ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಬರಹ – ಪ್ರಕರಣ ದಾಖಲು
ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾದ ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ “ಮಂಗಳೂರು ಮುಸ್ಲಿಮ್ ಯುವಸೇನೆ” ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಪ್ರಚೋದನಕಾರಿ ಸಂದೇಶವನ್ನು ವಾಟ್ಸ್ ಆಪ್ ಗ್ರೂಫ್ ನಲ್ಲಿ ಫಾರ್ವಡ್ ಮಾಡಿದ್ದ ಆಧಾರದಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 78/2025 ಕಲಂ. 353(2) ಭಾರತೀಯ ನ್ಯಾಯ ಸಂಹಿತೆ ಯಂತೆ ಪ್ರಕರಣ ದಾಖಲಿಸಿದ್ದು, ಸದ್ರಿ ಪ್ರಕರಣವನ್ನು ಮುಂದಿನ ತನಿಖೆಯ ಸಲುವಾಗಿ ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಸದ್ರಿ ಪ್ರಕರಣದಲ್ಲಿ ತನಿಖೆ ಕೈಗೊಂಡು ಪ್ರಚೋದನಕಾರಿಯಾದ ಸಂದೇಶವನ್ನು ವಾಟ್ಸಪ್ ಗ್ರೂಪ್ ನಲ್ಲಿ ಫಾರ್ವಡ್ ಮಾಡಿದ್ದ ವ್ಯಕ್ತಿಯಾದ ಮೊಹಮ್ಮದ್ ಆನಾಸ್, ವಿಟ್ಲ ದಕ್ಷಿಣ ಕನ್ನಡ ಎಂಬಾತನನ್ನು ಪತ್ತೆ ಮಾಡಿದ್ದು ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಮುಂದುವರೆಸಲಾಗಿದೆ.