Home Mangalorean News Kannada News ವಿದ್ಯುತ್ ಮಗ್ಗ ಘಟಕ ಉದ್ಘಾಟನಾ ಕಾರ್ಯಕ್ರಮ

ವಿದ್ಯುತ್ ಮಗ್ಗ ಘಟಕ ಉದ್ಘಾಟನಾ ಕಾರ್ಯಕ್ರಮ

Spread the love

ವಿದ್ಯುತ್ ಮಗ್ಗ ಘಟಕ ಉದ್ಘಾಟನಾ ಕಾರ್ಯಕ್ರಮ

ಮಂಗಳೂರು: ಅಡ್ಯಾರ್ ಗ್ರಾಮ ಪಂಚಾಯತ್, ಅಡ್ಯಾರ್ ಮಂಗಳೂರು ಮತ್ತು ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 27, 2025 ರಂದು ಬೆಳಿಗ್ಗೆ 10:30ಕ್ಕೆ ಅಡ್ಯಾರ್ ಪದವು ಅಂಬೇಡ್ಕರ್ ಭವನದಲ್ಲಿ “ವಿದ್ಯುತ್ ಮಗ್ಗ ಬಟ್ಟೆ ಉತ್ಪಾದನಾ ಘಟಕ” ಉದ್ಘಾಟನಾ ಕಾರ್ಯಕ್ರಮ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಡಾ. ವೈ. ಭರತ್ ಶೆಟ್ಟಿ,  ಶಾಸಕರು, ಮಂಗಳೂರು ಉತ್ತರ, ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ  ಶ್ರೀ ಮಂಜುನಾಥ ಭಂಡಾರಿ, ಎಂಎಲ್ಸಿ, ವಿಧಾನ ಪರಿಷತ್, ಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ಅಬ್ದುಲ್ ಜಲೀಲ್ (ಅಧ್ಯಕ್ಷರು, ಅಡ್ಯಾರ್ ಗ್ರಾಮ ಪಂಚಾಯತ್) ವಹಿಸಿದ್ದರು. ಕಾರ್ಯಕ್ರಮದಲ್ಲಿ  ಪಂಚಾಯತ್ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.

ವಿದ್ಯುತ್ ಮಗ್ಗ ಘಟಕದ ಉದ್ಘಾಟನೆಯೊಂದಿಗೆ ಸ್ಥಳೀಯರ ಕೈಗಾರಿಕಾ ಅವಕಾಶಗಳು ಹೆಚ್ಚಾಗಲಿದ್ದು, ಮಹಿಳೆಯರಿಗೆ ಸ್ವಾವಲಂಬನೆಗೆ ದಾರಿ ಬಿಡಲಿದೆ ಎಂದು ಡಾ. ವೈ ಭರತ್ ಶೆಟ್ಟಿ ಯವರು  ತಿಳಿಸಿದರು.

ವಿದ್ಯುತ್ ಮಗ್ಗ ಘಟಕ ಉದ್ಘಾಟನೆಯು ಗ್ರಾಮೀಣ ಆಧಾರಿತ ಉದ್ಯಮದ ವಿಕಾಸದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು  ಮಂಜುನಾಥ್ ಭಂಡಾರಿ ಅವರು ತಿಳಿಸಿದರು.

ಅಧ್ಯಕ್ಷತೆ  ವಹಿಸಿ ಮಾತನಾಡಿದ ಶ್ರೀಯುತ  ಜಲೀಲ್ ಅವರು ಪಂಚಾಯತ್ ಎಲ್ಲರ ಅಭಿವೃದ್ಧಿಗೆ ಈ

ಮೂಲಕ ತೊಡಗಲಿದೆ ಎಂದರು. ಕಾರ್ಯಕ್ರಮದಲ್ಲಿ ಡಾ. ಇಂಜಗನೇರಿ, ಪ್ರಾಂಶುಪಾಲರು ಸಹ್ಯಾದ್ರಿ ಕಾಲೇಜು  ಸ್ವಾಗತಿಸಿ, ಡಾ ವಿಶಾಲ್ ಸಮರ್ಥ ಅವರು ವಂದಿಸಿದರು.  ಪ್ರೊ ಪದ್ಮನಾಭ ಸಹ್ಯಾದ್ರಿ ಕಾಲೇಜು ಅವರು ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version