ಸಾಮಾಜಿಕ ಜಾಲತಾಣಗಳಲ್ಲಿ ಮುದರಂಗಡಿ ಗ್ರಾಪಂ ಅಧ್ಯಕ್ಷ ಡೇವಿಡ್ ವಿರುದ್ದ ಅವಹೇಳನ – ಜೊಯೇಲ್, ಫ್ಲೇವಿಯಾ ವಿರುದ್ದ ದೂರು
ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ್ದಕ್ಕಾಗಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ ಉಡುಪಿ ಅವರು ಕುತ್ಯಾರ್ ನಿವಾಸಿ ಜೊಯೇಲ್ ಮಥಾಯಸ್ ಮತ್ತು ಪಿಲಾರ್ ನಿವಾಸಿ ಫ್ಲೇವಿಯಾ ಮಥಾಯಾಸ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂಥೆ ಶಿರ್ವ ಪೊಲೀಸರಿಗೆ ಆದೇಶಿಸಿದ್ದಾರೆ
ಶಿರ್ವ ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ|ಮಹೇಶ್ ಡಿಸೋಜಾ ಅವರ ಸಾವಿನ ಕುರಿತು ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಡೇವಿಡ್ ಡಿ’ಸೋಜಾ ಮತ್ತು ಅವರ ಮಗ ಡಾಯ್ಸನ್ ಡಿಸೋಜಾ ವಿರುದ್ದ ಜೊಯೇಲ್ ಮಥಾಯಸ್ ಮತ್ತು ಫ್ಲೇವಿಯಾ ಮಥಾಯಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ್ದಾರೆ. ಅಲ್ಲದೆ ಅವರ ವಿರುದ್ದ ಸುಳ್ಳು ಮಾಹಿತಿಗಳನ್ನು ಹರಿಯಬಿಟ್ಟಿದ್ದು ಇದರಿಂದ ತನ್ನ ಹಾಗೂ ಮಗನ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ನ್ಯಾಯಾಲಯ ನಿವಾಸಿ ಜೊಯೇಲ್ ಮಥಾಯಸ್ ಮತ್ತು ಪಿಲಾರ್ ನಿವಾಸಿ ಫ್ಲೇವಿಯಾ ಮಥಾಯಾಸ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂಥೆ ಶಿರ್ವ ಪೊಲೀಸರಿಗೆ ಆದೇಶಿಸಿದ್ದಾರೆ