
Spread the love
ಸಿದ್ದರಾಮಯ್ಯರಿಂದ ಸ್ಪರ್ಧೆಗೆ ಕ್ಷೇತ್ರ ಹುಡುಕಾಟ : ಶ್ರೀನಿವಾಸ್ ಪ್ರಸಾದ್
ಚಾಮರಾಜನಗರ: ಮುಂದಿನ ವಿಧಾನ ಸಭೆಯಲ್ಲಿ ಸ್ಪರ್ಧೆ ಮಾಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜಕೀಯ ಪುನರ್ಜನ್ಮ ನೀಡಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುಂಡ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ ತೆರಳಿ ಅಲ್ಪ ಮತಗಳ ಅಂತರದಲ್ಲಿ ಗೆಲುವು ಕಂಡರು. ಇದೀಗ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಈಗಿನಿಂದಲೇ ಕ್ಷೇತ್ರದ ಹುಡುಕಾಟ ನಡೆಸುತ್ತಿದ್ದಾರೆ. ಇದೊಂದು ವಿಪರ್ಯಾಸದ ಸಂಗತಿ ಎಂದು ಗೇಲಿ ಮಾಡಿದರು.
ಸಿದ್ದರಾಮಯ್ಯ ಈ ಹಿಂದೆ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಿದ್ದರು ಅದನ್ನು ಮರೆತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
Spread the love
ಅಹಿಂದ ತುತ್ತೂರಿ ಊದುತ್ತಲೇ ಇರುವ ಇವರು ಅಲ್ಪ ಸಂಖ್ಯಾತರನ್ನಾಗಲಿ ದಲಿತರನ್ನಾಗಲೀ ಮುಖ್ಯಮಂತ್ರಿ ಮಾಡುವ ಆಲೋಚನೆಯನ್ನು ಕನಸಿನಲ್ಲಿಯೂ ಮಾಡುವುದಿಲ್ಲ .ಪುನಃ ತಾನೇ ಮು ಮಂತ್ರಿ ಆಗಬೇಕಂತೆ. ಸರ್ಕಾರದ ಬೊಕ್ಕಸದಿಂದ ಅಕ್ಕಿ ಕೋಟ್ಟು ತಾನೇ ನೀಡಿದೆ ಎನ್ನುತ್ತಾರಲ್ಲ ! ತೆರಿಗೆ ನೀಡಿದ ದಾತರು ಏನು ಹಾಗಾದರೆ?