Home Mangalorean News Kannada News ಶಾರ್ಜಾದಲ್ಲಿ 12ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ, 60ನೇ ಕರ್ನಾಟಕ ರಾಜ್ಯೋತ್ಸವ, 13ನೇ ವಾರ್ಷಿಕೋತ್ಸವ ಮತ್ತು ಮಯೂರ...

ಶಾರ್ಜಾದಲ್ಲಿ 12ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ, 60ನೇ ಕರ್ನಾಟಕ ರಾಜ್ಯೋತ್ಸವ, 13ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ

Spread the love

ಶಾರ್ಜಾ ಕರ್ನಾಟಕ ಸಂಘ ಮತ್ತು ಹೃದಯ ವಾಹಿನಿ. ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ  ಶಾರ್ಜಾದಲ್ಲಿ ಅದ್ದೂರಿಯಾಗಿ ನಡೆಯಲಿಸ್ರುವ 12ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಮತ್ತು 13ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ 60ನೇ ಕರ್ನಾಟಕ ರಾಜ್ಯೋತ್ಸವ ಶಾರ್ಜಾ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದ ಬಳಿಯಿರುವ ಅಲ್ ಬೂಮ್ ಟೂರಿಸ್ಟ್ ವಿಲೇಜ್ ಆವರಣದಲ್ಲಿರುವ ಬೃಹತ್ ಸುಸಜ್ಜಿತ ಸಭಾಂಗಣದಲ್ಲಿ 2015 ನವೆಂಬರ್ 19 ಮತ್ತು 20 ರಂದು  ಕನ್ನಡಿಗರ ಬೃಹತ್ ಸಮಾವೇಶ ನಡೆಯಲಿದೆ.

0. KSS VKSSwelcome panel

ಸಮ್ಮೇಳನದಲ್ಲಿ ಕರ್ನಾಟಕದಿಂದ ನೂರಾರು ಮಂದಿ ಕಲಾವಿದರು, ಸಂಗೀತಗಾರರು, ಸಾಹಿತಿಗಳು, ಗಣ್ಯರ ತಂಡ ಶಾರ್ಜಾದಲ್ಲಿ ನಡೆಯುವ ಸಮ್ಮೇಳನ್ದಲ್ಲಿ ಭಾಗವಹಿಸಲಿದ್ದಾರೆ. ಹೃದಯವಾಹಿನಿ ಕರ್ನಾಟಕ ಮುಖ್ಯಸ್ಥರಾದ ಶ್ರೀ ಕೆ. ಪಿ. ಮಂಜುನಾಥ್ ಸಾಗರ್ ತಂಡದ ಸಾರಥ್ಯದಲ್ಲಿ ಆಗಮಿಸಲಿದ್ದಾರೆ.

ಉದ್ಘಾಟನಾ ಸಮಾರಂಭ 19ನೇ ನವೆಂಬರ್ 2015 ಗುರುವಾರ ರಾತಿ 7.30 ಕ್ಕೆ ದುಬಾಯಿ ಗ್ರಾಂಡ್ -ಬೈ ಫಾರ್ಚೂನ್ ಹೋಟೆಲ್ ಸಭಾಂಗಣದಲ್ಲಿ ನಡೆಅಯಲಿದೆ. ಗಣ್ಯಾತಿ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

20ನೇ ತಾರೀಕು ಗುರುವಾರ ಬೆಳಿಗ್ಗೆ 10.00 ಗಂಟೆಯಿಂದ ಶಾರ್ಜಾ ವಾಂಡರರ್ಸ್ ಕ್ಲಬ್ ಬಳಿಯಿರುವ ಅಲ್ ಬೂಮ್ ಟೂರಿಸ್ಟ್ ವಿಲೇಜ್ ಸಭಾಂಗಣದಲ್ಲಿ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.

 ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ 2005-08 ಅವಧಿಯ ಅಧ್ಯಕ್ಶರಾಗಿ ಸೇವೆ ಸಲ್ಲಿಸಿರುವ, ಶ್ರೀ ಸಿದ್ದಗಂಗಾ ಕಾಲೇಜು ತುಮಕೂರು, ಹಾಗೂ ವಿವಿದೆಡೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಲಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆಸಲ್ಲಿಸಿರುವ ಪ್ರೋ. ಎಸ್. ಜಿ ಸಿದ್ದರಾಮಯ್ಯನವ್ರು ಈ ಬಾರಿ ಗಲ್ಫ್ ರಾಷ್ಟ್ರದ ಶಾರ್ಜದಲ್ಲಿ ನಡೆಯಲಿರುವ 12ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷರಾಗಿ ಗೌರವ ಪಟ್ತವನ್ನು ಸ್ವೀಕರಿಸಿದ್ದಾರೆ. ಹಲವಾರು ಕಾವ್ಯ ವಿಮರ್ಶೆ, ಅನುಭವ ಕಥನ, ನಾಟಕ ರಚಿಸಿ ಪ್ರಕಟಿಸಿರುವ ಪ್ರೋ. ಎಸ್. ಜಿ. ಸಿದ್ದರಾಮಯ್ಯನವರಿಗೆ ಪು.ತಿ.ನ. ಕಾವ್ಯ ಪ್ರಶಸ್ತಿ, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಮಾಸ್ತಿ ಕಾವ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನಗಳು ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಹಿರಿಯ ಸಾಹಿತಿಯೊಬ್ಬರು ಕನ್ನಡ ಸಾಂಸ್ಕೃತಿಕ ಜಾತ್ರೆಯ ಅಧ್ಯಕ್ಷ ಪಟ್ಟದಲ್ಲಿರುವುದು ಅನಿವಾಸಿ ಕನ್ನಡಿಗರಿಗೆ ಸಂಭ್ರಮದ ವಿಷಯವಾಗಿದೆ.

ಮಯೂರ ಪ್ರಶಸ್ತಿ ಸಮಾರಂಭದಲ್ಲಿ  ಯು.ಎ.ಇ. ಯ ಪ್ರಖ್ಯಾತ ಉದ್ಯಮಿ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ “ಮಯೂರ ಪ್ರಶಸ್ತಿ” ನೀಡಿ ಸನ್ಮಾನಿಸಿ ಗೌರವಿಸಲಾಗುವುದು.

ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕವಿಗೋಷ್ಠಿ, ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ, ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಯಕ್ಷಗಾನ ಮುಂತಾದ ಕಲೆಗಳು ಪ್ರದರ್ಶನಗೊಳ್ಳಲಿದೆ. ಸ್ಮ್ಮೇಳನದಲ್ಲಿ ಯು.ಎ.ಇ. ವಿವಿಧ ಭಾಗಗಳ ಪ್ರತಿಭೆಗಳ ಕಲೆಗಳು ಅನಾವರಣಗೊಳ್ಳಲಿದೆ.

 ಶ್ರೀ ಮಂಜುನಾಥ್ ಸಾಗರ್ ರವರ ಅಧ್ಯಕ್ಷತೆಯಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ, ಹೃದಯವಾಹಿನಿ ಕರ್ನಾಟಕ ಕಳೆದ ಹನ್ನೆರಡು ವರ್ಷಗಳಿಂದ ವಿದೇಶಗಳಲ್ಲಿರುವ ಕನ್ನಡ ಸಂಘಗಳ ಸಹಯೋಗದೊಂದಿಗೆ ಪ್ರತಿವರ್ಷ ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ವಿಶ್ವ ಕನ್ನಡಿಗರ ಸ್ನೇಹ ಮತ್ತು ಸಂಪರ್ಕ ವೇದಿಕೆಯಾಗಿ ವಿಶ್ವದ ವಿವಿಧ ದೇಶದಲ್ಲಿ ಆಯೋಜಿಸಿಕೊಂಡು ಬರುತಿದೆ.

೨೦೦೪ರಲ್ಲಿ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಅಬುಧಾಬಿ ಕರ್ನಾಟಕ ಸಂಘದೊಂದಿಗೆ ನಡೆದು, ನಂತರದ ವರ್ಷಗಳಲ್ಲಿ ಸಿಂಗಾಪುರ, ಬಹರೈನ್, ಕುವೈತ್, ಕತ್ತಾರ್, ದುಬೈ, ಕಿನ್ಯಾ, ಕೆನಡಾದಲ್ಲಿ ಯಶಸ್ವಿಯಾಗಿ ನಡೆದು ಇದೀಗ 12ನೇ  ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಶಾರ್ಜಾ ಕರ್ನಾಟಕ ಸಂಘದ ಸಹಯೋಗದೊಂದಿಗೆ ಅದ್ಧೂರಿಯಾಗಿ ಆಯೋಜಿಸಲಾಗಿದೆ.

ವಿದೇಶಗಳಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷರುಗಳಾಗಿ ಗೌರವ ಪಡೆದವರು ಡಾ| ಕೆ. ಎ. ಅಶೋಕ್ ಪೈ, ಶ್ರೀ ಮನು ಬಳಿಗಾರ್, ಡಾ| ಎಸ್.ಎಲ್.ಭೈರಪ್ಪ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಡಾ| ಚಂದ್ರಶೇಖರ ಕಂಬಾರ, ಡಾ|. ಸಿದ್ದಲಿಂಗ ಪಟ್ಟಣ ಶೆಟ್ಟಿ, ಡಾ|. ಬರಗೂರು ರಾಮಚಂದ್ರಪ್ಪ, ಡಾ| ದೊಡ್ಡರಂಗೇ ಗೌಡ, ಪ್ರೋ ಮಲೆಪುರಮ್ ಜಿ ವೇಂಕಟೇಶ, ಡಾ| ನಾಗತಿಹಳ್ಳಿ ಚಂದ್ರಶೇಖರ, ಡಾ| ಎಲ್. ಹನುಮಂತಯ್ಯ.

ಇದೀಗ 12ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಶಾರ್ಜಾದಲ್ಲಿ ಪ್ರೋ. ಎಸ್, ಜಿ, ಸಿದ್ದರಾಮಯ್ಯ ತಮ್ಮ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಕರ್ನಾಟಕದ 1800 ಕಿಂತಲೂ ಹೆಚ್ಚು ಕಲಾವಿದರು ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳು ಮತ್ತು ಉದ್ಯಮಿಗಳಿಗೆ ಅಂತರಾಷ್ಟ್ರೀಯ ವೇದಿಕೆ ಕಲ್ಪಿಸಿದ ಏಕೈಕ ಸಂಘಟನೆಯಾಗಿದೆ. ಭಾರತ ದೇಶದ ಒಳಗೆ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ ಅಹ್ಮದಾಬಾದ್, ನವದೆಹಲಿ, ಮುಂಬೈ, ಗೋವಾ, ವಾಪಿ, ಕಾಸರಗೋಡು, ಕೊಚ್ಚಿನ್, ಸೂರತ್, ಡೊಂಬಿವಿಲಿ ಮತ್ತು ಬರೋಡಗಳಲ್ಲಿ ಯಶಸ್ವಿಯಾಗಿ ನಡೆಸಲ್ಪಟ್ಟಿದೆ.

 12ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಪ್ರಧಾನ ಮಾಡಲಾಗುವ ಪ್ರಶಸ್ತಿಗಳು – ವಿಶ್ವಮಾನ್ಯ ಪ್ರಶಸ್ತಿ, ವಿಶ್ವಕನ್ನಡ ಸಮ್ಮೇಳನ ಪ್ರಶಸ್ತಿ, ಕರ್ನಾಟಕ ಹಿರಿಮೆ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರಿಗೆ ನೀಡಿ ಗೌರವಿಸಲಾಗುವುದು.

ಹನಿಗವನ ಗೋಷ್ಠಿಯ ಅಧ್ಯಕ್ಷರಾಗಿ ಬಿ. ಆರ್. ಲಕ್ಷ್ಮಣ್ ರಾವ್ ರವರು ಆಗಮಿಸಲಿದ್ದಾರೆ. ಹನಿಗವನ ಗೋಷ್ಠಿಯಲ್ಲಿ ಯು.ಎ.ಇ. ಯ ಮತ್ತು ಕರ್ನಾಟಕ ದಿಂದ ಕವಿಗಳು ಆಗಮಿಸಲಿದ್ದಾರೆ ಭಾಗವಹಿಸುವ ಕವಿಗಳು, ಇರ್ಷಾದ್ ಮೂಡಬಿದ್ರಿ – ದುಬೈ, ಆರತಿ ಘಟಿಕಾರ್ – ದುಬೈ, ಬಿಂಡಿಗನವಿಲೆ ಭಗವಾನ್ – ಬೆಂಗಳೂರು, ಪ್ರಿಯಾ ಹರೀಶ್ – ಮಂಗಳೂರು, ಯಾಕುಬ್ ಖಾದರ್ – ಗುಲ್ವಾಡಿ.

ಕವಿಗೋಷ್ಠಿ ಅಧ್ಯಕ್ಷರಾಗಿ ಪ್ರೋ. ಎಂ. ಬಿ. ಕುದರಿ ಗೋಕಾಕ್ – ಬೆಳಗಾಂ ನಿಂದ ಬಂದು ಪಾಲ್ಗೊಳ್ಳಲಿದ್ದಾರೆ. ಭಾಗವಹಿಸುವ ಕವಿಗಳು ಶ್ರೀಮತಿ ಪ್ರಭಾ ಸುವರ್ಣ – ಮುಂಬೈ, ಪ್ರಕಾಶ್ ರಾವ್ ಪಯ್ಯಾರ್ – ದುಬೈ, ಗೋಪಿನಾಥ ರಾವ್ – ಯು.ಎ.ಇ., ಈರಣ್ಣ ಮೂಲಿಮನಿ – ದುಬೈ, ಮನೋಹರ್ ಮೇಲ್ಮನೆ – ಶಿರ್ಶಿ.

ಅನಿವಾಸಿ ಕನ್ನಡಿಗರು ಮತ್ತು ಮಾಧ್ಯಮ ಗೋಷ್ಠಿಯ ಅಧ್ಯಕ್ಷರಾಗಿ ಶ್ರೀ ಸರ್ವೋತ್ತಮ ಶೆಟ್ಟಿ – ಅಬುಧಾಬಿ., ಸಂಪನ್ಮೂಲ ವ್ಯಕ್ತಿಗಳು ರಾಜ್ ಕುಮಾರ್ -ಬಹರೈನ್, ಬಿ. ವಿ. ನಾಗರಾಜ್ -ಕೆನಡಾ, ಡಾ. ಸಿ. ಕೆ. ಅಂಚನ್ – ಮಸ್ಕತ್, ವೀರೆಂದ್ರ ಬಾಬು – ದುಬಾಯಿ.

ಟಿ.ವಿ.9 ವಾಹಿನಿಯ ಕಲಾವಿದರಿಂದ “ಹಳ್ಳಿ ಕಟ್ಟೆ” ಹಾಸ್ಯ ಪ್ರಹಸನ, ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಲಿರುವ ಕಲಾತಂಡಗಳ ಸಮೂಹ ನೃತ್ಯ, ಹಾಸ್ಯೋತ್ಸವ, ರಸಮಂಜರಿ, ನೃತ್ಯ ಸೌರಭ, ನೃತ್ಯ ರೂಪಕ ಇತ್ಯಾದಿ ಹತ್ತು ಹಲವು ಕಲಾಪ್ರಾಕರಗಳು ಅನಾವರಣ ಗೊಳ್ಳಲಿದೆ.

ಸಮಾರೋಪ ಸಮಾರಂಭ ಸಂಜೆ ನಡೆಯಲಿದ್ದು ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಎರಡು ದಿನಗಳ ಅದ್ಧೂರಿ ಸಮಾರಂಭಕ್ಕೆ ಯು.ಎ.ಇ.ಯಲ್ಲಿ ನೆಲೆಸಿರುವ ಸಮಸ್ಥ ಅಭಿಮಾನಿ ಕನ್ನಡಿಗರಿಗೆ ಪ್ರವೇಶ ಉಚಿತವಾಗಿದ್ದು ಮಧ್ಯಾಹ್ನದ ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿದೆ. ಸರ್ವರಿಗೂ ಸಮ್ಮೇಳನ ಸಮಿತಿಯ ಮುಖ್ಯಸ್ಥರಾಗಿರುವ ಶ್ರೀ ಸತೀಶ್ ವೆಂಕಟರಮಣ ಮತ್ತು ಶ್ರೀ ಮಂಜುನಾಥ್ ಸಾಗರ್ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು  ಆತ್ಮೀಯ ಆಮಂತ್ರಣ ನೀಡಿದ್ದಾರೆ.

 


Spread the love

Exit mobile version