Home Mangalorean News Kannada News ವಿಶ್ರಾಂತ ಆರ್ಚ್ ಬಿಷಪ್‍ ಡಾ| ಬರ್ನಾಡ್ ಮೊರಾಸ್ ಬೊರಿಮಾರ್ ಚರ್ಚಿಗೆ

ವಿಶ್ರಾಂತ ಆರ್ಚ್ ಬಿಷಪ್‍ ಡಾ| ಬರ್ನಾಡ್ ಮೊರಾಸ್ ಬೊರಿಮಾರ್ ಚರ್ಚಿಗೆ

Spread the love

ವಿಶ್ರಾಂತ ಆರ್ಚ್ ಬಿಷಪ್‍ ಡಾ| ಬರ್ನಾಡ್ ಮೊರಾಸ್ ಬೊರಿಮಾರ್ ಚರ್ಚಿಗೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಸಂತ ಜೋಸೆಫರದೇವಾಲಯ ಬೊರಿಮಾರ್ ಇದಿಗಲೇ 125 ವರ್ಷಗಳನ್ನು ಪೂರೈಸುವ ಹೊಸ್ತಿಲಲಿದ್ದು, ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣಾ ಅಂಗವಾಗಿ ಚರ್ಚಿನ ವಾರ್ಷಿಕೋತ್ಸವವನ್ನು 21-11-2018 ರಂದು ಬೆಳಿಗ್ಗೆ 10:30 ಗಂಟೆಗೆ ಸಂಬ್ರಮದ ಬಲಿ ಪೂಜೆಯೊಂದಿಗೆ ಆಚರಿಸುತ್ತಿದೆ.

1893 ರಂದು ಉದ್ಘಾಟನೆಗೊಂಡ ಈ ಚರ್ಚ್ ತನ್ನ 125 ವರ್ಷಗಳನ್ನು ಪೂರೈಸಿದ ಬಗ್ಗೆ ಪ್ರತಿ ತಿಂಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವಿವಿಧ ಧರ್ಮ ಪ್ರಾಂತ್ಯದ ಬಿಷಪ್ ರವರುಗಳನ್ನು ಆಮಂತ್ರಿಸುತ್ತಿದ್ದು ವೈವಿದ್ಯತರಹದಆಚರಣೆಯನ್ನು ಮಾಡುತ್ತಿದೆ.

ಚರ್ಚಿನ ವಾರ್ಷಿಕೋತ್ಸವದ ಬಲಿಪೂಜೆಯ ನೇತೃತ್ವವನ್ನು ಬೆಂಗಳೂರಿನ ವಿಶ್ರಾಂತ ಆರ್ಚ್ ಬಿಷಪ್, ಅತೀ ವಂದನೀಯ ಡಾ| ಬರ್ನಾಡ್ ಮೋರಾಸ್ ವಹಿಸಲಿದ್ದು ವಲಯದ ಹಾಗೂ ಇತರ ಧರ್ಮಗುರುಗಳು ಅವರೊಂದಿಗೆ ಸಹಕರಿಸಲಿರುವರು ಎಂದು ಚರ್ಚಿನ ಪ್ರದಾನ ಧರ್ಮಗುರುಗಳಾದ ವಂದನೀಯ ಗ್ರೆಗರಿ ಪಿರೇರಾ ಹಾಗೂ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ಜಂಟಿಯಾಗಿ ಪ್ರಕಟನೆಯನ್ನು ನೀಡಿರುತ್ತಾರೆ.


Spread the love

Exit mobile version