Home Mangalorean News Kannada News ಸಿದ್ದರಾಮಯ್ಯ, ಮೊಯ್ದಿನ್ ಬಾವಾ ಸಾಧನೆ ಮನೆ ಮನೆಗೆ ತಲುಪಿಸಿ:ದೇವಿಪ್ರಸಾದ್ ಶೆಟ್ಟಿ

ಸಿದ್ದರಾಮಯ್ಯ, ಮೊಯ್ದಿನ್ ಬಾವಾ ಸಾಧನೆ ಮನೆ ಮನೆಗೆ ತಲುಪಿಸಿ:ದೇವಿಪ್ರಸಾದ್ ಶೆಟ್ಟಿ

Spread the love

ಸಿದ್ದರಾಮಯ್ಯ, ಮೊಯ್ದಿನ್ ಬಾವಾ ಸಾಧನೆ ಮನೆ ಮನೆಗೆ ತಲುಪಿಸಿ:ದೇವಿಪ್ರಸಾದ್ ಶೆಟ್ಟಿ

ಮಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಕಾಂಗ್ರೆಸ್‌ನ ಬೂತ್ ಮಟ್ಟದ ಸಭೆ ಜರಗಿತು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಬೆಳಪು ದೇವಿ ಪ್ರಸಾದ್ ಶೆಟ್ಟಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಶಾಸಕ ಮೊಹಿಯುದ್ದೀನ್ ಬಾವಾ ಅವರ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಕಾರ‍್ಯಕರ್ತರು ಶ್ರಮಿಸಬೇಕಿದೆ ಎಂದರು.

ರಾಜ್ಯದ ಪ್ರಗತಿ ಹಾಗೂ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಸರಕಾರ ಅನಿವಾರ‍್ಯವಾಗಿದೆ. ಕಳೆದ ಐದು ವರ್ಷದಲ್ಲಿ ಗಣನೀಯ ಪ್ರಗತಿಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಲಾಗಿದೆ. 10 ಸಾವಿರಕ್ಕೂ ಅಧಿಕ ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಲಾಗಿದೆ ಎಂದು ಮೊಹಿಯುದ್ದೀನ್ ಬಾವಾ ಕಾರ‍್ಯಕರ್ತರಿಗೆ ಕರೆ ನೀಡಿದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ, ಕಾರ್ಪೊರೇಟರ್ ಹರಿನಾಥ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಎಂ.ರಾಮಚಂದ್ರ ,ಸುಮಂತ್ ರಾವ್ , ಶಕುಂತಳಾ ಕಾಮತ್ ,ಗಿರೀಶ್ ಆಳ್ವ ,ರಾಜೇಶ್ ಕುಳಾಯಿ,ನವೀನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version