ಸರಕಾರಕ್ಕೆ ಜನರ ಸಂಕಷ್ಟ ಕಾಣಿಸುತ್ತಿಲ್ಲ, ಮೋದಿ ವರ್ಚಸ್ಸಿನದ್ದೆ ಚಿಂತೆ- ರಮಾನಾಥ ರೈ

Spread the love

ಸರಕಾರಕ್ಕೆ ಜನರ ಸಂಕಷ್ಟ ಕಾಣಿಸುತ್ತಿಲ್ಲ, ಮೋದಿ ವರ್ಚಸ್ಸಿನದ್ದೆ ಚಿಂತೆ- ರಮಾನಾಥ ರೈ

ಮಂಗಳೂರು: ಕೊರೋನಾ ಸೋಂಕಿನಿಂದಾಗಿ ಜನರು ಎಲ್ಲ ರೀತಿಯಿಂದಲೂ ಸಂಕಷ್ಟ ಎದುರಿಸುತ್ತಿದ್ದರೂ ಸರಕಾರ ನಡೆಸುತ್ತಿರುವ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕುಸಿಯುತ್ತಿರುವ ವರ್ಚಿಸ್ಸಿನ ಚಿಂತೆಯಾಗಿದೆ ಹೊರತು ಜನರ ಸಂಕಷ್ಟಕ್ಕೆ ನೆರವಾಗುವುದಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಟೀಕಿಸಿದ್ದಾರೆ.

ಅವರು ಸೋಮವಾರ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೊರೊನಾ ಸೋಂಕಿತರಿಗೆ ಸೂಕ್ತವಾದ ವೈದ್ಯಕೀಯ ಸೌಲಭ್ಯ ದೊರೆಯುತ್ತಿಲ್ಲ. ಸೂಚಿತ ವಯೋಮಾನದವರಿಗೆ ಸಾಕಷ್ಟು ಕೋವಿಡ್ ನಿರೋಧಕ ಲಸಿಕೆ ನೀಡುತ್ತಿಲ್ಲ. ಕೊರೋನಾ ನಿಯಂತ್ರಣಕ್ಕಾಗಿ ಹೇರಲಾದ ಲೌಕ್ ಡೌನಿನಿಂದಾಗಿ ಬಡ, ಕಾರ್ಮಿಕ ಮತ್ತು ಮಧ್ಯಮ ವರ್ಗದ ಜನರಿಗೆ ಜೀವನೋಪಾಯದ ಸಮಸ್ಯೆಯಾಗಿದೆ. ಜನರು ಸೂಕ್ತ ವೈದ್ಯಕೀಯ ಸೌಲಭ್ಯ ದೊರೆಯದೆ ಸಾಲು ಸಾಲು ಮಂದಿ ಸಾಯುತ್ತಿದ್ದರೆ ಸರಕಾರದ ವೈಫಲ್ಯದಿಂದ ಪ್ರಧಾನಿಯವರ ಇಮೇಜಿಗೆ ಧಕ್ಕೆಯಾಗಿದ್ದು, ಅವರ ವರ್ಚಸ್ಸಿನ ಬಗ್ಗೆ ಚಿಂತಿತರಾಗಿದ್ದೆ ಎಂದು ಹೇಳಿದರು.

ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ಸಿನವರು ಬಿಟ್ಟು ಹೋಗಿರುವುದರ ಕಾರಣ ಎಂದು ಸಂಸದರೊಬ್ಬರು ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಸರಕಾರಿ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಗುತ್ತಿಗೆದಾರ ಓಡಿ ಹೋದಾಗ ರಾಜ್ಯ ಸರಕಾರ ಮತ್ತು ಎಂಆರ್ ಪಿಎಲ್ ಅನುದಾನದೊಂದಿಗೆ ಕಟ್ಟಡ ನಿರ್ಮಾಣ ಮಾಡಿರುವುದು ಕಾಂಗ್ರೆಸ್ ಸರಕಾರ. ಮಾತ್ರವಲ್ಲದೆ, ವೆನ್ ಲಾಕ್ ಆಸ್ಪತ್ರೆಯ ಹೊಸ ಬ್ಲಾಕುಗಳು ಸೇರಿದಂತೆ ಜಿಲ್ಲೆಯಲ್ಲಿ ಹಲವು ಸರಕಾರಿ ಆಸ್ಪತ್ರೆಗಳಿಗೆ ಕಟ್ಟಡ ನಿರ್ಮಾಣ ಮಾಡಿರುವುದು ಕಾಂಗ್ರೆಸ್ ಸರಕಾರ ಎಂಬುದನ್ನು ಸಂಸದರ ಗಮನಕ್ಕೆ ತರವು ಬಯಸುತ್ತೇನೆ ಎಂದರು.

ಕಾಂಗ್ರೆಸ್ ಸರಕಾರ ಇದ್ದರೆ ಪೆಟ್ರೋಲ್ , ಡೀಸೆಲ್ ಸಹಿತ ಎಲ್ಲ ಆವಶ್ಯ ಸಾಮಾಗ್ರಿಗಳ ಬೆಲೆ ಕಡಿಮೆ ಆಗಿರುತಿತ್ತು. ಅಗತ್ಯವಿದ್ದರೆ ಕೊರೊನಾ ಸಂದರ್ಭದಲ್ಲಿ ಪಡಿತರ ವಿತರಿಸಲಾಗುತಿತ್ತು. ವೈದ್ಯಕೀಯ ಸೌಲಭ್ಯಗಳ ನಿರ್ವಹಮೆ ಇನ್ನೂ ಚೆನ್ನಾಗಿ ಮಾಡಲಾಗುತಿತ್ತು ಎಂದು ಕಾಂಗ್ರೆಸ್ ಇದ್ದರೆ ಏನು ಮಾಡುತಿತ್ತು ಎಂಬ ಪ್ರಶ್ನೆಗೆ ರಮಾನಾಥ ರೈ ಉತ್ತರಿಸಿದರು. ಕೊರೊನಾದಂತಹ ಸಂಕಷ್ಟ ಕಾಲದಲ್ಲೂ ಸರಕಾರ ಬೆಲೆ ಏರಿಕೆಗೆ ಆಸ್ಪದ ಮಾಡುತ್ತಿದೆ ಎಂದು ಟೀಕಿಸಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕೊರೋನಾ ಲಾಕ್ ಡೌನಿನಿಂದಾಗಿ ಜನರಿಗೆ ಸಂಕಷ್ಟ ಆಗಿದ್ದು, ಸರಕಾರ ಸೂಕ್ತ ಪ್ಯಾಕೇಜ್ ವಿತರಣೆ ಮಾಡಬೇಕೆಂದು ಎಂದು ಒತ್ತಾಯಿಸಿದರು.

ಮಲೆನಾಡು ಮತ್ತು ಕರಾವಳಿಯ ಗ್ರಾಮೀಣ ಪ್ರದೇಶದ ಜನತೆ ವಾಹನ ನಿಷೇಧ ನಿಯಮಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಗುಡ್ಡಗಾಡು ಪ್ರದೇಶದ ಜನರಿಗೆ ಸರಕಾರವೇ ಜೀವನಾವಶ್ಯ ಸಾಮಾಗ್ರಿಗಳನ್ನು ವಿತರಿಸಬೇಕು. ಕೊರೊನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ದಾದಿಯರಿಗೆ ಮಾಸಿತ ವೇತನ ಪಾವತಿ ಮಾಡಬೇಕು ಎಂದವರು ಆಗ್ರಹಿಸಿದರು.

ಜಿಲ್ಲೆಯಲ್ಲಿ ವಾಹನ ಜಫ್ತಿ ವಿಚಾರದಲ್ಲಿ ಕಾನೂನು ಕಟ್ಟಲೆಗಳ ಬಗ್ಗೆ ಜನಜಾಗೃತಿ ಮೂಡಿಸದೆ ವಾಹನ ಜಫ್ತಿ ಮಾಡುತ್ತಿರುವುದು ಸರಿಯಲ್ಲ ಎಂದವರು, ಈ ರೀತಿ ಜಪ್ತಿ ಮಾಡಲಾದ ವಾಹನಗಳನ್ನು ಪೊಲೀಸ್ ಠಾಣೆಯಲ್ಲೇ ಬಿಡುಗಡೆ ಮಾಡಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಮೂರು ಸಾವಿರ, ರಾಜ್ಯದಲ್ಲಿ 50 ಸಾವಿರಕ್ಕಿಂತಲೂ ಹೆಚ್ಚು ವಾಹನಗಳನ್ನು ಜಫ್ತಿ ಮಾಡಲಾಗಿದ್ದು, ಸಾಂಕ್ರಾಮಿಕ ರೋಗ ಕಾಯಿದೆಯಡಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಇದರಿಂದ ಜನರಿಗೆ ಸಮಸ್ಯೆ ಆಗಲಿದೆ ಎಂದು ಅವರು ಹೇಳಿದರು.

ಭೀತಿಯಲ್ಲಿ ಲಸಿಕೆ:
ಜನರು ಇಂದು ಭೀತಿಯಿಂದ ಲಸಿಕೆ ಹಾಕಿಕೊಳ್ಳು ಮುಂದಾಗಿದ್ದಾರೆ. ಹೀಗಾಗಬಾರದಿತ್ತು. ಜನರಲ್ಲಿ ಆತ್ಮ ವಿಶ್ವಾಸ ಮತ್ತು ಧೈರ್ಯ ಮೂಡಿಸಿ ಲಸಿಕೆ ಅಭಿಯಾನ ಮಾಡಬೇಕಿತ್ತು. ಮೊದಲು ಡಿ ಗ್ರೂಪ್ ಸಿಬ್ಬಂದಿಗೆ ಕೊಡುವ ಬದಲು ಸಚಿವರು, ಶಾಸಕರ ಸಹಿತ ವೈದ್ಯಕೀಯ ಕ್ಷೇತ್ರದ ವಿಐಪಿಗಳಿಗೆ ಲಸಿಕೆ ನೀಡುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ನಾವು ಅಂದೇ ಹೇಳಿದ್ದೆ. ಈಗ ಜನರು ಲಸಿಕೆ ಪಡೆಯಲು ಮುಂದೆ ಬಂದಾಗ ಲಸಿಕೆಯನ್ನು ಪೂರೈಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಮಾಜಿ ಆರೋಗ್ಯ ಸಚಿವ, ಶಾಸಕ ಯು.ಟಿ.ಖಾದರ್ ಹೇಳಿದರು.

ಮೊದಲು ಕೇವಲ ಲಸಿಕೆಗೆ ಮಾತ್ರ ಅನುಮತಿ ನೀಡಲಾಗಿತ್ತು. ಈಗ ಮೂರನೇ ಲಸಿಕೆಗೆ ಅವಕಾಶ ನೀಡಲಾಗಿದೆ. ವಿಶ್ವದಲ್ಲಿ ಲಭ್ಯವಿರುವ ಎಲ್ಲ ಉತ್ತಮ ಲಸಿಕೆಗಳಿಗೆ ಅವಕಾಶ ನೀಡಬೇಕಾಗಿತ್ತು. ದೇಶದಲ್ಲಿ ಲಸಿಕೆ ಉತ್ಪಾದನೆ ಮಾಡುತ್ತಿದ್ದ ಉದ್ಯಮಿಯನ್ನು ಬೆದರಿಸಿದ ಪರಿಣಾಮ ಆತ ದೇಶ ಬಿಟ್ಟು ಇಂಗ್ಲೆಂಡಿಗೆ ಪರಾರಿಯಾಗಿದ್ದಾನೆ ಎಂದು ಖಾದರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಮಾಜಿ ಶಾಸಕರಾದ ಜೆ.ಆರ್.ಲೋಬೊ ಮತ್ತು ಮೋಯ್ದೀನ್ ಬಾವ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನ್ ಜಿಲ್ಲಾ ಅಧ್ಯಕ್ಷ ಶುಬೋದಯ ಆಳ್ವ, ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಉಪಸ್ಥಿತರಿದ್ದರು.


Spread the love

2 Comments

  1. Complaint is Modi can’t see. So the answer is Ramanath Rai and Congress can see. 70 years of loot. Instead of complaining please distribute fraction of your loot throught India. Definitely Congress will be back to centre in 2024. Charity is important not complaining like children

Comments are closed.