ವೀರ ಗಾಥ 3.0 ಸ್ಪರ್ಧೆಯಲ್ಲಿ ಧೃತಿ ಎಸ್ ಆಯ್ಕೆ
ಉಡುಪಿ: ಭಾರತೀಯ ರಕ್ಷಣಾ ಇಲಾಖೆ ಹಾಗೂ ಭಾರತೀಯ ಶಿಕ್ಷಣ ಇಲಾಖೆಗಳ ಜಂಟಿ ಸಹಯೋಗದಲ್ಲಿ ಗ್ಯಾಲಂಟರಿ ಅವಾರ್ಡ್ಸ್ ಪೋರ್ಟಲ್ ಆಫ್ ಇಂಡಿಯಾ ಅಡಿಯಲ್ಲಿ ಆಯೋಜಿಸಲ್ಪಟ್ಟ ವೀರ ಗಾಥ3.0 ಸ್ಪರ್ಧೆಯಲ್ಲಿ ದೇಶದ 100 ವಿದ್ಯಾರ್ಥಿಗಳಲ್ಲಿ 6 ಮತ್ತು 8 ನೇ ತರಗತಿ ವಿಭಾಗದಲ್ಲಿ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ಇದರ 8 ನೇ ತರಗತಿ ವಿದ್ಯಾರ್ಥಿನಿ ಧ್ರತಿ ಎಸ್ ಆಯ್ಕೆಯಾಗಿರುತ್ತಾರೆ.
ಈ ಸ್ಪರ್ಧೆಯಲ್ಲಿ ದೇಶದ 2.43 ಲಕ್ಷ ಶಾಲೆಗಳಿಂದ 1.37 ಕೋಟಿ ವಿದ್ಯಾರ್ಥಿಗಳು 4 ವಿಭಾಗಳಲ್ಲಿ ವಿವಿಧ ವಿಷಯಗಳಲ್ಲಿ ಭಾಗವಹಿಸಿದ್ದು, ಚಿತ್ರಕಲಾ ಕ್ಷೇತ್ರದಲ್ಲಿ ದೃತಿ ಎಸ್ ರವರು ಸಲ್ಲಿಸಿದ ಚಿತ್ರವು ಆಯ್ಕೆಯಾಗಿದ್ದು ಬಹುಮಾನ ಲಭಿಸಿರುತ್ತದೆ.
ಬಹುಮಾನವನ್ನು ಪಡೆಯಲು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಹ್ವಾನಿಸಲಾಗಿದ್ದು, ಡಿಆರ್ ಡಿ ಒ ಭವನ ಸಭಾಂಗಣದಲ್ಲಿ ರಾಷ್ಟ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಹಾಗೂ ರಾಷ್ಟ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ ರವರು ಹಾಗೂ ದೇಶದ ಸೇನೆಯ ಸರ್ವೋಚ್ಚ ನಾಯಕರುಗಳು ಉಪಸ್ಥಿತರಿದ್ದ ವೇದಿಕೆಯಲ್ಲಿ, ರಾಷ್ಟ್ರರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ವರಿಂದ ಪ್ರಶಸ್ತಿಯನ್ನು ಪಡೆಯಲಾಯಿತು.