Home Mangalorean News Kannada News ವಿಶೇಷ ಕ್ರೀಡಾಪಟುಗಳೊಂದಿಗೆ ಟೀಮ್ ಎಲಿಗೆಂಟ್ ತಂಡ

ವಿಶೇಷ ಕ್ರೀಡಾಪಟುಗಳೊಂದಿಗೆ ಟೀಮ್ ಎಲಿಗೆಂಟ್ ತಂಡ

Spread the love

ವಿಶೇಷ ಕ್ರೀಡಾಪಟುಗಳೊಂದಿಗೆ ಟೀಮ್ ಎಲಿಗೆಂಟ್ ತಂಡ

ಮಂಗಳೂರು: ನವ ಮಂಗಳೂರಿನಲ್ಲಿ ನಡೆಯಲಿರುವ ಮಂಗಳೂರು ಪ್ರೀಮಿಯಮ್ ಲೀಗ್ ಇದರಲ್ಲಿ ಭಾಗವಹಿಸುತ್ತಿರುವ ಮೂಡಬಿದ್ರೆಯ ಟೀಮ್ ಎಲಿಗೆಂಟ್ ತಂಡ ಸ್ಪೆಷಲ್ ಒಲಿಂಪಿಕ್ಸ್‍ನ ವಿಶೇಷ ಆಡಗಾರರೊಂದಿಗೆ ಜೊತೆಗೂಡಿ ಕ್ರಿಕೆಟ್ ಪಂದ್ಯಾಟವನ್ನು ಉಡುಪಿ ಮತ್ತು ಮಂಗಳೂರು ತಂಡಗಳ ನಡುವೆ ಡಿಸೆಂಬರ್ ತಿಂಗಳ 23ರಂದು ಸಂಜೆ 06.30ಕ್ಕೆ ಆಡಲಿದ್ದು, ಇದರ ಸಲುವಾಗಿ ವಿಶೇಷ ಆಟಗಾರರೊಂದಿಗೆ ಪರಿಚಯಿಸಿಕೊಳ್ಳುವ ಕಾರ್ಯಕ್ರಮವನ್ನು ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಯಿತು.

team-elegant

ಶಾಸಕರಾದ ಜೆ. ಆರ್. ಲೋಬೊರವರು ಟೀಮ್ ಎಲಿಗೆಂಟ್ ತಂಡ ಹಾಗೂ ಸ್ಪೆಷಲ್ ಒಲಿಂಪಿಕ್ಸ್ ತಂಡಕ್ಕೆ ಶುಭ ಹಾರೈಸಿದರು. ಟೀಮ್ ಎಲಿಗೆಂಟ್ ತಂಡದ ಮಾಲ್ಹಕರಾದ ಶ್ರೀಯುತ ಖಾದರ್ ಶರಿನ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ತಂಡದ ಮ್ಯಾನೇಜರ್ ಸುರೇಶ್, ನಿಕಟಪೂರ್ವ ಮೇಯರ್ ಮಹಾಬಲ ಮಾರ್ಲ, ಸೈಂಟ್ ಆಗ್ನೇಸ್ ಸ್ಪೆಷಲ್ ಸ್ಕೂಲಿನ ಪ್ರಾಂಶುಪಾಲೆ ಸಿ| ಮರಿಯ ಶ್ರುತಿ, ಮಹಮ್ಮದ್ ಬಶೀರ್, ಮುಂತಾದವರು ಉಪಸ್ಥಿತರಿದ್ದರು. “ಸಾನಿಧ್ಯ”ದ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿಯವರು ಸ್ವಾಗತಿಸಿದರು. ಸುಮಾ ಡಿ’ಸಿಲ್ವಾರವರು ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version