Home Mangalorean News Kannada News ಸರಕಾರಿ ಮಹಿಳಾ ಐ.ಟಿ.ಐ ಪ್ರವೇಶ: ಅರ್ಜಿ ಆಹ್ವಾನ 

ಸರಕಾರಿ ಮಹಿಳಾ ಐ.ಟಿ.ಐ ಪ್ರವೇಶ: ಅರ್ಜಿ ಆಹ್ವಾನ 

Spread the love

ಸರಕಾರಿ ಮಹಿಳಾ ಐ.ಟಿ.ಐ ಪ್ರವೇಶ: ಅರ್ಜಿ ಆಹ್ವಾನ 

ಮಂಗಳೂರು: ಸರಕಾರಿ ಐ.ಟಿ.ಐ ಗಳಿಗೆ ಆಗಸ್ಟ್ 2026 ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಸರಕಾರಿ ಐ.ಟಿ.ಐ, (ಮಹಿಳಾ) ಮಂಗಳೂರು ಸಂಸ್ಥೆಯಲ್ಲಿ ಲಭ್ಯವಿರುವ ಕೋರ್ಸುಗಳಲ್ಲಿ ಪ್ರವೇಶ ಬಯಸುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್  ಮೂಲಕ ಅಥವಾ ಖುದ್ದಾಗಿ ಸಂಸ್ಥೆಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು. ಮೇ 8 ಅರ್ಜಿ ಸಲ್ಲಿಸಲು ಕೊನೆಯ ದಿನ.

ಕೋರ್ಸ್, ತರಬೇತಿ ಅವಧಿ ಮತ್ತು ಲಭ್ಯವಿರುವ ಸೀಟ್ ವಿವರ: ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪೆÇ್ರೀಗ್ರಾಮಿಂಗ್ ಅಸಿಸ್ಟೆಂಟ್- 1 ವರ್ಷ ತರಬೇತಿ ಅವಧಿ (48 ಸೀಟ್), ಎಲೆಕ್ಟ್ರಾನಿಕ್ ಮೆಕಾನಿಕ್-2 ವರ್ಷ (48), ಎಲೆಕ್ಟ್ರಿಷಿಯನ್- 2 ವರ್ಷ (20), ರೆಫ್ರಿಜರೇಷನ್ ಆ್ಯಂಡ್ ಏರ್ ಕಂಡೀಶನ್ ಟೆಕ್ನಿಷಿಯನ್ -2 ವರ್ಷ(24), ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ -2 ವರ್ಷ (24), ಸಿ.ಎನ್.ಸಿ ಮೆಷಿನಿಂಗ್ ಟೆಕ್ನಿಷಿಯನ್- 2 ವರ್ಷ (24), ವರ್ಚುವಲ್ ಅನಾಲಿಸಿಸ್ ಆ್ಯಂಡ್ ಡಿಸೈನರ್ ಎಫ್.ಇ.ಎಂ- 2 ವರ್ಷ (24), ಇಂಡಸ್ಟ್ರಿಯಲ್ ರೋಬೋಟಿಕ್ಸ್ ಆ್ಯಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಿಷಿಯನ್ 1 ವರ್ಷ (20), ಮ್ಯಾನುಫ್ಯಾಕ್ಚರಿಂಗ್ ಪೆÇ್ರೀಸೆಸ್ ಕಂಟ್ರೋಲ್ ಆ್ಯಂಡ್ ಆಟೋಮೇಷನ್- 1 ವರ್ಷ (20), ಇಂಜಿನಿಯರಿಂಗ್ ಡಿಸೈನ್ ಟೆಕ್ನಿಷಿಯನ್- 1 ವರ್ಷ (20).

ಹೆಚ್ಚಿನ ಮಾಹಿತಿಗೆ ಸಂಸ್ಥೆಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 9880119147, 9448858417, 9620766870 ಮೂಲಕ ಸಂಪರ್ಕಿಸಬಹುದು ಎಂದು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version