಷಿ ಪೂರ್ಣಿಮಾಗೋಖಲೆಯವರ ಭರತನಾಟ್ಯ ರಂಗಪ್ರವೇಶ

Spread the love

ಮಂಗಳೂರು: ಇತ್ತೀಚಿಗೆ ಮಂಗಳೂರಿನ ಪುರಭವನದಲ್ಲಿ ಶ್ರೀ ಶಾರದಾ ನಾಟ್ಯಾಲಯದ ನೃತ್ಯಗುರು ವಿದುಷಿ ಭಾರತಿ ಸುರೇಶ್‍ರವರ ಶಿಷ್ಯೆ ವಿದುಷಿ ಪೂರ್ಣಿಮಾಗೋಖಲೆಯವರ ಭರತನಾಟ್ಯರಂಗಪ್ರವೇಶಅತ್ಯುತ್ತಮವಾಗಿ ಮೂಡಿ ಬಂತು.

ತನ್ನ ನೃತ್ಯ ಪ್ರದರ್ಶನವನ್ನು ಎಂದಿನಂತೆ ಪುಷ್ಪಾಂಜಲಿಯೊಂದಿಗೆ ಪ್ರಾರಂಭಿಸಿದ ಪೂರ್ಣಿಮಾ, ಸಾಂಪ್ರದಾಯಿಕ ನೃತ್ಯಕಾರ್ಯಕ್ರಮದಆರಂಭದಲ್ಲಿ ಮಾಡುವಂತಹಅಲಾರಿಪುವಿನ ತುಣುಕು ಹಾಗೂ ಅದರೊಂದಿಗೆಅಷ್ಟದಿಕ್ಪಾಲಕರನ್ನು ವಂದಿಸುತ್ತಾ ಮಾಡಿದ ನೃತ್ಯ ವಿಶೇಷವಾಗಿತ್ತು. ಜೊತೆಗೆ ಮೋಹನಕಲ್ಯಾಣಿರಾಗದ ಆದಿತಾಳದ ಗಣಪತಿ ಸ್ತುತಿಯನ್ನೂಜೋಡಿಸಲಾಗಿತ್ತು.

image001rangapravesha-20160617-001

ಮಧುರೈಕೃಷ್ಣನ್‍ದೇವಿಯಕುರಿತಾಗಿ ರಚಿಸಿದರಾಗಮಾಲಿಕೆ ಮಿಶ್ರಛಾಪು ತಾಳದ ಶಬ್ದಂನಲ್ಲಿ ಮಹಿಷಾಸುರ ಮರ್ಧನ ಹಾಗೂ ಷಣ್ಮುಖಜನನದಕಥೆಯನ್ನು ವಿಸ್ತಾರವಾಗಿ ಪ್ರದರ್ಶಿಸಲಾಯಿತು.

ನೃತ್ಯಕಾರ್ಯಕ್ರಮದ ಬಹುಮುಖ್ಯಘಟ್ಟ ಪದವರ್ಣ.ಬೆಂಗಳೂರಿನ ಖ್ಯಾತ ಮೃದಂಗವಾದಕರಾದ ಜಿ. ಗುರುಮೂರ್ತಿಯವರು ರಚಿಸಿದ ರಾಗಮಾಲಿಕೆ ಆದಿತಾಳದ ವರ್ಣದಲ್ಲಿ ನೀಲಮೇಘ ಶ್ಯಾಮವರ್ಣವನ್ನು ಹೊಂದಿದ ನನ್ನ ಸ್ವಾಮಿಯನ್ನುಕರೆತಾರೆ ಸಖಿ ಎಂದು ನಾಯಕಿಯು ಪರಿಪರಿಯಾಗಿ ಕೇಳಿಕೊಳ್ಳುತ್ತಾಳೆ.ಕೃಷ್ಣನಿಗನುಗುಣವಾದ ನವರಸಗಳನ್ನು ಈ ಪದವರ್ಣದಲ್ಲಿ ಪ್ರದರ್ಶಿಸಲಾಯಿತು.ನೃತ್ತ ಹಾಗೂ ಅಭಿನಯವನ್ನುಅಚ್ಚುಕಟ್ಟಾಗಿ ಪ್ರದರ್ಶಿಸಿದ ಪೂರ್ಣಿಮಾಅಂಗಶುದ್ಧತೆ ಹಾಗೂ ಭಾವಪ್ರಕಟಣೆಗೆಇನ್ನಷ್ಟುಒತ್ತುಕೊಡಬೇಕಾದುದುಅಗತ್ಯ.

ಮುಂದೆ ಮುದ್ದುಕೃಷ್ಣನನ್ನು ನವರತ್ನಗಳಿಗೆ ಹೋಲಿಸುತ್ತಾ ವರ್ಣಿಸಿರುವ ಅಣ್ಣಾಮಾಚಾರ್ಯರಕೃತಿಗೆಕ್ಷಿಪ್ರವಾಗಿ ಅಭಿನಯಿಸಿದ್ದು ಉತ್ತಮವಾಗಿತ್ತು.

ಕಾರ್ಯಕ್ರಮದ ದ್ವಿತೀಯಾರ್ಧದಲ್ಲಿರಾಗಮಾಲಿಕೆ ಆದಿತಾಳದ ಶಿವಪದಂನಲ್ಲಿ ಶಿವನ ವರ್ಣನೆಯನ್ನುಅತ್ಯಂತ ವಿಭಿನ್ನರೀತಿಯಲ್ಲಿ ಪ್ರಸ್ತುತಪಡಿಸಲಾಯಿತು.  ಸಪ್ತಸ್ವರಗಳಾದ ಸ,ರಿ,ಗ,ಮ,ಪ,ದ,ನಿ,ಗೆ ಶಿವನ ಆಭರಣಗಳನ್ನು ಹೋಲಿಸುತ್ತಾ, ತಾಂಡವಲಾಸ್ಯಗಳ ಸಂಕೇತವಾದಅರ್ಧನಾರೀಶ್ವರನ ವರ್ಣನೆಯನ್ನುಅತೀ ಸುಂದರವಾಗಿ ಹಾಗೂ ವಿಭಿನ್ನವಾಗಿ ನೃತ್ಯ ಸಂಯೋಜಿಸಲಾಗಿತ್ತು.

ಪೂರ್ಣಿಮಾ ಮನಮುಟ್ಟುವಂತೆ ಅಭಿನಯಿಸಿದ ವಾಸಂತಿರಾಗ ಖಂಡಛಾಪುತಾಳದ ಸಂಜೀವಿನಿ ಅಷ್ಟಪದಿ “ಚಾರುಶೀಲೆ” ಅಮೋಘವಾಗಿತ್ತು.ಸಾಂಕೇತಿಕವಾಗಿ ನವಿಲುಗರಿಯನ್ನು ಧರಿಸಿ ಕೃಷ್ಣನಂತೆ ಅಲಂಕರಿಸಿಕೊಂಡು ತನ್ನ ಮನಸ್ಸಿನ ಭಾವನೆಯನ್ನು ಪ್ರಕಟಿಸಿದ ಪರಿಅದ್ಭುತವಾಗಿತ್ತು.

ಜೋಗ್‍ರಾಗಖಂಡತ್ರಿಪುಟ ತಾಳದ ತಿಲ್ಲಾನದಲ್ಲಿ ಸರಸ್ವತಿ, ಲಕ್ಷ್ಮಿ, ಹಾಗೂ ಶಕ್ತಿಯ ವರ್ಣನೆಯುಳ್ಳ ಸಾಹಿತ್ಯ ಸೊಗಸಾಗಿತ್ತು.

ಕೊನೆಯಲ್ಲಿ ಪ್ರದರ್ಶನದ ಮಂಗಳಂನಲ್ಲಿ ಚೊಕ್ಕದಾಗಿದಶಾವತಾರವನ್ನು ಪ್ರಸ್ತುತ ಪಡಿಸಿದ್ದು ವಿಭಿನ್ನವಾಗಿತ್ತು.

ನೃತ್ಯಗುರು ವಿದುಷಿ ಶ್ರೀಮತಿ ಭಾರತಿಸುರೇಶ್‍ರವರ ನಿರ್ದೇಶನದಲ್ಲಿ ನೃತ್ಯಗಳೆಲ್ಲವೂ ಉತ್ತಮವಾಗಿ ಸಂಯೋಜಿಸಲಾಗಿತ್ತು.  ಹಾಡುಗಾರಿಕೆಯಲ್ಲಿವಿದುಷಿ ಶ್ರೀಮತಿ ಶೀಲಾ ದಿವಾಕರ್, ಮೃದಂಗವಾದನದಲ್ಲಿ ವಿದ್ವಾನ್‍ಶ್ರೀ ಬಾಲಚಂದ್ರ ಭಾಗವತ್, ಕೊಳಲು ವಾದನದಲ್ಲಿ ವಿದ್ವಾನ್‍ಶ್ರೀ ಕೆ.ಮುರಳೀಧರ ಉಡುಪಿ, ಪಿಟೀಲಿನಲ್ಲಿ ವಿದ್ವಾನ್‍ಶ್ರೀ ಬಾಲ್‍ರಾಜ್.ಕೆ ಹಾಗೂ ರಿದಂ ಪ್ಯಾಡ್ ನಲ್ಲಿ ವಿದ್ವಾನ್ ಶ್ರೀರಾಘವೇಂದ್ರ ರಂಗಧೋಳ್‍ರವರು ಉತ್ತಮವಾದ ಹಿಮ್ಮೇಳವನ್ನು ಒದಗಿಸಿದ್ದರು.

ಹಲವಾರು ಅಡೆತಡೆಗಳನ್ನು ಎದುರಿಸುತ್ತಾ, ಹೆತ್ತವರ ಪೆÇ್ರೀತ್ಸಾಹ ಹಾಗೂ ಗುರುಗಳ ಆಶೀರ್ವಾದದೊಂದಿಗೆ ಉತ್ತಮ ನೃತ್ಯಗಾರ್ತಿಯಾಗಬೇಕೆಂಬ ಮಹದಾಸೆಯನ್ನು ಹೊಂದಿರುವ ಪೂರ್ಣಿಮಾಖಂಡಿತವಾಗಿಯೂಅತ್ಯುತ್ತಮಕಲಾವಿದೆಯಾಗಿ ಮೂಡಿಬರಲಿ ಎಂದು ಹಾರೈಸೋಣ.

ವಿದುಷಿ ಶ್ರೀಲತ ನಾಗರಾಜ್


Spread the love

Exit mobile version