Home Mangalorean News Kannada News ಸಂಸ್ಕøತ ಭಾಷೆ ಜ್ಞಾನ ಭಂಡಾರ : ಉಮಾನಾಥ ಕೋಟ್ಯಾನ್

ಸಂಸ್ಕøತ ಭಾಷೆ ಜ್ಞಾನ ಭಂಡಾರ : ಉಮಾನಾಥ ಕೋಟ್ಯಾನ್

Spread the love

ಸಂಸ್ಕøತ ಭಾಷೆ ಜ್ಞಾನ ಭಂಡಾರ : ಉಮಾನಾಥ ಕೋಟ್ಯಾನ್

ಮೂಡುಬಿದಿರೆ: ಮಂಗಳೂರಿನ ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ.) ಸ್ಥಾಪಿತ ಮೂಡುಬಿದಿರೆಯ ಶ್ರೀ ನಾಗಲಿಂಗ ಸ್ವಾಮೀ ಸಂಸ್ಕøತ ಪಾಠಶಾಲೆಗೆ ಸಭಾದ ಸ್ವಂತ ನಿವೇಶನವಿರುವ ಕೋಟೆಬಾಗಿಲಿನಲ್ಲಿ ನೂತನ ಕಟ್ಟಡ ನಿರ್ಮಾಣ ಕುರಿತು ಧನಸಂಗ್ರºಕ್ಕೆ ಚಾಲನೆ ನೀಡುವ ಶಾಲೆಯ ನಿವೃತ್ತ ಶಿಕ್ಷಕರನ್ನು ಸಮ್ಮಾನಿಸುವ ಕಾರ್ಯಕ್ರಮ ಅಲಂಗಾರಿನ ಶ್ರೀ ಅಯ್ಯ ನಾಗಲಿಂಗ ಸ್ವಾಮೀ ಮಠದ ಎದುರಿನ ಇಂದಿರಾ ಪಾಲ್ಕೆ ಸಭಾಂಗಣದಲ್ಲಿ ಸಭಾದ ಅಧ್ಯಕ್ಷ ನಾಗರಾಜ್ ಪಾಲ್ಕೆ ಅವರ ಅಧ್ಯಕ್ಷತೆಯಲ್ಲಿ ರವಿವಾರ ಜರಗಿತು.

ಮುಖ್ಯಅತಿಥಿಯಾಗಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಪಾಲ್ಗೊಂಡು ಧನಸಂಗ್ರಹದ ಕುರಿತಾದ ಮನವಿ ಪತ್ರವನ್ನು ಬಿಡುಗಡೆಗೊಳಿಸಿದರು. ಸಂಸ್ಕøತ ಭಾಷೆ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಭಾಷೆ; ಜ್ಞಾನ ಭಂಡಾರ. ಐದು ದಶಕಗಳ ಹಿಂದೆಯೇ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾದವರು ಸಂಸ್ಕøತ ಪಾಠಶಾಲೆಯನ್ನು ಸ್ಥಾಪಿಸಿ ಅತೀವ ಶ್ರದ್ಧೆ, ಪರಿಶ್ರಮದಿಂದ ನಡೆಸಿಕೊಂಡು ಬಂದಿರುವುದು ಚರಿತ್ರಾರ್ಹ, ಶ್ಲಾಘನೀಯ’ ಎಂದ ಅವರು ಕೋಟೆಬಾಗಿಲಿನಲ್ಲಿ ಸಭಾದ ಸ್ವಂತ ನಿವೇಶನದಲ್ಲಿ ನಿರ್ಮಾಣವಾಗಲಿರುವ ಕಟ್ಟಡಕ್ಕೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು.

ಮುಖ್ಯ ಅತಿಥಿ, ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ. ಪಿ. ಜಗದೀಶ ಅಧಿಕಾರಿ ಅವರು ಮಾತನಾಡಿ, `ಸಂಸ್ಕøತವನ್ನು ಯಾವುದೇ ಒಂದು ಸಮುದಾಯ, ವರ್ಗಕ್ಕೆ ಸೀಮಿತಗೊಳಿಸುವುದು ತಪ್ಪು. ಅತ್ಯಮೂಲ್ಯ ಭಾಷೆಯಾದ ಸಂಸ್ಕøತವನ್ನು ಕಡ್ಡಾಯವಾಗಿ ಮಕ್ಕಳಿಗೆ ಕಲಿಸಿದರೆ ಅದರ ಲಾಭವೇನು ಎಂಬುದನ್ನು ಖಂಡಿತ ಎಲ್ಲರೂ ಮನಗಾಣಬಹುದು’ ಎಂದರು.

ಮುಖ್ಯಾತಿಥಿಗಳಾಗಿ ಸಭಾದ ಉಪಾಧ್ಯಕ್ಷ, ವಿಶ್ವಕರ್ಮ ಸಹಕಾರ ಬ್ಯಾಂಕ್ ಜಿ.ಎಂ. ಸುರೇಶ್ ಕುಮಾರ್, ಮೂಡುಬಿದಿರೆಯ ಉದ್ಯಮಿ ಕಾಂತಾವರ ದಿನೇಶ ಆಚಾರ್ಯ ಭಾಗವಹಿಸಿದ್ದರು.

ಆರ್‍ವಿಎಸ್‍ಸಭಾದ ಅಧ್ಯಕ್ಷ ನಾಗರಾಜ ಪಾಲ್ಕೆ ಅಧ್ಯಕ್ಷತೆ ವಹಿಸಿದ್ದರು. ` 1970ರಲ್ಲಿ ಆರ್‍ವಿಎಸ್ ಸಭಾದ ಅಧ್ಯಕ್ಷರಾಗಿದ್ದ ದೇವಮಾನವ ದಿ| ಪಾಲ್ಕೆ ಬಾಬುರಾಯಾಚಾರ್ಯರ ಮುತುವರ್ಜಿ, ಆರ್ಥಿಕ ಮತ್ತಿತರ ನೆರವಿನಿಂದ ದಿ| ರುದ್ರಯ್ಯ ಪುರೋಹಿತರ ಮೂಲಕ ಅಲಂಗಾರು ನಾಗಲಿಂಗ ಸ್ವಾಮೀ ಮಠದಲ್ಲಿ ಸಂಸ್ಕøತ ವೇದಪಾಠಶಾಲೆ ಪ್ರಾರಂಭವಾಗಿ ಮುಂದೆ ಸರಕಾರದ ಮನ್ನಣೆಯೊಂದಿಗೆ ನಾಗಲಿಂಗ ಸ್ವಾಮಿ ಸಂಸ್ಕøತ ಪಾಠಶಾಲೆಯಾಗಿ ಮಾರ್ಪಾಡಾಗಿ ಗುರುಮಠ ಕಾಳಿಕಾಂಬಾ ದೇವಳದ ಆವರಣದಲ್ಲಿ ಮುಂದುವರಿದ ಬಗೆಯನ್ನು ಅವರು ವಿವರಿಸಿದರು.

ಮೆಕಾಲೆ ಶಿಕ್ಷಣ ಪದ್ಧತಿಯಲ್ಲಿ ಇಂಗ್ಲಿಷ್ ವಿಜ್ರಂಭಿಸಿ, ಸಂಸ್ಕøತ ಮತ್ತು ಅದರೊಂದಿಗೆ ಹಾಸುಹೊಕ್ಕಾದ ಸಂಸ್ಕøತಿ ಮಂಕಾಗುವ ಸ್ಥಿತಿಯನ್ನು ಅವಲೋಕಿಸಿದ ಅವರು ಇಂದು ಕಂಪ್ಯೂಟರ್‍ಗೆ ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುವ ಭಾಷೆ ಸಂಸ್ಕøತ ಎಂದು ತಜ್ಞರೇ ಸಾರುತ್ತಿರುವಾಗ ನಾವು ಭಾರತೀಯರು ಸಂಸ್ಕøತವನ್ನು ಪುನರುತ್ಥಾನಗೊಳಿಸಲು ಇನ್ನಾದರೂ ಮನಸ್ಸು ಮಾಡಬೇಕಿದೆ’ ಎಂದರು.

ಸಮ್ಮಾನ:
ಸಂಸ್ಕøತ ಪಾಠಶಾಲೆಯ ಶಿಕ್ಷಕ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಪುರೋಹಿತ್ ಜಯಕರ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ಬಿ. ಸೀತಾರಾಮ ಆಚಾರ್ಯ ಸಮ್ಮಾನಿತರನ್ನು ಪರಿಚಯಿಸಿ ಅಭಿನಂದಿಸಿದರು.

ಕೊಡುಗೆ:
ಕಟ್ಟಡ ನಿರ್ಮಾಣ ನಿಧಿಗೆ ಮಂಗಳೂರಿನ ಎಸ್.ಎಲ್.ಶೇಟ್ ಡೈಮಂಡ್ ಹೌಸ್ ರೂ. 6 ಲಕ್ಷ ನೀಡಿದ್ದು, ಪಾಲ್ಕೆ ಕೃಷ್ಣಾಚಾರ್ಯ ಟ್ರಸ್ಟ್‍ನಿಂದ ಈಗಾಗಲೇ ಒಂದೂವರೆ ಲಕ್ಷ ಒದಗಿಸಲಾಗಿದ್ದು ಇನ್ನೂ ಒಂದು ಲಕ್ಷ ದೇಣಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ನಾಗರಾಜ ಪಾಲ್ಕೆ ಪ್ರಕಟಿಸಿದರು. ಸಮ್ಮಾನಿತ ಜಯಕರ ಆಚಾರ್ಯ ಅವರು ರೂ. 25,000ದ ದೇಣಿಗೆ ನೀಡುವುದಾಗಿ ಘೋಷಿಸಿದರು.
ಸಭಾದ ಕಾರ್ಯದರ್ಶಿ ಸುಜೀರ್ ವಿನೋದ್ ನಿರೂಪಿಸಿದರು. ಸದಸ್ಯ ಬಿ. ಉದಯ ಆಚಾರ್ ವಂದಿಸಿದರು.


Spread the love

Exit mobile version