Home Mangalorean News Kannada News ಸಂತ ಅಲೋಶಿಯಸ್ ಐ.ಟಿ.ಐ. ಸಂಸ್ಥೆಯಲ್ಲಿ ಆಯುಧ ಪೂಜೆ

ಸಂತ ಅಲೋಶಿಯಸ್ ಐ.ಟಿ.ಐ. ಸಂಸ್ಥೆಯಲ್ಲಿ ಆಯುಧ ಪೂಜೆ

Spread the love

ಸಂತ ಅಲೋಶಿಯಸ್ ಐ.ಟಿ.ಐ. ಸಂಸ್ಥೆಯಲ್ಲಿ ಆಯುಧ ಪೂಜೆ

ಮಂಗಳೂರು : ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯುಧ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯುತು.

ಸಂಸ್ಥೆಯ ನಿರ್ದೇಶಕರಾದ ವಂ/ಫಾ/ ಎರಿಕ್ ಮಥಾಯಸ್‍ರವರು ಎಲ್ಲಾ ಕಾಯಾಗಾರಗಳನ್ನು ಆಶೀರ್ವದಿಸಿದರು. ಮುಖ್ಯ ಅತಿಥಿಗಳಾಗಿ ಧ್ರುವಿ ಎಂಟರ್‍ಪ್ರೈಸಸ್ ಇದರ ಮಾಲಕರಾದ ಶ್ರೀ ರಾಜೇಶ್ ಕದ್ರಿರವರು ಸಮಾರಂಭಕ್ಕೆ ಆಗಮಿಸಿದ್ದರು.

ಗೌರವಾನ್ವಿತ ಅತಿಥಿಯಾಗಿ ರಾಜ್ಯ ಪ್ರಶಸ್ತಿ ವಿಜೇತೆ ಡಾ/ ಅಕ್ಕೈ ಪದ್ಮಶಾಲಿ ಇವರು ಹಾಜರಿದ್ದರು. ಸೂಯಿಂಗ್ ಟೆಕ್ನಾಲಜಿ ವೃತ್ತಿಯ ವಿದ್ಯಾರ್ಥಿನಿಯರು ಸ್ವಾಗತ ನೃತ್ಯವನ್ನು ಪ್ರದರ್ಶಿಸಿದರು, ವಿದ್ಯಾರ್ಥಿಯಾದ ಮೆಲ್ಸ್ಟನ್ ಮಾರ್ಟಿಸ್ ಇವರು ನೆರೆದಿರುವ ಎಲ್ಲರನ್ನು ಸ್ವಾಗತಿಸಿದರು. ಬಳಿಕ ಡಾ/ ಅಕ್ಕೈರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ನಮ್ಮ ಜೀವನದಲ್ಲಿ ಏನಾದರೂ ಗುರಿ ಇರಬೇಕು , ಅದನ್ನು ಸಾದಿಸುವ ಛಲ ಇರಬೇಕು, ಇದರಿಂದ ಮಾತ್ರ ನಾವು ಜೀವನದಲ್ಲಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು. ಸಂಸ್ಥೆಯ ಮಾಜಿ ನಿರ್ದೇಶಕರಾದ ವಂ/ಡಾ/ ಲಿಯೋ ಡಿಸೋಜ, ನಿರ್ದೇಶಕರಾದ ವಂ/ ಫಾ/ ಎರಿಕ್ ಮಥಾಯಸ್, ಪ್ರಾಂಶುಪಾಲರಾದ ಶ್ರೀ ವಿನ್ಸೆಂಟ್ ಮೆಂಡೋನ್ಸಾ, ಉಪಪ್ರಾಂಶುಪಾಲರಾದ ಶ್ರೀ ರೋಶನ್ ಡಿಸೋಜ ಮತ್ತು ತರಬೇತಿ ಅಧಿಕಾರಿಯಾದ ಶ್ರೀ ರೋಮಿಯಸ್ ಡಿಸೋಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತೆ ಡಾ/ ಅಕ್ಕೈ ಪದ್ಮಶಾಲಿ ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಬಳಿಕ ಸಂಸ್ಥೆಯ ವಾರ್ಷಿಕ ಸಂಚಿಕೆಯಾದ “ಕೌಶಲ್ಯ” ಇದರ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ಶ್ರೀ ರಾಜೇಶ್ ಕದ್ರಿ ಇವರು ನೆರವೇರಿಸಿದರು.

ಸಂಸ್ಥೆಯ ವಿದ್ಯಾರ್ಥಿಯಾದ ಪ್ರವೀಣ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಯಾದ ಲಕ್ಷಿತ್‍ರವರು ಆಯುಧ ಪೂಜೆಯ ಮಹತ್ವದ ಬಗ್ಗೆ ಭಾಷಣ ಮಾಡಿದರು. ಅಂಕಿತ್ ರವರು ವಂದಿಸಿದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡುವುದರ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.


Spread the love

1 Comment

Comments are closed.

Exit mobile version