Home Mangalorean News Kannada News ವೆನ್ಲಾಕ್, ಪಿಲಿಕುಲ ಅಭಿವೃದ್ಧಿಗೆ ಎಂಆರ್ ಪಿಎಲ್ ನೆರವು: ಸಂಸದರಿಂದ ಹಸ್ತಾಂತರ

ವೆನ್ಲಾಕ್, ಪಿಲಿಕುಲ ಅಭಿವೃದ್ಧಿಗೆ ಎಂಆರ್ ಪಿಎಲ್ ನೆರವು: ಸಂಸದರಿಂದ ಹಸ್ತಾಂತರ

Spread the love

ವೆನ್ಲಾಕ್, ಪಿಲಿಕುಲ ಅಭಿವೃದ್ಧಿಗೆ ಎಂಆರ್ ಪಿಎಲ್ ನೆರವು: ಸಂಸದರಿಂದ ಹಸ್ತಾಂತರ

ಎಂ.ಆರ್.ಪಿ. ಎಲ್. ಸಂಸ್ಥೆ ವತಿಯಿಂದ ಸಿ ಎಸ್ ಆರ್ ನಿಧಿಯಿಂದ ವೆನ್ ಲಾಕ್ ಆಸ್ಪತ್ರೆ ಹಾಗೂ ಪಿಲಿಕುಲ ನಿಸಗ೯ಧಾಮಕ್ಕೆ ಕೊಡುಗೆ ನೀಡಲಾಯಿತು.

ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರು ಸಿಎಸ್ಆರ್ ಪತ್ರವನ್ನು ಅಧಿಕಾರಿಗಳಿಗೆ ವಿತರಿಸಿದರು.

ಈ ನಿಧಿಯಿಂದ ವೆನ್ ಲಾಕ್ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್ ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನೂತನವಾದ ಸಜಿ೯ಕಲ್ ವಾಡ್೯ ನಿಮಾ೯ಣಗೊಳ್ಳಲಿದ್ದು, ಹೊಸದಾಗಿ 132 ಹಾಸಿಗೆಗಳು ಸೇಪ೯ಡೆಗೊಳ್ಳಲಿವೆ.

ಪಿಲಿಕುಲ ವಿಜ್ಞಾನ ಕೇಂದ್ರ ಆವರಣದಲ್ಲಿ ರೂ. 5.43 ಕೋಟಿ ವೆಚ್ಚದಲ್ಲಿ ಖಗೋಳ ಶಾಸ್ತ್ರ ಗ್ಯಾಲರಿ ನಿಮಾ೯ಣಗೊಳ್ಳಲಿದೆ.

ಈ ಸಂದಭ೯ದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಎಂಆರ್ ಪಿಎಲ್ ಎಂಡಿ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್,ಜಿ ಜಿ ಎಂ ಕೃಷ್ಣ ಹೆಗ್ಡೆ ಮಿಯಾರ್, ಸಿ ಜಿ ಎಂ ಮನೋಜ್ ಕುಮಾರ್, ಮತ್ತು ಜಿ ಎಂ ಪ್ರಶಾಂತ್ ಬಾಳಿಗಾ,ವೆನ್ ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಪಿಲಿಕುಲ ಆಯುಕ್ತ ಅರುಣ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version