Home Mangalorean News Kannada News ಸಬಲೀಕರಣ ನೀತಿಗಳನ್ನು ಅನುಸರಿಸದೆ ಸಬ್ ಕಾ ಸಾಥ್ ಘೋಷಣೆಗೆ ಅರ್ಥವಿಲ್ಲ : ಅಮಾನುಲ್ಲಾ ಖಾನ್

ಸಬಲೀಕರಣ ನೀತಿಗಳನ್ನು ಅನುಸರಿಸದೆ ಸಬ್ ಕಾ ಸಾಥ್ ಘೋಷಣೆಗೆ ಅರ್ಥವಿಲ್ಲ : ಅಮಾನುಲ್ಲಾ ಖಾನ್

Spread the love

ಸಬಲೀಕರಣ ನೀತಿಗಳನ್ನು ಅನುಸರಿಸದೆ ಸಬ್ ಕಾ ಸಾಥ್ ಘೋಷಣೆಗೆ ಅರ್ಥವಿಲ್ಲ : ಅಮಾನುಲ್ಲಾ ಖಾನ್

ಮಂಗಳೂರು : ದೇಶವನ್ನು ಮತ್ತು ಸಮಾಜವನ್ನು ಕಟ್ಟುವುದೇ ರಾಜಕೀಯವಾಗಿದೆ ಎಂದು ಅಖಲಿ ಭಾರತ ಜೀವ ವಿಮಾ ಉದ್ಯೋಗಿಗಳ ಒಕ್ಕೂಟ (ಎಐಐಇಎ) ರಾಷ್ಟ್ರಾಧ್ಯಕ ಅಮಾನುಲ್ಲಾ ಖಾನ್ ಹೇಳಿದರು.

ಅವರು ಮಂಗಳೂರಿನ ಬಲ್ಮಠದ ಶಾಂತಿ ನಿಲಯದ ಸಭಾಂಗಣದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ) ಎರಡು ದಿನಗಳ ಕಾಲ ಆಯೋಜಿಸಿರುವ ಉಪನ್ಯಾಸ ಕಾರ್ಯಕ್ರಮದ ಮೊದಲ ಗೋಷ್ಠಿಯಲ್ಲಿ “ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ, ಸಬಲೀಕರಣ’ ವಿಷಯದ ಕುರಿತು ವಿಚಾರ ಮಂಡಿಸಿದರು.
ಮುಸಲ್ಮಾನರಿಗೆ ರಾಜಕೀಯವಾಗಿ ಸ್ಥಾನಮಾನ ಇಲ್ಲದಿರುವ ಬಗ್ಗೆ ಚರ್ಚೆಗಳು ಆರಂಭವಾಗಬೇಕಿದೆ ಎಂದ ಅಮಾನುಲ್ಲಾ ಖಾನ್ ಕೇಂದ್ರದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ನೀತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ, ಸಬಲೀಕರಣ ನೀತಿಗಳನ್ನು ಅನುಸರಿಸದೆ ಸಬ್ ಕಾ ಸಾಥ್ ಘೋಷಣೆಗೆ ಅರ್ಥವಿಲ್ಲ ಎಂದರು.

ರಾಜಕೀಯದಲ್ಲಿ ಮುಸ್ಲಿಮರನ್ನು ನಿರ್ನಾಮ ಮಾಡಲಾಗಿದೆ ಎಂದು ಖಡಾಖಂಡಿತವಾಗಿ ಹೇಳಿದ ಅಮಾನುಲ್ಲಾ ಅವರು ಉತ್ತರ ಪ್ರದೇಶದಲ್ಲಿ 3.5 ಕೋಟಿ ಜನ ಮುಸ್ಲಿಮರಿದ್ದಾರೆ ಒಟ್ಟು ಜನಸಂಖ್ಯೆ 20 ಕೋಟಿ ಇದ್ದಾರೆ, 3.5 ಕೋಟಿ ಮುಸ್ಲಿಮರ ಪೈಕಿ ರಾಜಕೀಯವಾಗಿ ಪ್ರತಿನಿಧಿಸುವವರ ಸಂಖ್ಯೆ ಎಷ್ಟು? ಕರ್ನಾಟಕದಲ್ಲಿ ಮುಸ್ಲಿಮರ ಸಂಖ್ಯೆ 80 ಲಕ್ಷ ಇದ್ದಾರೆ ಆದರೆ ಒಬ್ಬೇ ಒಬ್ಬ ಮುಸ್ಲಿಂ ಕರ್ನಾಟಕದ ಮುಸ್ಲಿಮರನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವುದಿಲ್ಲ ಎಂದರೆ ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯದ ಸ್ಥಿತಿ ಏನೆಂದು ಅರ್ಥವಾಗುತ್ತದೆ. ಇಷ್ಟು ಮಾತ್ರವಲ್ಲದೆ ಆರು ಕೇಂದ್ರಾಡಳಿತ ಪ್ರದೇಶಗಳಿಂದಲೂ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲ ಎಂದು ಅಮಾನುಲ್ಲಾ ಖಾನ್ ಹೇಳಿದರು.

ಮುಸ್ಲಿಮರ ಬದುಕು ಸವಾಲಿನಿಂದ ಕೂಡಿದೆ, ಶಿಕ್ಷಣ, ಉದ್ಯೋಗ, ನೈಜವಾದ ಸಮಸ್ಯೆಗಳು ಆದರೆ ಇದರ ಚರ್ಚೆಯ ಅಗತ್ಯ ಎಲ್ಲರಿಗೂ ಇಲ್ಲ, ಅದರ ಚರ್ಚೆ ನಾವು ಪ್ರಾರಂಭ ಂಆಡಬೇಕಾಗಿದೆ ಎಂದು ಹೇಳಿದ ಅಮಾನುಲ್ಲಾ ಖಾನ್ ಶಿಕ್ಷಣದಲ್ಲಿ ಹಿಂದುಳಿದಿರುವಿಕೆಗೆ ಕಾರಣ ಏನು? ಎಂದು ಚರ್ಚಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಮುಸ್ಲಿಮರೆಲ್ಲರೂ ಮದ್ರಸಗಳಿಗೆ ಹೋಗುವ ಕಾರಣದಿಂದ ಅವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎನ್ನುವ ಸುಳ್ಳನ್ನು ಹರಿಯಬಿಡಲಾಗುತ್ತಿದೆ ಎಂದು ಹೇಳಿದ ಅಮಾನುಲ್ಲಾ ಖಾನ್ ಇದು ವಾಸ್ತವಿಕವಾಗಿ ಸುಳ್ಳಿನಿಂದ ಕೂಡಿದ್ದಾಗಿದೆ ಅದನ್ನು ಸಾಚಾರ್ ಸಮಿತಿ ಬಹಿರಂಗಪಡಿಸಿದೆ ಎಂದರು.

ದೇಶದಲ್ಲಿ ಒಟ್ಟು ಅಂದಾಜು 50 ಕೋಟಿ ಕಾರ್ಮಿಕರು ಇದ್ದಾರೆ, ಈ ಪೈಕಿ ಶೇಕಡಾ 7 ರಷ್ಟು ಸಂಘಟಿತ ವಲಯದ ಕಾರ್ಮಿಕರು ಮತ್ತು ಶೇಕಡಾ 93 ರಷ್ಟು ಅಸಂಘಟಿತ ವಲಯದಲ್ಲಿದ್ದಾರೆ, ಒಟ್ಟು ಅಸಂಘಟಿತ ಕಾರ್ಮಿಕರ ಶೇಕಡಾ 40 ರಷ್ಟು ಅಲ್ಪಸಂಖ್ಯಾತರಿದ್ದು ಇದರಲ್ಲಿ ಶೇಕಡಾ 60 ರಷ್ಟು ಮುಸ್ಲಿಮರೇ ಇದ್ದಾರೆ ಎಂಬ ಅಂಕಿ ಅಂಶಗಳನ್ನು ಅಮಾನುಲ್ಲಾ ಖಾನ್ ತೆರೆದಿಟ್ಟರು. ಅದೇ ರೀತಿ ಜೀವ ವಿಮಾ ಕ್ಷೇತ್ರದಲ್ಲಿ 1 ಲಕ್ಷ 16 ಸಾವಿರ ಜನ ಉದ್ಯೋಗಿಗಳಿದ್ದಾರೆ ಇದರಲ್ಲಿ ಶೇಕಡಾ 3 ರಷ್ಟು ಮುಸ್ಲಿಮರಿದ್ದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ – ರೈಲ್ವೆಯಲ್ಲಿ ಅನುಕ್ರಮವಾಗಿ ಶೇಕಡಾ 2 ರಷ್ಟು ಉದ್ಯೋಗಿಗಳಿದ್ದಾರೆ ಎಂದರು. ಅಲ್ಪಸಂಖ್ಯಾತರಿಗೆ ಯಾಕೆ ಈ ಕಾರಣಕ್ಕಾಗಿ ಮೀಸಲಾತಿ ಇರಬಾರದು ? ಎಂದು ಪ್ರಶ್ನಿಸಿದರು.

ಭಾರತದ ವಿಭಜನೆಯ ಕುರಿತಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದ ಅಮಾನುಲ್ಲಾ ಖಾನ್ ಮುಸ್ಲಿಮರ ಕುರಿತಾಗಿ ಆವತ್ತಿಗೆ ಸಂವಿಧಾನ ರಚನಾ ಸಮಿತಿಯಲ್ಲಿ ಸರಿಯಾದ ಚರ್ಚೆಗಳು ನಡೆದಿಲ್ಲ, ಅಂಬೇಡ್ಕರ್‍ರವರು ದಲಿತರ ಪ್ರಶ್ನೆಯನ್ನು ಚರ್ಚಿಸಿದಷ್ಟು ಮುಸ್ಲಿಮರ ಕುರಿತಾಗಿ ಚರ್ಚೆ ನಡೆಯಲೇ ಇಲ್ಲ ಎಂದು ವಿಷಾದಿಸಿದರು.
ರಾಜಕೀಯ ಬದಲಾದಾಗಲೂ ಭಾರತದ ಆರ್ಥಿಕ ನೀತಿಗಳು ಬದಲಾಗುವುದಿಲ್ಲ, ಉದಾಹರಣೆಗೆ ಆಧಾರ್ ಕಡ್ಡಾಯವನ್ನು ವಿರೋಧಿಸಿದ ಬಿಜೆಪಿ ಇವತ್ತು ಎಲ್ಲಾ ರಂಗಳಗಲ್ಲೂ ಅದನ್ನು ಕಡ್ಡಾಯಗೊಳಿಸುತ್ತಿದೆ ಎಂದ ಖಾನ್, ನವ ಉದಾರೀಕರಣ ಆರ್ಥಿಕ ನೀತಿಗಳಿಂದಾಗಿ ಮುಸ್ಲಿಂ ಬಾಹುಳ್ಯ ಉಳ್ಳ ಎಲ್ಲಾ ಕಾರ್ಖಾನೆಗಳೂ ನಶಿಸಿ ಹೋಗುತ್ತಿವೆ ಎಂದರು.

ಮಾಲ್ ಸಂಸ್ಕøತಿಯಿಂದಾಗಿ ಬೀದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಮರ ಅಂಗಡಿಗಳು ನೆಲಕ್ಕಚ್ಚುತ್ತಿವೆ, ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನೀತಿಗಳು ಒಂದೇ ಆಗಿವೆ ಎಂದರು.

ಇಸ್ಲಾಂಗೆ ಯಾಔಉದೇ ತೊಂದರೆಯಿಲ್ಲ, ಆ ರೀತಿಯಾಗಿ ಬಿಂಬಿಸಿ ಕೋಮು ರಾಜಕೀಯದ ಉದ್ಧೇಶವನ್ನು ಹೇಳಲಾಗುತ್ತಿದೆ ಎಂದ ಖಾನ್, ಟ್ರಿಪಲ್ ತಲಾಕಿನ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಧಾನ ಮಂತ್ರಿಗಳು ಮಹಿಳಾ ಕೋಡ್ ಬಿಲ್‍ನ ಬಗ್ಗೆ ಇದುವರೆಗೂ ಮಾತಾಡಲೇ ಇಲ್ಲ ಎಂದರು.

ಈ ಎಲ್ಲಾ ಕಾರಣಗಳಿಗಾಗಿ ಮುಸ್ಲಿಂ ಯುವಕರು ಇಂದು ಅವರಿಗೆ ಬೇಕಾದ ರಾಜನೀತಿ ಯಾವುದೆಂದು ಅವರೇ ರೂಪಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಭಾರತದ ವಭಜನೆಯಲ್ಲಿ ನಾವಿಲ್ಲದಿದ್ದರೂ ಆ ಸಮಸ್ಯೆ ಕುರಿತಾಗಿ ಮಾತನಾಡುವಾಗ ಆವತ್ತಿನ ಸಂದರ್ಭಗಳ ಇತಿಹಾಸವನ್ನು ತಿಳಿದು ಮುಂದಿನ ಚಳವಳಿಯ ಬಗ್ಗೆ ಚಿಂತಿಸಬೇಕಾಗಿದೆ ಎಂದು ಅಮಾನುಲ್ಲಾ ಖಾನ್ ಅಭಿಪ್ರಾಯಪಟ್ಟರು.


Spread the love

Exit mobile version