Home Mangalorean News Kannada News ಸಂಕಷ್ಟದಲ್ಲಿರುವವರಿಗೆ ರೂ.10,000 ಆರ್ಥಿಕ ನೆರವಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಆಗ್ರಹ

ಸಂಕಷ್ಟದಲ್ಲಿರುವವರಿಗೆ ರೂ.10,000 ಆರ್ಥಿಕ ನೆರವಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಆಗ್ರಹ

Spread the love

ಸಂಕಷ್ಟದಲ್ಲಿರುವವರಿಗೆ ರೂ.10,000 ಆರ್ಥಿಕ ನೆರವಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಆಗ್ರಹ

ಉಡುಪಿ: ಕೋವಿಡ್-19 ಲಾಕ್‌ಡೌನ್ ನಿಮಿತ್ತ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಭವಿಷ್ಯದ ಚಿಂತೆಯಿAದ ಆರ್ಥಿಕ ಸಂಕಷ್ಟದಿಂದ ಬಡ, ಮಧ್ಯಮ ವರ್ಗದರವರು ಆತ್ಯಹತ್ಯೆಗೆ ಶರಣಾಗುತ್ತಿದ್ದಾರೆ. ಸರಕಾರ ಈ ಸಂದರ್ಭದಲ್ಲಿ ಮೂಕ ಪ್ರೇಕ್ಷಕನಾಗಬಾರದು. ಆರ್ಥಿಕವಾಗಿ ಹಿಂದುಳಿದ ಟೈಲರ್ ವೃತ್ತಿ, ಸಮುದ್ರದಲ್ಲಿ ಮೀನುಗಾರಿಕೆ ಮಾಡುವವರಿಗೆ, ದಿನಗೂಲಿ ಕಾರ್ಮಿಕರಿಗೆ ಕನಿಷ್ಟ 10,000 ರೂಪಾಯಿಯನ್ನು ರಾಜ್ಯ ಸರಕಾರ ಅವರ ಖಾತೆಗೆ ಜಮಾ ಮಾಡುವ ಮೂಲಕ ಕಂಗಾಲಾದ ಜನರಿಗೆ ಜೀವನ ಮುಂದುವರಿಸಲು ನೈತಿಕ ಸ್ಥೈರ್ಯ ನೀಡುವುದು ಈ ಸಂದರ್ಭದಲ್ಲಿ ಪ್ರಾಮಾಣಿಕ ಪ್ರಯತ್ನವಾಗುತ್ತದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಉಡುಪಿಯಲ್ಲಿ ಮನೆ ಬಾಡಿಗೆ ಹಾಗೂ ಜೀವನದ ದೈನಂದಿನ ಖರ್ಚು ವೆಚ್ಚವನ್ನು ನಿಭಾಯಿಸಲಾಗದೆ ಕನ್ನರ್ಪಾಡಿಯ ಟೈಲರ್ ವೃತ್ತಿಯವರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರ ಮೃತರ ಪತ್ನಿಗೆ ಆರ್ಥಿಕ ನೆರವು ಅಲ್ಲದೆ ಅವರ ಇಬ್ಬರ ಅವಳಿ ಜವಳಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಉಡುಪಿ ಬ್ಲಾಕ್ ಕಾಂಗ್ರೆಸ್ ಸರಕಾರವನ್ನು ಒತ್ತಾಯಿಸುತ್ತದೆ. ಮಲ್ಪೆಯಲ್ಲಿ ಮೀನುಗಾರಿಕೆ ತೊಡಗಿಸಿಕೊಂಡ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡದ್ದನ್ನು ಕೂಡಾ ಉಲ್ಲೇಖಿಸುತ್ತೇವೆ. ಇದು ಪ್ರಾರಂಭ ಇನ್ನಷ್ಟು ಜನ ಲಾಕ್‌ಡೌನ್ ಮುಕ್ತವಾದರೂ ವ್ಯಾಪಾರ ವಹಿವಾಟುಗಳು ಸಹಜ ಸ್ಥಿತಿಗೆ ಬರದೆ ಜಿಗುಪ್ಸೆಗೊಂಡು ದಿಕ್ಕು ಕಾಣದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೇಂದ್ರ, ರಾಜ್ಯ ಸರಕಾರಗಳು ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರಕಾರಗಳ ಜವಾಬ್ದಾರಿ ಹಾಗೂ ಕರ್ತವ್ಯ ಕೂಡಾ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ, ನಗರಸಭಾ ಸದಸ್ಯ ರಮೇಶ್ ಕಾಂಚನ್, ಎಸ್.ಸಿ ಘಟಕ ಅಧ್ಯಕ್ಷ ಗಣೇಶ್ ನೆರ್ಗಿ, ಉಡುಪಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version