Home Mangalorean News Kannada News ಸಿ.ಬಿ.ಎಸ್.ಇ ಪ್ರಶ್ನಾಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುದನ್ನು ನಿಲ್ಲಿಸಿ – ಎಸ್.ಐ.ಓ ಉಡುಪಿ ಜಿಲ್ಲೆ ಆಗ್ರಹ

ಸಿ.ಬಿ.ಎಸ್.ಇ ಪ್ರಶ್ನಾಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುದನ್ನು ನಿಲ್ಲಿಸಿ – ಎಸ್.ಐ.ಓ ಉಡುಪಿ ಜಿಲ್ಲೆ ಆಗ್ರಹ

Spread the love

ಸಿ.ಬಿ.ಎಸ್.ಇ ಪ್ರಶ್ನಾಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುದನ್ನು ನಿಲ್ಲಿಸಿ – ಎಸ್.ಐ.ಓ ಉಡುಪಿ ಜಿಲ್ಲೆ ಆಗ್ರಹ

ಉಡುಪಿ: ಇದೀಗ ಪ್ರಶ್ನಾ ಪತ್ರಿಕೆ ಸೋರಿಕೆ ಮತ್ತೊಮ್ಮೆ ಸುದ್ದಿಗೆ ಬಂದಿದ್ದು, ವಿದ್ಯಾರ್ಥಿಗಳನ್ನು ತಲ್ಲಣಗೊಳಿಸಿದೆ. ಸಿಬಿಎಸ್ಸಿ ಪಿಯುಸಿ ವಿದ್ಯಾರ್ಥಿಗಳ ಎಕಾನಮಿಕ್ಸ್ ಪಶ್ನಾ ಪತ್ರಿಕೆ ಹಾಗೂ ಹತ್ತನೆ ತರಗತಿಯ ಗಣಿತ ಪ್ರಶ್ನಾಪತ್ರಿಕೆ ಸೋರಿಕೆಯಾಗಿದ್ದು ಪದೇ ಪದೇ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ಬೇಜಾಬ್ದಾರಿಗೆ ಬಲಿಯಾಗುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಎಸ್.ಐ.ಓ ಕಳವಳ ವ್ಯಕ್ತಪಡಿಸಿದೆ.

ಶ್ರಮ ಪಟ್ಟು ಓದಿ ಪರೀಕ್ಷೆ ಬರೆದಿರುವ ಪ್ರಮಾಣಿಕ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯುವಂತಾಗಿದೆ. ಕಳೆದ ಬಾರಿ ರಾಜ್ಯದಲ್ಲಿ ಪ್ರಶ್ನಾ ಪತ್ರಿಕೆ ಸೋರಿಕೆಯಾಗಿ ತಲ್ಲಣ ಎಬ್ಬಿಸಿತ್ತು. ಈ ಬಾರಿ ಕೇಂದ್ರದಲ್ಲಿ ಪ್ರಶ್ನಾ ಪತ್ರಿಕೆ ಸೋರಿಕೆಯಾಗಿರುವುದು ನಿಜಕ್ಕೂ ಖೇದಕರ.

ಈ ಪ್ರಶ್ನಾ ಪತ್ರಿಕೆ ಸೋರಿಕೆಗೆ ಮುಖ್ಯವಾಗಿ ನಾಯಿಕೊಡೆಗಳಂತೆ ಹುಟ್ಟುಕೊಳ್ಳುತ್ತಿರುವ ಟ್ಯೂಷನ್ ಸೆಂಟರ್ ಗಳು, ಟ್ಯೂಟರಿಲ್ ಗಳು ಕೂಡ ಕಾರಣವಾಗಿದೆ. ಹಣದ ಆಸೆಗಾಗಿ ಅಧಿಕಾರಿಗಳು ಕೂಡ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದ್ದಾರೆ. ಈ ಬಗ್ಗೆ ಈ ಕೂಡಲೇ ನಿಕ್ಷಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಹಾಗೂ ಮುಂದಿನ ದಿನಗಳಲ್ಲಿ ಸೋರಿಕೆ ತಡೆ ಗಟ್ಟಿ ವಿದ್ಯಾರ್ಥಿಗಳ ಭವಿಷ್ಯವನ್ನು ಸಂರಕ್ಷಿಸಬೇಕಾಗಿ ಎಸ್ ಐ ಓ ಉಡುಪಿ ಜಿಲ್ಲೆ ಆಗ್ರಹಿಸುತ್ತದೆಂದು ಪ್ರಕಟಣೆಯಲ್ಲಿ ತಿಳಿಸಿದೆ.


Spread the love

Exit mobile version