Home Mangalorean News Kannada News ಶರತ್ ಕೊಲೆಯ ಕುರಿತು ಸ್ಪೋಟಕ ಮಾಹಿತಿ ನನ್ನಲ್ಲಿದೆ ; ವಜ್ರದೇಹಿ ಸ್ವಾಮೀಜಿ

ಶರತ್ ಕೊಲೆಯ ಕುರಿತು ಸ್ಪೋಟಕ ಮಾಹಿತಿ ನನ್ನಲ್ಲಿದೆ ; ವಜ್ರದೇಹಿ ಸ್ವಾಮೀಜಿ

Spread the love

ಶರತ್ ಕೊಲೆಯ ಕುರಿತು ಸ್ಪೋಟಕ ಮಾಹಿತಿ ನನ್ನಲ್ಲಿದೆ ; ವಜ್ರದೇಹಿ ಸ್ವಾಮೀಜಿ

ಮಂಗಳೂರು:ಶರತ್ ಕೊಲೆಗೆ ಸಂಬಂಧಿಸಿ ನನ್ನಲ್ಲಿ ಸ್ಪೋಟಕ ಮಾಹಿತಿ ಇದ್ದು ರಾಷ್ಟ್ರೀಯ ತನಿಖಾ ದಳದ ಮುಂದೆ ಮಾತ್ರ ಅದನ್ನು ಬಹಿರಂಗಪಡಿಸಲಿದ್ದೇನೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜುಲೈ 7 ರಂದು 12.05 ಕ್ಕೆ ಶರತ್ ಕೊನೆಯುಸಿರೆಳೆದಿದ್ದು, ಆಸ್ಪತ್ರೆಯ ಆಡಳಿತ ಕುಟುಂಬದವರಿಗೆ ಸಾವಿನ ಸುದ್ದಿಯನ್ನು 20 ಗಂಟೆಗಳ ಬಳಿಕ ಪ್ರಕಟಿಸಿದೆ. ಅಷ್ಟೋಂದು ತಡವಾಗಿ ಇದನ್ನು ಪ್ರಕಟಿಸಲು ಕಾರಣವೇನು, ಯಾವ ಉದ್ದೇಶದಿಂದ ಸಚಿವ ಯು.ಟಿ.ಖಾದರ್ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂಬ ಮಾಹಿತಿ ಬಹಿರಂಗವಾಗಬೇಕಾದರೆ ಶರತ್ ಸಾವಿನ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳಕ್ಕೆ ವಹಿಸಬೇಕೆಂದು ಅವರು ಆಗ್ರಹಿಸಿದರು.

ಜುಲೈ 8 ರಂದು ಶರತ್ ಶವಯಾತ್ರೆ ಆಸ್ಪತ್ರೆಯಿಂದ ಬಿಸಿ ರೋಡ್ ತನಕ ಶಾಂತಿಯುತವಾಗಿ ಸಾಗಿದ್ದು, ಅದರ ಬಳಿಕ ದುಷ್ಕರ್ಮಿಗಳು ಯಾತ್ರೆಯ ಮೇಲೆ ಕಲ್ಲು ತೂರಾಟ ನಡೆಡಿದಿದ್ದು, ಹಿಂದೂ ನಾಯಕರ ಮೇಲೆ ಶಾಂತಿಯುತವಾಗಿ ಯಾತ್ರೆ ನಡೆಸಿದವರ ಮೇಲೆ ಕೇಸು ದಾಖಲಿಸಿದ್ದಾರೆ.

ಹಿಂದು ನಾಯಕರ ಮೇಲೆ 307 ರ ಅಡಿಯಲ್ಲಿ ಸೆಕ್ಷನ್ ಹಾಕಿ ಕೇಸು ದಾಖಲಿಸಿದ್ದಾರೆ ಆದರೆ ಯಾರು ಕಲ್ಲು ತೂರಾಟ ನಡೆಸಿದ್ದಾರೆ ಅವರನ್ನು ಬಂಧಿಸುವ ಧೈರ್ಯವನ್ನು ಪೋಲಿಸರು ಮಾಡಲಿಲ್ಲ ಅಂದರೆ ಯಾಕೆ ಹಿಂದೂಗಳ ಮೇಲೆ ಇಂತಹ ದೌರ್ಜನ್ಯ ಎಂದು ಪ್ರಶ್ನಿಸಿದ ಸ್ವಾಮೀಜಿ, ಹಿಂದು ಸಮುದಾಯ ಶಾಂತಿಯುತವಾಗಿ ಬದುಕುವವರು ಅವರ ಮೇಲೆ ನಡೆಯುವ ದೌರ್ಜನ್ಯ ಖಂಡನೀಯ. ಕೇರಳ ಮತ್ತು ಭಟ್ಕಳದಲ್ಲಿ ಐಸಿಸ್ ಉಗ್ರವಾದ ಬೇರು ಬಿಟ್ಟಿದ್ದು ಅದನ್ನು ಹತ್ತಿಕ್ಕಲು ರಾಷ್ಟ್ರೀಯ ತನಿಖಾ ದಳ ದಕ್ಷಿಣಕನ್ನಡಕ್ಕೆ ಅಗತ್ಯವಿದೆ ಎಂದರು.

ಹಿಂದು ಸಮುದಾಯ ಯಾವುದೇ ರೀತಿಯ ಕೋಮು ಹಿಂಸೆಗೆ ಪ್ರಚೋದನೆಗೆ ಅವಕಾಶ ನೀಡಿಲ್ಲ ಬದಲಾಗಿ ಜಿಲ್ಲೆಯಲ್ಲಿ ಕೆಎಫ್ ಡಿ ಮತ್ತು ಎಸ್ ಡಿಪಿಐನಿಂದ ಹಿಂಸಾಚಾರ ನಡೆಯುತ್ತಿದ್ದರೂ ನಿರಂತರ ಹಿಂದೂಗಳ ಮೇಲೆ ಮಾತ್ರ ದೌರ್ಜನ್ಯ ನಡೆಯುತ್ತಿದೆ. ಕಾಂಗ್ರೆಸ್ ಸರಕಾರ ನಿರ್ಧಿಷ್ಟ ಸಮುದಾಯವನ್ನು ಒಲೈಸುವ ಕೆಲಸ ಮಾಡುತ್ತಿದೆ ಜುಲೈ 7 ರಂದು ಮುಖ್ಯಮಂತ್ರಿ ಜಿಲ್ಲೆಗೆ ಬಂದರೂ ಶರತ್ ಭೇಟಿಮಾಡಲು ಹೋಗದೆ ತನ್ನ ಪಕ್ಷದ ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಿ ತೆರಳಿದರು. ಜುಲೈ 13 ರಂದು ಜಿಲ್ಲಾ ಉಸ್ತುವಾರಿ ಸಚಿವರು ಆಯೋಜಿಸಿದ ಶಾಂತಿ ಸಭೆಗೆ ಹಿಂದೂ ನಾಯಕರನ್ನು ಕರೆಯದೆ ಇರುವುದು ಕೂಡ ಖಂಡನೀಯ ಎಂದರು.

ಹಿಂದೂ ನಾಯಕರ ಮೇಲೆ ಹಾಕಿರುವ ಕೇಸುಗಳನ್ನು ಕೂಡಲೇ ಕೈಬಿಡಬೇಕು ಅಲ್ಲದೆ ಶರತ್ ಸಾವಿಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ ಸ್ವಾಮೀಜಿ ಈ ನಿಟ್ಟಿನಲ್ಲಿ ಹಿಂದೂ ನಾಯಕರ ನಿಯೋಗವೊಂದು ಕೇಂದ್ರ ಗ್ರಹ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದೆ ಎಂದರು.


Spread the love

Exit mobile version