Home Mangalorean News Kannada News ಸಂಸದ ನಳಿನ್ ಕುಮಾರ್ ಅವರಿಂದ ಪಡೀಲ್ ರೈಲ್ವೆ ಕೆಳಸೇತುವೆ ಲೋಕಾರ್ಪಣೆ

ಸಂಸದ ನಳಿನ್ ಕುಮಾರ್ ಅವರಿಂದ ಪಡೀಲ್ ರೈಲ್ವೆ ಕೆಳಸೇತುವೆ ಲೋಕಾರ್ಪಣೆ

Spread the love

ಸಂಸದ ನಳಿನ್ ಕುಮಾರ್ ಅವರಿಂದ ಪಡೀಲ್ ರೈಲ್ವೆ ಕೆಳಸೇತುವೆ ಲೋಕಾರ್ಪಣೆ

ಮಂಗಳೂರು: ನಗರ ಹೊರವಲಯದ ರಾಹೆ 75 ರ ಪಡೀಲ್-ಕೊಡಕ್ಕಲ್ ಬಳಿ ಸುಮಾರು ರೂ 16.50 ಕೋಟಿ ವೆಚ್ಚದಲ್ಲಿ  ನಿರ್ಮಿಸಲಾಗಿರುವ ರೈಲ್ವೆ ಕೆಳ ಸೇತುವೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು.

ಬಳಿಕ ಮಾತನಾಡಿದ ನಳಿನ್ ಕುಮಾರ್ ಸುರತ್ಕಲ್ -ಬಿ.ಸಿ. ರೋಡ್ ರಾಹೆದ್ದಾರಿಯನ್ನು ಸಾಗರ್ ಮಾಲ ಯೋಜನೆಯಡಿ ರೂ 500 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರ ಮಂಜೂರಾತಿ ನೀಡಿದೆ ಎಂದರು.

ಈ ವೇಳೆ ಕಾರ್ಪೋರೇಟರ್ ಪ್ರಕಾಶ್, ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ ಬಂಗೇರ, ವಿಜಯ್ ಕುಮಾರ್, ರೈಲ್ವೇ ಸಲಹಾ ಸಮಿತಿ ಸದಸ್ಯ ಅಹ್ಮದ್ ಬಾವ, ಗುತ್ತಿಗೆದಾರ ಅರುಣ್, ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಅಜಿತ್ ಉಪಸ್ಥಿತರಿದ್ದರು.


Spread the love
1 Comment
Elias
8 years ago

B.C road to Suratkal.Is is passing through Benjanpadav or through Mangalore city.

wpDiscuz
Exit mobile version