Home Mangalorean News Kannada News ಸರ್ವಜನೋತ್ಸವ: ಅಮೃತ್ ಶೆಣೈ, ದಿನೇಶ್ ಅಮೀನ್ ಮಟ್ಟು ಸಹಿತ ಐವರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆ...

ಸರ್ವಜನೋತ್ಸವ: ಅಮೃತ್ ಶೆಣೈ, ದಿನೇಶ್ ಅಮೀನ್ ಮಟ್ಟು ಸಹಿತ ಐವರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ

Spread the love

ಸರ್ವಜನೋತ್ಸವ: ಅಮೃತ್ ಶೆಣೈ, ದಿನೇಶ್ ಅಮೀನ್ ಮಟ್ಟು ಸಹಿತ ಐವರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ

ಉಡುಪಿ: ‘ಉಡುಪಿ ಸಹಬಾಳ್ವೆ’ ನೇತೃತ್ವದಲ್ಲಿ ಮಾರ್ಚ್ 17ರಂದು ನಡೆದ ಸರ್ವ ಜನೋತ್ಸವದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಪ್ರಚಾರ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಚೋದನಕಾರಿ ಭಾಷಣ ಮಾಡಿದ್ದ ಸಹಬಾಳ್ವೆ ಉಡುಪಿ ಅಧ್ಯಕ್ಷ ಸಹಿತ ಐವರ ಮೇಲೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಫ್ಲೈಯಿಂಗ್ ಸ್ಕ್ವಾಡ್ ತಂಡ 2 ರ ಅಧಿಕಾರಿ ಕೆ.ವಿ.ನಾಗರಾಜ್ ಅವರು ಸಲ್ಲಿಸಿದ ದೂರಿನ ಸಾರಾಂಶದಂತೆ ಮಾರ್ಚ್ 17 ರಂದು ಮಧ್ಯಾಹ್ನ 03:00 ಗಂಟೆಯಿಂದ ಸಂಜೆ 7:30 ಗಂಟೆಯವರೆಗೆ ರಾಯಲ್ ಗಾರ್ಡನ್ ಮೈದಾನದಲ್ಲಿ ಸಹಬಾಳ್ವೆ ಎಂಬ ಕಾರ್ಯಕ್ರಮವು ಅಮೃತ ಶೆಣ್ಣೆರವರ ನೇತ್ರತ್ವದಲ್ಲಿ ನಡೆದಿದ್ದು, ಸಭೆಯ ಕಾರ್ಯಕ್ರಮದಲ್ಲಿ ದಿನೇಶ್ ಅಮೀನ್ ಮಟ್ಟು, ಮಹೇಂದ್ರ ಕುಮಾರ್, ಜಿ. ಎನ್ ನಾಗರಾಜ್, ಇಂದೊಧರ ಹೊನ್ನಾಪುರರವರುಗಳು ತಮ್ಮ ಭಾಷಣದಲ್ಲಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಹಾಗೂ ಮತದಾರರ ಮೇಲೆ ಪ್ರಭಾವ ಬೀರುವಂತೆ ಮುಂಬರುವ ಚುನಾವಣೆಯಲ್ಲಿ ಮತದಾರರು ಯೋಚಿಸಿ ಮತ ಚಲಾಯಿಸಿವಂತೆ ಕರೆ ನೀಡಿದ್ದು ಅಲ್ಲದೇ ಕಾರ್ಯಕ್ರಮಕ್ಕೆ ಅನುಮತಿ ಪಡೆದ ಅಮೃತ ಶೆಣೈ ಉಡುಪಿರವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ.

ಈ ಕುರಿತು ಉಡುಪಿ ನಗರ ಠಾಣಾ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


Spread the love

Exit mobile version