Home Mangalorean News Kannada News ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ತುಂಬು ಗರ್ಭಿಣಿ: ವೈರಲ್ ಆಯ್ತು ಫೇಸ್ಬುಕ್ ಪೋಸ್ಟ್

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ತುಂಬು ಗರ್ಭಿಣಿ: ವೈರಲ್ ಆಯ್ತು ಫೇಸ್ಬುಕ್ ಪೋಸ್ಟ್

Spread the love

ಬೆಂಗಳೂರು/ಉಡುಪಿ: ವೈದ್ಯರ ನಿರ್ಲಕ್ಷ್ಯಕ್ಕೆ ಸಾಕ್ಷಿಯೆಂದು ಹೇಳಿ ಫೇಸ್ ಬುಕ್ ನಲ್ಲಿ ಪೋಸ್ಟ್ ವೊಂದು ಹರಿದಾಡುತ್ತಿದ್ದು, ತುಂಬು ಗರ್ಭಿಣಿಗೆ ಶಸ್ತ್ರ ಚಿಕಿತ್ಸೆ ಮಾಡಿ ಆಕೆಯ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಸಾಮಾಜಿಕ ತಾಣದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ.
ಈ ಕುರಿತಂತೆ ಸಾಮಾಜಿಕ ಜಾಣತಾಣದಲ್ಲಿ ಪೋಸ್ಟ್ ವೊಂದು ಹರಿದಾಡುತ್ತಿದ್ದು, ಈ ಪೋಸ್ಟ್ ನ್ನು ಕನ್ನ ರಾಜನ್ ಎಂಬುವವರು ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ. 48 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ 1,27,000ರಷ್ಟು ಈ ಪೋಸ್ಟ್ ಶೇರ್ ಆಗಿದೆ.

image004fb-post-doctor-egligence-20160614

ಪೋಸ್ಟ್ ನಲ್ಲಿರುವ ಪ್ರಕಾರ ಶ್ರುತಿ ಸುವರ್ಣ (23) ಎಂಬ ಮಹಿಳೆ ಜೂನ್ 10 ರಂದು ಸಾವನ್ನಪ್ಪಿದ್ದಾಳೆಂದು ತಿಳಿಸಲಾಗಿದೆ. ಉಡುಪಿ ಮೂಲದ ಶ್ರುತಿ ತುಂಬು ಗರ್ಭಿಣಿಯಾಗಿದ್ದು, ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದಾರೆ. ಈ ವೇಳೆ ಅನುಭವವಿಲ್ಲದ ವೈದ್ಯರೊಬ್ಬರು ಶ್ರುತಿಗೆ ನೋವುನಿವಾರಕ ಚುಚ್ಚುಮದ್ದನ್ನು ನೀಡಿದ್ದಾರೆ. ನಂತರ ಮಗುವನ್ನು ಹೊರ ತೆಗೆಯಲು ಯತ್ನಿಸಿದ್ದಾರೆ. ಈ ವೇಳೆ ಮಗು ಅರ್ಧಭಾಗದಲ್ಲಿ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ವೈದ್ಯರು ಮುಖ್ಯ ರಕ್ತನಾಳವನ್ನು ಕತ್ತರಿಸಿದ್ದಾರೆ.
ಪರಿಣಾಮ ಶ್ರುತಿ ಅವರಿಗೆ ತೀವ್ರ ರಕ್ತಸ್ರಾವವಾಗಲು ಆರಂಭವಾಗಿದೆ. ಈ ವೇಳೆ ವೈದ್ಯರು ರಕ್ತಸ್ರಾವವನ್ನು ನಿಲ್ಲಿಸಲು ಯತ್ನಿಸಿದ್ದಾರಾದರೂ ಅದು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ. ವೈದ್ಯರ ಮೇಲೆ ನಂಬಿಕೆಯಿಟ್ಟು ನಮ್ಮ ಪ್ರಾಣವನ್ನೇ ಅವರ ಕೈಯಲ್ಲಿಡುತ್ತೇವೆ. ಇಂತಹ ವೈದ್ಯರು ನಿರ್ಲಕ್ಷ್ಯ ವಹಿಸಲು ಹೇಗೆ ಸಾಧ್ಯ? ಎಂದು ಹೇಳಲಾಗಿದೆ.
ಇನ್ನು ಪೋಸ್ಟ್ ನಲ್ಲಿ ಮಹಿಳೆ ಗರ್ಭಿಣಿಯಲ್ಲಿರುವ ಫೋಟೋ ಹಾಗೂ ಆಕೆಯ ಪತಿ ಮಗುವನ್ನು ಹಿಡಿದುಕೊಂಡಿರು ಫೋಟೋ ಕೂಡ ಇದ್ದು, ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಖಾಸಗಿ ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಘಟನೆ ಕುರಿತಂತೆ ಯಾರೊಬ್ಬರೂ ಮಾತನಾಡಿಲ್ಲ. ಹಿರಿಯ ವೈದ್ಯರು ಸಾವು ಸಂಭವಿಸಿರುವುದು ಗರ್ಭಧಾರಣೆಯ ತೊಡಕುಗಳಿಂದ ಎಂದು ಹೇಳಿದ್ದಾರೆ.
ಶ್ರುತಿ ಅವರು ಜೂ.6 ರಂದು ಪ್ರಸೂತಿಗಾಗಿ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅವರ ಪರಿಸ್ಥಿತಿಯನ್ನು ನೋಡಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಅವರ ದೇಹದಲ್ಲಿ ಹಿಮೋಗ್ಲೋಬಿನ್ ಸಮಸ್ಯೆಯಿದ್ದು, ಹಿಮೋಗ್ಲೋಬಿನ್ ಸಂಖ್ಯೆಯು ಕೇವಲ ನಿಮಿಷಗಳಲ್ಲೇ ಕಡಿಮೆಯಾಗುತ್ತಿತ್ತು ಎಂದು ತಿಳಿದುಬಂದಿದೆ.
ಶ್ರುತಿ ಅವರು ಉಡುಪಿಯ ಪಾಂಗಾಳ ಮೂಲದವರಾಗಿದ್ದು, ವರ್ಷಗಳ ಹಿಂದೆ ವಿವಾಹವಾಗಿದ್ದರು. ಇದೀಗ ಮಗು ಆರೋಗ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಉಡುಪಿ ನಗರ ಪೊಲೀಸರು ಮೃತ ಮಹಿಳೆ ಕುಟುಂಬಸ್ಥರು ನೀಡಿದ್ದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಶ್ರುತಿ ಸಾವನ್ನಪ್ಪುತ್ತಿದ್ದಂತೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಅದನ್ನು ಅವರು ಮಾಡಿಲ್ಲ. ದೇಹಕ್ಕೂ ಸಂಸ್ಕಾರ ಮಾಡಿಬಿಟ್ಟಿದ್ದಾರೆ. ಶ್ರುತಿ ಸಾವಿಗೆ ಪ್ರಮುಖ ಕಾರಣ ತಿಳಿಯಬೇಕಾದರೆ ಮರಣೋತ್ತರ ಪರೀಕ್ಷೆ ಮಾಡಬೇಕು. ಇದೀಗ ಅಂತಿಮ ಸಂಸ್ಕಾರ ಮಾಡಿರುವುದರಿಂದ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಎಫ್ಐಆರ್ ಕೂಡ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಪೆ: ಕನ್ನಡಪ್ರಭ


Spread the love

Exit mobile version