Home Mangalorean News Kannada News ಸರಣಿ ಶೂಟೌಟ್ ಪ್ರಕರಣ: ಕಲಿ ಯೋಗಿಶನ ಸಹಚರನ ಬಂಧನ

ಸರಣಿ ಶೂಟೌಟ್ ಪ್ರಕರಣ: ಕಲಿ ಯೋಗಿಶನ ಸಹಚರನ ಬಂಧನ

Spread the love

ಸರಣಿ ಶೂಟೌಟ್ ಪ್ರಕರಣ: ಕಲಿ ಯೋಗಿಶನ ಸಹಚರನ ಬಂಧನ

ಮಂಗಳೂರು: ನಗರದಲ್ಲಿ ಭೂಗತ ಪಾತಕಿ ಕಲಿ ಯೋಗಿಶನ ಸಹಚರರಿಂದ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಬಂಧಿತನ್ನನ್ನು ಮುಲ್ಕಿ ಚಿತ್ರಾಫು ನಿವಾಸಿ ತೇಜ್ ಪಾಲ್ (33) ಎಂದು ಗುರುತಿಸಲಾಗಿದೆ.
ಮಂಗಳೂರು ನಗರದಲ್ಲಿ ಇತ್ತೀಚೆಗೆ ಭೂಗತ ಪಾತಕಿ ಕಲಿ ಯೋಗಿಶ ತನ್ನ ಸಹಚರರಿಂದ ನಡೆಸಿದ ಸರಣಿ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೋಲಿಸ್ ನೀರಿಕ್ಷಕ ಶಾಂತರಾಮ್ ಅವರ ನೇತೃತ್ವದಲ್ಲಿ ಆರೋಪಿನ್ನು ಬಂಧಿಸಿದ್ದು, ಆತನಿಂದ 2 ಮೊಬೈಲ್ ಫೋನ್ ವಶಪಡಿಸಕೊಳ್ಳಲಾಗಿದೆ.

ಈಗಾಗಲೇ ಸಿಸಿಬಿ ಪೊಲೀಸರು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗಿಶನ ಸಹಚರರಾದ ಮನೋಜ್ ಕುಮಾರ್ ಮತ್ತು ಚಂದ್ರಶೇಖರ ಎಂಬವರನ್ನು ವಶಕ್ಕೆ ಪಡೆದುಕೊಂಡು 2 ಪಿಸ್ತೂಲ್ ಹಾಗೂ 7 ಸಜೀವ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.


Spread the love

Exit mobile version