Home Mangalorean News Kannada News ವಿಧಾನ ಪರಿಷತ್ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿ ಮಂಜುನಾಥ ಭಂಡಾರಿ ನೇಮಕ

ವಿಧಾನ ಪರಿಷತ್ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿ ಮಂಜುನಾಥ ಭಂಡಾರಿ ನೇಮಕ

Spread the love

ವಿಧಾನ ಪರಿಷತ್ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿ ಮಂಜುನಾಥ ಭಂಡಾರಿ ನೇಮಕ

ಕುಂದಾಪುರ: ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿಯವರನ್ನು ಹಕ್ಕು ಬಾಧ್ಯತಾ ಸಮಿತಿಯ ಅಧ್ಯಕ್ಷರನ್ನಾಗಿ ಕರ್ನಾಟಕ ವಿಧಾನ ಪರಿಷತ್‌ನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 194(4)ರ ಮೇರೆಗೆ ಸಭಾಪತಿಯವರು ನೇಮಕ ಮಾಡಿ ಆದೇಶಿಸಿದ್ದಾರೆ.

ಸದಸ್ಯರಾಗಿ ಭಾರತಿ ಶೆಟ್ಟಿ, ಎಸ್.ವಿ. ಸಂಕನೂರ, ನಿರಾಣಿ ಹಣಮಂತ್ ರುದ್ರಪ್ಪ, ಶರವಣ ಟಿ.ಎ., ಡಾ. ಚಂದ್ರಶೇಖರ್ ಬಸವರಾಜ ಪಾಟೀಲ, ಕೆ.ಎಸ್. ನವೀನ್, ತಿಪ್ಪಣ್ಣಪ್ಪ ಕಮಕನೂರ, ರಾಮೋಜಿಗೌಡ ಅವರನ್ನು ನೇಮಿಸಲಾಗಿದೆ.

ವಿಧಾನ ಪರಿಷತ್ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಮಂಜುನಾಥ ಭಂಡಾರಿಯವರಿಗೆ ಎನ್ ಎಸ್ ಯು ಐ  ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ  ಸೈಯ್ಯದ್ ಯಾಸಿನ್ ಫುರ್ಖಾನ್ ಅವರು ಶುಭಕೋರಿದ್ದಾರೆ.


Spread the love

Exit mobile version